ಬೆಂಗಳೂರು: ವಿಜಯ್ ಮಲ್ಯ ಬಳಿಯಿದ್ದ ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ ರೂ.ಗೆ ಹರಾಜು ಮಾಡಲಾಗಿದೆ. ಗೌಪ್ಯತೆ, ಸುರಕ್ಷತೆ ದೃಷ್ಟಿಯಿಂದ ಖರೀದಿದಾರರ ಹೆಸರನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.
ಟಿಪ್ಪು ಸುಲ್ತಾನ್ನ ಖಡ್ಗವು ಈ ಹಿಂದೆ ಬ್ರಿಟಿಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಖಡ್ಗವನ್ನು 2004ರಲ್ಲಿ ವಿಜಯ್ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿದ್ದರು. ಆದರೆ ಈಗ ಬರೋಬ್ಬರಿ 145 ಕೋಟಿ ರೂ.ಗೆ ಹರಾಜಾಗಿದೆ.
2018ರಲ್ಲಿ ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದ ಭಾರತೀಯ ಬ್ಯಾಂಕ್ಗಳ ಒಕ್ಕೂಟವು ಮಲ್ಯ ಅವರ ಯಾವುದೇ ಚರ, ಸ್ಥಿರ ಆಸ್ತಿ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲು ಕೋರಿದ್ದವು. ಈ ವೇಳೆ ಉತ್ತರ ನೀಡಿದ್ದ ಮಲ್ಯ ನಮ್ಮ ಕುಟುಂಬಕ್ಕೆ ದುರಾದೃಷ್ಟವಾಗಿ ಕಾಡಿದ್ದ ಖಡ್ಗವನ್ನು ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದರು ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಲ್ಯ ಅವರ ವಕೀಲರು ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದರು.
2004 ರಲ್ಲಿ ವಿಜಯ್ ಮಲ್ಯ 1.5 ಕೋಟಿ ರೂ., ಬೆಲೆಗೆ ಖರೀದಿಸಿದ್ದ ಖಡ್ಗ ನಿನ್ನೆ 145 ಕೋಟಿ ರೂ.ಗೆ ಹರಾಜಾಗಿದೆ. ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್ಹ್ಯಾಮ್ ಹರಾಜು ಸಂಸ್ಥೆ ಖರೀದಿಸಿದೆ. ಖಡ್ಗ ಖರೀದಿದಾರರ ಮಾಹಿತಿ ಹಂಚಿಕೊಳ್ಳಲು ಬೋನ್ಹ್ಯಾಮ್ ನಿರಾಕರಿಸಿದೆ. ‘ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಖಡ್ಗ ಮಾರಿದವರು, ತೆಗೆದುಕೊಂಡವರ ಹೆಸರನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಹರಾಜು ನಡೆಸುವ ಬೋನ್ಹ್ಯಾಮ್ ಹೌಸ್ ಸಂಯೋಜಕ ಎನ್ರಿಕಾ ಮೆಡುಗೊ ಹೇಳಿದ್ದಾರೆ.
ಖಡ್ಗದ ಇತಿಹಾಸ: 1799 ರ ಮೇ 4 ರಂದು ಸೆರಿಂಗಪಟ್ಟಂ(ಶ್ರೀರಂಗಪಟ್ಟಣ)ದಲ್ಲಿ ಟಿಪ್ಪು ಸುಲ್ತಾನ್ ಹುತಾತ್ಮರಾದ ನಂತರ ಈ ಖಡ್ಗವನ್ನು ತೆಗೆದುಕೊಳ್ಳಲಾಗಿದೆ ಮತ್ತು ಸೈನ್ಯದಿಂದ ಮೇಜರ್ ಜನರಲ್ ಬೇರ್ಡ್ಗೆ ನೀಡಲಾಯಿತು. ಅವರು ಆಜ್ಞಾಪಿಸಿದ ಆಕ್ರಮಣದಲ್ಲಿ ಅವರ ಧೈರ್ಯ ಮತ್ತು ನಡವಳಿಕೆಯ ಬಗ್ಗೆ ಅವರ ಉನ್ನತ ಅಭಿಪ್ರಾಯದ ಸಂಕೇತವಾಗಿ ಅದನ್ನು ನೀಡಲಾಗಿದೆ. ಈ ಅಕ್ರಮಣದಲ್ಲಿ ಟಿಪ್ಪು ಸುಲ್ತಾನ್ ಕೊಲ್ಲಲ್ಪಟ್ಟರು. ಖಡ್ಗದ ಮೇಲೆ ಬರೆದಿರುವ ಅಕ್ಷರ: ಶಂಶೀರ್-ಇ ಮಲಿಕ್ ಅಥವಾ ‘ರಾಜನ ಖಡ್ಗ’ ಎಂದು ಬರೆದಿದೆ.
ಅದರಲ್ಲಿ ಯಾ ಅಲ್ಲಾ!ಯಾ ನಾಸಿರ್! ಯಾ ಫತ್ತಾ! ಯಾ ನಾಸಿರ್! ಯಾ ಮುಯಿನ್! ಯಾ ಜಹೀರ್, ‘ಓ ಅಲ್ಲಾ! ಓ ಸಹಾಯಕ!! ಓ ಸಹಾಯಕ! ಓ ಸಹಾಯಕ! ಎಂದು ಬರೆಯಲಾಗಿದೆ.