ತಂತ್ರಜ್ಞಾನ ನಾಯಕರ ಪಟ್ಟಿಯಲ್ಲಿ ‘ಕೂ’ ಸಹ-ಸಂಸ್ಥಾಪಕನಿಗೆ ಸ್ಥಾನ!

ಬೆಂಗಳೂರು : ಸ್ಥಳೀಯ ಭಾಷೆಗಳಲ್ಲಿ ಕಥೆ, ಕವನ, ಸೇರಿದಂತೆ ಹಲವಾರು ಸ್ವಯಂ ಅಭಿವ್ಯಕ್ತಿಯನ್ನು ಬಿಂಬಿಸುತ್ತಿದ್ದ ಕೂ ವೇದಿಕೆಯ ಮೌಲ್ಯಯುತವಾದ ವಿಚಾರಗಳು ಸಾಕಷ್ಟು ಜನರ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುವುದರ ಜೊತೆಗೆ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ನವೀನ ಆವಿಷ್ಕಾರವೆಂದು ಗುರುತಿಸಲ್ಪಟ್ಟ ಕಾರಣ ‘ಕೂ’ ಸಹ-ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣರವರು 100 ಜಾಗತಿಕ ತಂತ್ರಜ್ಞಾನ ನಾಯಕರ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಲಾಭರಹಿತ ಪತ್ರಿಕೋದ್ಯಮ ಸಂಸ್ಥೆಯಾದ ರೆಸ್ಟ್ ಆಫ್ ದಿ ವರ್ಲ್ಡ್(RoW) ನಿಂದ ಬೆಂಗಳೂರು ಮೂಲದ ‘ಕೂ’ ಅಪ್ಲಿಕೇಶನ್ ಸಹ-ಸಂಸ್ಥಾಪಕ ಮತ್ತು ಸಿಇಓ ಅಪ್ರಮೇಯ ರಾಧಾಕೃಷ್ಣ ಅವರು ಟಾಪ್ 100 ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಗ್ಲೋಬಲ್ ಟೆಕ್ಸ್ ಚೇಂಜ್ ಮೇಕರ್ಸ್’ನ ಸಂಸ್ಕೃತಿ ಮತ್ತು ಸಾಮಾಜಿಕ ಮಾಧ್ಯಮ’ ವಿಭಾಗದಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಉದ್ಯಮಿ ‘ಕೂ’ ವೇದಿಕೆಯ ಅಪ್ರಮೇಯ ರಾಧಾಕೃಷ್ಣ ಈ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.