ಮುಂಬೈ: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2023ರ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಗುಜರಾತ್’ನ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲೆ ವೇಗವಾಗಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಅರ್ಸಿಬಿ ವಿರುದ್ಧ ಬ್ಯಾಟಿಂಗ್ ಮಾಡಲು ಗುಜರಾತ್ ಕಣಕ್ಕಿಳಿಯಿತು. ಈ ಸಂದರ್ಭದಲ್ಲಿ ಇಂಗ್ಲೆಂಡ್ ಮೂಲದ ಬ್ಯಾಟರ್ ಸೋಫಿಯಾ ಕೇವಲ 18 ಬಾಲ್’ಗೆ ಅರ್ಧ ಶತಕವನ್ನು ಸಿಡಿಸಿದ್ದಾರೆ. ಆಮೂಲಕ ಕಡಿಮೆ ಬಾಲ್ ಗಳಲ್ಲಿ ಅರ್ಧಶತಕ ಸಿಡಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಪಂದ್ಯದಲ್ಲಿ ಒಟ್ಟಾರೆ ಬಲಗೈ ಬ್ಯಾಟ್ಸ್ ಮನ್ 28 ಎಸೆತಗಳಲ್ಲಿ 65 ರನ್ ಗಳಿಸಿದರು.
ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಫಿ ಡಿವೈನ್ ಕೂಡ ವೀರಾವೇಶದ ಅರ್ಧಶತಕ ಬಾರಿಸಿದ್ದರು. ಆದರೆ ಗುಜರಾತ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ತನ್ನ ಲಯವನ್ನು ಕಾಪಾಡಿಕೊಂಡ ಕಾರಣ ಸೋಫಿ ಹಾಫ್ ಸೆಂಚುರಿ ವ್ಯರ್ಥವಾಯಿತು.
ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್ ಮುಖಾಮುಖಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 11 ರನ್ಗಳ ಅಂತರದಿಂದ ಸೋತು ಸತತ ಮೂರನೇ ಸೋಲನ್ನು ಅನುಭವಿಸಿದೆ.
202 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ RCB ಚುರುಕಿನ ಆರಂಭವನ್ನು ಪಡೆದರೂ ಸಹ ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಇತ್ತು. 45 ಎಸೆತಗಳಲ್ಲಿ 66 ರನ್ ಗಳಿಸಿದ ಸೋಫಿ ಡಿವೈನ್ ಮತ್ತು ಕೇವಲ 11 ಎಸೆತಗಳಲ್ಲಿ 30* ರನ್ ಸಿಡಿಸಿದ ಹೀದರ್ ನೈಟ್ ಆರ್ಸಿಬಿಯ ಭರವಸೆಯನ್ನು ಜೀವಂತವಾಗಿರಿಸಿದರು. ಆದರೆ ಆಶ್ಲೀಗ್ ಗಾರ್ಡ್ನರ್ ಅವರ ಕ್ಲಿನಿಕಲ್ ಪ್ರದರ್ಶನವು ಗುಜರಾತ್ ವಿಷಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡಿತು.
ಗುಜರಾತ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಸೋಫಿಯಾ ಡಂಕ್ಲಿ ಮತ್ತು ಹರ್ಲೀನ್ ಡಿಯೋಲ್ ಅವರ ಸ್ಫೋಟಕ ಹೊಡೆತಗಳು ಗುಜರಾತ್ ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆ ಹಾಕಲು ಸಹಾಯ ಮಾಡಿತು. ಹರ್ಲೀನ್ ಅವರು 47 ಎಸೆತಗಳಲ್ಲಿ 67 ರನ್ ಗಳಿಸಿದರು.
ಈ ಮಧ್ಯೆ ಶರೇಯಅಂಕಾ ಪಾಟೀಲ್ ಆರ್ಸಿಬಿ ಪರ ಅದ್ವಿತೀಯ ಬೌಲಿಂಗ್ ಮಾಡಿದ್ದು, ತನ್ನ ನಾಲ್ಕು ಓವರ್ಗಳಲ್ಲಿ 32 ರನ್ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್ಗಳನ್ನು ಕಬಳಿಸಿದ್ದಾರೆ. ಸದ್ಯ ಇದು ಗುಜರಾತ್ಗೆ ಟೂರ್ನಿಯಲ್ಲಿ ಮೊದಲ ಜಯವಾಗಿದೆ.
ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 201 (ಸೋಫಿಯಾ ಡಂಕ್ಲಿ 65, ಹರ್ಲಿನ್ ಡಿಯೊಲ್ 67, ಆ್ಯಷ್ಲೆ ಗಾರ್ಡನರ್ 19; ಶ್ರೇಯಾಂಕಾ ಪಾಟೀಲ 32ಕ್ಕೆ2, ಹೀಥರ್ ನೈಟ್ 17ಕ್ಕೆ2). ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್ಗಳಲ್ಲಿ 6 ವಿಕೆಟ್ಗೆ 190 (ಸ್ಮೃತಿ ಮಂದಾನ 18, ಸೋಫಿ ಡಿವೈನ್ 66, ಎಲಿಸ್ ಪೆರಿ 32, ಹೀದರ್ ನೈಟ್ ಔಟಾಗದೆ 30; ಆ್ಯಶ್ಲೆ ಗಾರ್ಡನರ್ 31ಕ್ಕೆ 3, ಅನಾಬೆಲ್ ಸುದರ್ಲೆಂಡ್ 56ಕ್ಕೆ 2, ಮಾನಸಿ ಜೋಷಿ 9ಕ್ಕೆ 1). ಫಲಿತಾಂಶ: ಗುಜರಾತ್ ಜೈಂಟ್ಸ್ಗೆ 11 ರನ್ಗಳ ಜಯ