ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್‌-03: ತಾಂತ್ರಿಕ ದೋಷದಿಂದ ಕಕ್ಷೆ ತಲುಪುವಲ್ಲಿ ವಿಫಲ- ಇಸ್ರೋ

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಇಂದು ಮುಂಜಾನೆ ಉಡಾವಣೆಗೊಳಿಸಿದ ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್‌-03 ತಾಂತ್ರಿಕ ದೋಷದಿಂದಾಗಿ ಕಕ್ಷೆ ತಲುಪುವಲ್ಲಿ ವಿಫಲವಾಗಿದೆ ಎಂದು ಇಸ್ರೋ ತಿಳಿಸಿದೆ.

51.70 ಮೀಟರ್‌ ಉದ್ದದ ಜಿಎಸ್‌ಎಲ್‌ವಿ-ಎಫ್‌10 ರಾಕೆಟ್‌ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 05.43ಕ್ಕೆ ಸರಿಯಾಗಿ ಉಡಾವಣೆಗೊಂಡಿತು.

ಉಡಾವಣೆಯಾದ ಕೆಲವೇ ಗಂಟೆಗಳಲ್ಲಿ ʻಕಾರ್ಯಕ್ಷಮತೆ ಅಸಂಗತೆತೆಯಿಂದಾಗಿ ಉಪಗ್ರಹ ನಿಯಂತ್ರಣ ಸಂಪೂರ್ಣ ಸಾಧ್ಯವಾಗುತ್ತಿಲ್ಲʼ ಎಂದು ಉಪಗ್ರಹ ನಿಯಂತ್ರಣ ಕೇಂದ್ರ ಹೇಳಿದೆ.

ಮೇಘಸ್ಫೋಟ ಸೇರಿದಂತೆ, ಕೃಷಿ, ಅರಣ್ಯ, ಜಲಮೂಲಗಳು, ನೈಸರ್ಗಿಕ ವಿಕೋಪಗಳ ಮೇಲ್ವಿಚಾರಣೆಗೆ ನೆರವಾಗುವಂತೆ ದೇಶದ ನೈಜ ಸಮಯದ ಚಿತ್ರಗಳನ್ನು ಸಂಗ್ರಹಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ 10 ವರ್ಷಗಳವರೆಗೆ ಮುಂದುವರಿಯಲಿದೆ ಎಂದು ಇಸ್ರೋ ಹೇಳಿದೆ.

× Chat with us