ಮುಂಬೈ: ಬೌಲರ್ಗಳ ಶಿಸ್ತುಬದ್ಧ ದಾಳಿಯ ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ವಿಕೆಟ್ಗಳಿಂದ ಜಯಿಸಿತು.
ಟಾಸ್ ಗೆದ್ದ ಡೆಲ್ಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, 18 ಓವರ್ಗಳಲ್ಲಿ 105 ರನ್ ಗಳಿಸಿ ಆಲೌಟ್ ಆಯಿತು. ಮುಂಬೈ ತಂಡವು ಇನಿಂಗ್ಸ್ನಲ್ಲಿ ಇನ್ನೂ ಐದು ಓವರ್ಗಳು ಬಾಕಿಯಿರುವಾಗಲೇ 2 ವಿಕೆಟ್ಗಳಿಗೆ 109 ರನ್ ಗಳಿಸಿ ಜಯಿಸಿತು.
ಮುಂಬೈ ಬೌಲರ್ಗಳಾದ ಸೈಕಾ ಇಷಕ್, ಹೇಯಲಿ ಮ್ಯಾಥ್ಯೂಸ್ ಹಾಗೂ ಐಸಿ ವಾಂಗ್ ತಲಾ ಮೂರು ವಿಕೆಟ್ ಗಳಿಸಿದರು.
ಬ್ಯಾಟಿಂಗ್ನಲ್ಲಿ ಮುಂಬೈ ತಂಡದ ಆರಂಭಿಕ ಜೋಡಿ ಯಷ್ಟಿಕಾ ಭಾಟಿಯಾ (41; 32ಎ, 4X8) ಹಾಗೂ ಹೆಯಲಿ ಮ್ಯಾಥ್ಯೂಸ್ (32; 31ಎ, 4X6) ಮೊದಲ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು. ಇದರಿಂದಾಗಿ ತಂಡದ ಗೆಲುವು ಸುಲಭವಾಯಿತು.
ಡೆಲ್ಲಿ ತಂಡದ ನಾಯಕಿ ಹಾಗೂ ಆರಂಭಿಕ ಬ್ಯಾಟರ್ ಮೆಗ್ ಲ್ಯಾನಿಂಗ್ (43; 41ಎ) ಹಾಗೂ ಮಧ್ಯಮ ಕ್ರಮಾಂಕದ ಜೆಮಿಮಾ ರಾಡ್ರಿಗಸ್ (25; 18ಎ) ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬರಲಿಲ್ಲ. ಶಫಾಲಿ ವರ್ಮಾ 2 ರನ್ ಗಳಿಸಿ ಔಟಾದರು.
ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 18 ಓವರ್ಗಳಲ್ಲಿ 105 (ಮೆಗ್ ಲ್ಯಾನಿಂಗ್ 43, ಜೆಮಿಮಾ ರಾಡ್ರಿಗಸ್ 25, ರಾಧಾ ಯಾದವ್ 10, ಸೈಕಾ ಇಷಕ್ 13ಕ್ಕೆ3, ಐಸಿ ವಾಂಗ್ 10ಕ್ಕೆ3, ಹೇಯಲಿ ಮ್ಯಾಥ್ಯೂಸ್ 19ಕ್ಕೆ3)
ಮುಂಬೈ ಇಂಡಿಯನ್ಸ್: 15 ಓವರ್ಗಳಲ್ಲಿ 2 ವಿಕೆಟ್ಗಳಿಗೆ 109 (ಯಷ್ಟಿಕಾ ಭಾಟಿಯಾ 41, ಹೆಯಲಿ ಮ್ಯಾಥ್ಯೂಸ್ 32, ಶಿವರ್ ಬ್ರಂಟ್ 23, ಹರ್ಮನ್ಪ್ರೀತ್ ಕೌರ್ ಔಟಾಗದೆ 11, ಅಲೈಸ್ ಕಾಪ್ಸಿ 10ಕ್ಕೆ1, ತಾರಾ ನೊರಿಸ್ 4ಕ್ಕೆ1) ಫಲಿತಾಂಶ: ಮುಂಬೈ ಇಂಡಿಯನ್ಸ್ಗೆ 8 ವಿಕೆಟ್ಗಳ ಜಯ.
ಇಂದಿನ ಪಂದ್ಯ
ಆರ್ಸಿಬಿ–ಯುಪಿ ವಾರಿಯರ್ಸ್
ಆರಂಭ: ರಾತ್ರಿ 7.30ರಿಂದ