ಅಪಹರಣಕ್ಕೊಳಗಾಗಿದ್ದ ಮೈಸೂರಿನ ನಾಟಿ ವೈದ್ಯ ಕೇರಳದಲ್ಲಿ ಕೊಲೆ

ಮೈಸೂರು : ಮೂರು ವರ್ಷಗಳ ಹಿಂದೆ ನಗರದ ಸರಸ್ವತಿಪುರಂ ಠಾಣಾ ವ್ಯಾಪ್ತಿಯ ಮನೆಯೊಂದರಿಂದ ಅಪಹರಣಕ್ಕೊಳಗಾಗಿದ್ದ ನಾಟಿ ವೈದ್ಯರೊಬ್ಬರು ಕೇರಳದಲ್ಲಿ ಕೊಲೆಯಾಗಿದ್ದಾರೆ.  ಕೊಲೆ ಮಾಡಿದ ಆರೋಪಿಗಳು ವೈದ್ಯನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಯಲ್ಲಿ ಬಿಸಾಡಿದ್ದಾರೆ. ಈ ಸಂಬಂಧ ಕೇರಳದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸರಸ್ವತಿಪುರಂ ನ ನಿವಾಸಿ ಶಾಬಾ ಷರೀಫ್‌ (60) ಎಂಬ ನಾಟಿ ವೈದ್ಯ 2019 ರ ಆಗಸ್ಟ್‌ ನಲ್ಲಿ ತಮ್ಮ ಮನೆಯಿಂದಲೇ ಅಪಹರಣಕ್ಕೊಳಗಾಗಿದ್ದರು. ಅಂದಿನಿಂದ ಅವರ ನಾಪತ್ತೆ ಇರಲಿಲ್ಲ ಇತೀಚಿಗೆ ಕೇರಳದ ಮಲ್ಲಪುರಂ ಜಿಲ್ಲೆಯ ನೀಲಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣವೊಂದು ನಡೆದಿತ್ತುಈ ಸಂಬಂಧ ಶೈಬಿನ್‌ ಅಶ್ರಫ್‌ ಎಂಬಾತ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿ ಮೂವರನ್ನು ವಶಕ್ಕೆ ಪಡೆದಿದ್ದ ವೇಳೆ ಈ ಕೊಲೆಯ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಈ ಕೊಲೆಯ ರಹಸ್ಯ ಬಯಲಾಗಿದೆ.