ಭ್ರಷ್ಟನಿಗೆ ಹಾಕಿದ್ದ ಬಲೆ ಸಡಿಲಾಯಿತೇ?- ೪

ಲಂಚ ಪಡೆಂದೆ ಗ್ರಾಮಲೆಕ್ಕಿಗ ಕಚೇರಿಯಿಂದ ಹೊರಟುಬಿಟ್ಟ!

– (ಹಿಂದಿನ ಸಂಚಿಕೆಯಿಂದ)
ವಿಡಿಂ ಮಾಡತೊಡಗಿದ್ದರು. ಜನರಿಂದ ಹೋಟೆಲ್ ತುಂಬಿ ಹೋಗಿತ್ತು.
ದಿಲೀಪ್ ಸಿಂಗ್ ಎರಡು ಬೌಲ್‌ಗಳಲ್ಲಿ ದ್ರಾವಣ ತಂರಿಸಿ ಟೇಬಲ್ ಮೇಲೆ ತಂದಿಟ್ಟರು. ಬೂಟುಗಾಲಲ್ಲಿ ಶೇಖರನನ್ನು ಝಾಡಿಸಿ ಒದ್ದಿದ್ದ ಗ್ರಾಮಲೆಕ್ಕಿಗನೀಗ ದೀನನಾಗಿ ಹಲುಬುತ್ತಿದ್ದ. ಅವನ ಎರಡೂ ಕೈಗಳನ್ನು ಜಗದೀಶ್ ಮತ್ತು ಶಿವಣ್ಣ ಭದ್ರವಾಗಿ ಹಿಡಿದಿದ್ದರು.
ಲೆಕ್ಕಿಗನ ಒಂದೊಂದೇ ಕೈಂನ್ನು ಹಿಡಿದು ಬೌಲ್‌ನಲ್ಲಿ ಅದ್ದಿಸಿದರು. ಬೌಲ್‌ನಲ್ಲಿದ್ದ ನೀರಿನಂತಹ ದ್ರಾವಣ ಕೆಂಗುಲಾಬಿ ಬಣ್ಣಕ್ಕೆ ತಿರುಗಿತು. ಶೇಖರನನ್ನು ತೋರಿಸಿ ಹೇಳಿದೆ.
“ಇವನ ಹತ್ತಿರ ಇಸ್ಕೊಂಡ ಲಂಚದ ದುಡ್ಡೆಲ್ಲಿ? ಅದನ್ನು ತೆಗೆದು ಕೊಡು”.
“ಂವ ದುಡ್ಡು ಸಾ? ನಾನೇನು ಇಸ್ಕಂಡಿಲ್ಲ. ಬೇಕಾದ್ರೆ ನನ್ನ ಜೇಬನ್ನ ಚೆಕ್ ಮಾಡ್ಕಳಿ ಸಾರ್!” ಬೆರಗು ಮತ್ತು ದಾಷ್ಟೀಕತೆಂ ದನಿ.
ಂನಿಫಾರಂನಲ್ಲಿದ್ದಿದ್ದರೆ ದವಡೆ ಕಿತ್ತಿಡುತ್ತಿದ್ದೆ. ಇದು ಮಫ್ತಿಂ ಕೆಲಸ. ಎಲ್ಲವೂ ವಿಡಿಂ ರೆಕಾರ್ಡ್ ಆಗುತ್ತಿದೆ! ನಾಳೆ ಕೋರ್ಟಿಗೂ ಹೋಗುತ್ತದೆ.
ಮಂದೆ ತುಂಬಿದ ದನಿಂಲ್ಲಿ,
“ನೋಡಂ? ಲಂಚದ ದುಡ್ಡನ್ನ ನೀನು ತಗೊಂಡಿರೋದರಿಂದಲೇ ನಿನ್ನ ಕೈಬೆರಳು ಕೆಂಪಾಗಿದೆ. ಆ ನೋಟುಗಳೆಲ್ಲಿವೆ ಅದನ್ನು ತೆಗೆದುಕೊಡು. ಪೊಲೀಸ್ ತನಿಖೆಗೆ ನೀನು ಸಹಕರಿಸಬೇಕಪ್ಪಾ! ಹಾಗೆಲ್ಲ ಹೆಚ್ಚಿಗೆ ಮಾತಾಡಬಾರದು”.
“ಇಲ್ಲಾ ಸಾರ್. ದೇವ್ರಾಣೆಂಗೂ ನಾನು ಂವ ದುಡ್ಡನ್ನೂ ತಗೊಂಡಿಲ್ಲ. ಬೇಕಾದ್ರೆ ನೀವೇ ನೋಡ್ಕಳಿ!” ಅಮಾಂಕ ದನಿ.
“ರೆಡ್ ಹ್ಯಾಂಡಾಗಿ ಹಿಡಿದರು ಅನ್ನೋ ಮಾತು ಕೇಳಿದ್ದೀಂ ತಾನೇ? ರೆಡ್ ಹ್ಯಾಂಡ್ ಕೇಸು ಅಂದ್ರೆ ಇದೇ! ಲಂಚದ ದುಡ್ಡು ಮುಟ್ಟದೇ ನಿನ್ನ ಕೈ ಕೆಂಪಾಗೋದಿಲ್ಲ. ಮಂದೆಂಗಿ ಇವರ ಹತ್ತಿರ ಇಸ್ಕೊಂಡ ದುಡ್ಡನ್ನ ತೆಗೆದು ಕೊಡು”
ನೆಲದ ಮೇಲೆ ಚೆಲ್ಲಾಪಿಲ್ಲಿಂಗಿ ಹರಡಿದ್ದ ನೋಟುಗಳನ್ನೆಲ್ಲಾ ಲೆಕ್ಕಿಗನೇ ಆಂ ಟೇಬಲ್ ಮೇಲೆ ತೆಗೆದಿಟ್ಟ.
ಸಾಕ್ಷಿದಾರ ಲೆಕ್ಚರರ್ ಅವರಿಗೆ ನೋಟುಗಳನ್ನು ಎಣಿಸುವಂತೆ ಹೇಳಿದೆ. ಅವರು ಎಣಿಸಿ ಐದು ಸಾವಿರ ಇದೆ ಎಂದರು.
ವಿಡಿಂ ರೆಕಾರ್ಡ್ ಆಗುತ್ತಿತ್ತು. ಇನ್ನೊಬ್ಬ ಸಾಕ್ಷಿದಾರರಿಗೆ, “ಈ ನೋಟುಗಳ ನಂಬರ್‌ಗಳು ತಾಳೆಂಗುತ್ತದೆಂ ನೋಡಿ ಹೇಳಿ” ಎಂದೆ.
ಅವರು ಠಾಣೆಂಲ್ಲಿ ಹಾಳೆಂ ಮೇಲೆ ಬರೆದಿದ್ದ ನೋಟಿನ ನಂಬರ್‌ಗಳನ್ನೂ, ಲಂಚದ ನೋಟುಗಳ ನಂಬರ್‌ಗಳನ್ನೂ ತಾಳೆ ಹಾಕಿ ನೋಡಿದರು. ಲೆಕ್ಚರರ್ ಅವರೂ ಹೋಲಿಸಿ ನೋಡಿ ನೋಟುಗಳ ನಂಬರ್ ಹೊಂದಿಕೆಂಗುತ್ತಿವೆ ಎಂದು ದೃಢೀಕರಿಸಿದರು.
ಲೆಕ್ಕಿಗನಿಗೆ ಹೇಳಿದೆ, “ನೋಡಪ್ಪಾ! ಇವರಿಬ್ಬರೂ ನೀನೇ ಲಂಚ ಇಸ್ಕಂಡಿದ್ದೀಂ ಅಂತ ಹೇಳ್ತಿದ್ದಾರೆ. ಈ ನೋಟುಗಳನ್ನು ನಿನ್ನ ಜೇಬಿನಿಂದ ಹೊರಕ್ಕೆಸದವನೂ ನೀನೇ. ಅದಕ್ಕೇ ನಿನ್ನ ಕೈ ಕೂಡಾ ಕೆಂಪಾಗಿದೆ. ಪೊಲೀಸರತ್ರ ಸಿಕ್ಕಿಬಿದ್ದ ಮೇಲೆ, ಸುಳ್ಳೇಳಬಾರದು. ಏನು ನಡೆಯಿತೋ ಅದು ನಿಂಗೇ ಗೊತ್ತಿದೆ. ಈ ದುಡ್ಡು ನಿನ್ನ ವಶಕ್ಕೆ ಹೇಗೆ ಬಂತು? ಅಂತ ಬರೆದು ಕೊಡು”.
“ಏನಂತ ಬರೆದು ಕೊಡಲಿ ಸಾರ್?!”
“ಏನೇನೋ ಏನೂ ಬರೀಬೇಡ. ಈ ಲಂಚದ ಐದು ಸಾವಿರ ರೂಪಾಯಿ ನಿನ್ನತ್ರ ಹೇಗೆ ಬಂತು ಅಷ್ಟನ್ನು ಬರೆದುಕೊಡು”.
“ಕೆಲಸಕ್ಕೆ ಸೇರಿ ಇನ್ನೂ ನಾಲ್ಕು ವರ್ಷ ಆಗಿಲ್ಲ ಸಾರ್. ಅನುಕಂಪದ ಮೇಲೆ ಕೆಲಸ ಸಿಕ್ಕಿದೆ. ಇಡೀ ಸಂಸಾರದ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮನೆನೇ ಹಾಳಾಗಿ ಹೋಗುತ್ತೆ. ನನ್ನನ್ನು ಉಳಿಸಿ”.
ಲಂಚ ತಿಂದಷ್ಟು ಸಲೀಸಾಗಿ ಅರಗಿಸಿಕೊಳ್ಳುವುದು ಸುಲಭವಲ್ಲ. ತನ್ನ ವಶಕ್ಕೆ ಹೇಗೆ ಬಂತು ಎಂಬುದನ್ನು ಅವನೇ ಸ್ವಂತ ಬರವಣಿಗೆಂಲ್ಲಿ ಹಾಗೆಂ ಬರೆದು ಕೊಟ್ಟರೆ ಜೈಲಿಗೇ ಹೋಗಬೇಕಾಗುತ್ತದೆ.
“ನನ್ನ ಹತ್ತಿರ ನೋಟೇ ಇರಲಿಲ್ಲವಲ್ಲಾ ಸಾರ್? ಂರು ಎಸೆದಿದ್ರೋ ನಂಗೆ ಗೊತ್ತಿಲ್ಲ. ಹೆಂಗೆ ಬರಕೊಡಲಿ ಹೇಳಿ ಸಾರ್?!”
‘ಹಿಂಗೆಲ್ಲಾ ಛಾಲೆಂಜ್ ಮಾಡಿದರೆ ನನ್ಮಗನೇ, ಬೂಟನ್ನು ಬಾಯಿಗಿಡಿದು ಹುಟ್ಟಲಿಲ್ಲಾ ಅನ್ನಿಸಿಬಿಡ್ತೀನಿ…’ ಎಂಬ ಮಾತು ನಾಲಿಗೆ ತುದಿಂಲ್ಲಿತ್ತು. ವಿಡಿಂ ರೆಕಾರ್ಡಿಂಗ್ ಓಡುತ್ತಿದೆ!
“ನೋಡಪ್ಪಾ ನೀನು ಇಲ್ಲದ್ದನ್ನು ಬರೆದುಕೊಡು ಅಂತ ನಾನು ಹೇಳ್ತಿಲ್ಲ. ನಿನ್ನ ಕೈಬೆರಳು ಕೆಂಪಾಗಿದ್ದು ನಿಜಾ ತಾನೇ? ಅಂದಮೇಲೆ ನೀನು ಆ ನೋಟುಗಳನ್ನು ಮುಟ್ಟಿರೋದು ನಿಜ. ನಿನ್ನ ಪ್ಯಾಂಟಿನ ಜೇಬೂ ಕೆಂಪಗಾಗಿದೆ. ನೀನೇ ಆ ನೋಟುಗಳನ್ನು ಜೇಬಿನಿಂದ ಎಸೆದಿರೋದನ್ನು ಇಲ್ಲಿರೋ ಸಾಕ್ಷಿಗಳೂ ನೋಡಿದ್ದಾರೆ. ಇದೆಲ್ಲವೂ ವಿಡಿಂ ರೆಕಾರ್ಡ್ ಆಗಿದೆ. ಕಣ್ಣಾರೆ ಕಂಡ ಸತ್ಯವನ್ನು ಸುಳ್ಳು ಅಂತ ಸಾಧಿಸಬಾರದು ನೋಡು”
ಗದ್ಗದಿತನಾಗಿ, “ಏನಂತ ಬರೆದು ಕೊಡಲಿ ಸಾರ್?”
“ಅದನ್ನೆಲ್ಲಾ ನಾವು ಹೇಳಬಾರದು. ದೇವರು ನಿನಗೆ ಏನು ಬುದ್ಧಿ ಕೊಡ್ತಾನೋ ಅದಷ್ಟನ್ನು ಬರೆದುಕೊಡು!”
ರೆಕಾರ್ಡಿಂಗ್ ಮುಗಿಂಲಿ. ಆಮೇಲೆ ಗ್ರಾಚಾರ ಬಿಡಿಸೋದು ಇz ಇದೆ ಎಂದುಕೊಂಡು ಅತ್ಯಂತ ವಿನಂದಿಂದ ಮಾತಾಡಿದೆ. ದನಿಂಲ್ಲಿ ಕಕ್ಕುಲತೆ ತುಳುಕುತ್ತಿತ್ತು.
ಅವನ ಬಾಮೈದ ಚೀಟಿ ನಡೆಸುತ್ತಿದ್ದಾನೆಂತಲೂ, ಅದರ ಕಂತಿನ ದುಡ್ಡನ್ನು ಶೇಖರ ತಂದು ಕೊಟ್ಟನೆಂತಲೂ, ಆದ್ದರಿಂದ ತಾನು ಇಸಿದುಕೊಂಡೆ. ಅದು ಲಂಚದ ಹಣ ಅಂತ ಗೊತ್ತಿರಲಿಲ್ಲ. ಅವನ ಬಳಿ ತಾನು ಲಂಚವನ್ನೇ ಕೇಳಿಲ್ಲ ಇತ್ಯಾದಿ ಬರೆದುಕೊಟ್ಟ.
ಚೀಟಿ ದುಡ್ಡನ್ನು ಇಸಿದುಕೊಂಡಿದ್ದೆ ಎಂದರೆ ಬಚಾವಾದಂತೆ ಅಂದುಕೊಂಡಿದ್ದ. ಆದರೆ ಕಾನೂನು ಕೇಳುತ್ತಿದ್ದ ಪಾಯಿಂಟ್ ಅದಲ್ಲ. ಆ ಲೇಪಿತ ನೋಟುಗಳು ತನ್ನ ವಶದಲ್ಲಿತ್ತು ಎಂಬುದನ್ನು!
ಅದನ್ನು ಂಥಾವತ್ತಾಗಿ ರೆಕಾರ್ಡ್ ಮಾಡಿಸಿ ಹದಿನೇಳು ಪುಟಗಳ ಮಹಜರ್ ಟೈಪ್ ಮಾಡಿಸಿದ್ದಾಂ. ಶೇಖರನಿಗೆ ಸಂಬಂಧಿಸಿದ ಫೈಲುಗಳನ್ನು ಸೀರh ಮಾಡಿದೆವು.
ಅವನ ಜೊತೆಗೆ ಬೈಕ್‌ನಲ್ಲಿ ಬಂದವನು ಅವನ ಸ್ನೇಹಿತನಂತೆ.  ಆದರೆ ರೆವಿನ್ಯೂ ಇನ್ಸ್‌ಪೆಕ್ಟರ್ ಬಂದಿರಲಿಲ್ಲ.
*
ತಕ್ಷಣವೇ ತಹಸಿಲ್ದಾರರಿಗೆ ಖಾತಾ ಮಾಡಿಸಿಕೊಡುವಂತೆ ತಾಕೀತು ಮಾಡಿದೆ. ನಾವು ಅವರ  ಕಚೇರಿಗೆ ಹೋದರೆ ಮುಕ್ಕಾಲು ಮಂದಿ ಸಿಬ್ಬಂದಿ ಕಾಳಿಂಗಸರ್ಪವನ್ನು ಕಂಡಂತೆ ಕಚೇರಿಂನ್ನೇ ಖಾಲಿ ಮಾಡಿದ್ದರು.
*
ನಡುರಾತ್ರಿಂಲ್ಲಿ ಆರೋಪಿಂನ್ನು ನ್ಯಾಂಧೀಶರ ಮನೆಂಲ್ಲಿ ಹಾಜರುಪಡಿಸಿದೆವು. ಅವರು ಹತ್ತು ದಿನ ನ್ಯಾಂಂಗ ಕಸ್ಟಡಿಗೆ ರಿಮ್ಯಾಂಡ್ ಮಾಡಿದರು.
ಕೇವಲ ನಾಲ್ಕು ದಿನದೊಳಗೆ ತಹಸಿಲ್ದಾರರು ಪಕ್ಕಾ ಖಾತಾ ಬದಲಾವಣೆ ಮಾಡಿಕೊಟ್ಟರು. ನನ್ನ ಮೇಲಧಿಕಾರಿಗಳು ಸಂಬಂಧಿಸಿದವರಿಗೆ ತಾಕೀತು ಮಾಡಿದರು. ಶೇಖರನಿಗೆ ಸಾಲವೂ ಬೇಗ ಸಿಕ್ಕಿತು.
*
ವಿಷಾದದ ಸಂಗತಿಂಂದರೆ ಇಷ್ಟು ಮುಂಜಾಗ್ರತೆಯಿಂದ ಮಾಡಿದ್ದ ಕೇಸೂ ಕೋರ್ಟ್‌ನಲ್ಲಿ ಬಿದ್ದುಹೋಯಿತು. ಅಪರಾಧಿ ಕಡೆಂ ವಕೀಲರು ಇಬ್ಬರು ಸಾಕ್ಷಿಗಳನ್ನು  ಏಮಾರಿಸಿಬಿಟ್ಟರು.
ಅವರ ಕೇಳುವಿಕೆಂ ವರಸೆಗೆ ಗಲಿಬಿಲಿಗೊಂಡು ಉಲ್ಟಾ ಹೇಳಿದರು. ಗ್ರಾಮಲೆಕ್ಕಿಗ ಎಸೆದಿದ್ದ ನೋಟುಗಳನ್ನು ಪೊಲೀಸರು ಅವನ ಕೈಯಿಂದಲೇ ಮೊದಲು ಎತ್ತಿಸಿದರು. ಆಮೇಲೆ ಅವನ ಬೆರಳುಗಳನ್ನು ಬೌಲ್‌ನಲ್ಲಿ ಅದ್ದಿಸಿದರು!
ನಮ್ಮ ಶ್ರಮವೆಲ್ಲವೂ ಕರಗಿ ನಾಶವಾಯಿತು.
ಅoಟಿviಟಿಛಿe ಣhe ಛಿouಡಿಣ. Iಜಿ ಟಿoಣ ಛಿoಟಿಜಿuse ಣhe ಛಿouಡಿಣ !

*
ಈ ಐದು ಸಾವಿರ ರೂಪಾಯಿ ಲಂಚದಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರನ ಪಾಲು ಎರಡು ಸಾವಿರ ರೂಪಾಯಿ ಬೇರೆ ಇತ್ತು. ಆತನನ್ನು ವಿಚಾರಣೆ ಮಾಡಬೇಕಿತ್ತು.
ಅವನನ್ನು ವಿಚಾರಿಸಲು ಹೋಗಿ ನನ್ನ ಕೆಲಸಕ್ಕೇ ಸಂಚಕಾರ ಬರುವಂತಾಗಿ, ನಾನೇ ಜೈಲಿಗೆ ಹೋಗುವಂತಹ ಪ್ರಸಂಗವೂ ನಡೆಯಿತು.

ಅದು ಮುಂದಿನ ಭಾಗದಲ್ಲಿ . . . . .

– ಜೆ.ಬಿ.ರಂಗಸ್ವಾಮಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ, ಮೈಸೂರು
× Chat with us