ಪಾಕಿಸ್ತಾನ : ನೆನ್ನೆ ದಿನ ಗುಂಡಿನ ದಅಳಿಗೆ ಒಳಗಾದ ಪಾಕಿಸ್ತಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುರುವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿಯಾಗಿದೆ. ಕಾಲಿಗೆ ಗುಂಡುತಾಗಿದೆ.
ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದಿದ್ದೇನು?: ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧದ “ಲಾಂಗ್ ಮಾರ್ಚ್” ಭಾಗವಾಗಿ 70 ವರ್ಷದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ. ಹೊಸ ಸರ್ಕಾರದ ರಾಜೀನಾಮೆಗೆ ಜನರು ಒತ್ತಾಯಿಸುತ್ತಿದ್ದಾರೆ. ಇಮ್ರಾನ್ ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಟ್ರಕ್ ಮೇಲೆ ನಿಂತಿದ್ದಾಗ ಶೂಟರ್ ಗುಂಡು ಹಾರಿಸಿದ್ದಾನೆ. ಆರೋಪಿ ಶೂಟರ್ನನ್ನು ಬಂಧಿಸಲಾಗಿದೆ. ನಾನು ಇಮ್ರಾನ್ ಖಾನ್ರನ್ನು ಕೊಲ್ಲಲು ಬಂದಿದೆ ಎಂದು ಬಂಧಿತ ಹೇಳಿಕೆ ನೀಡಿದ್ದಾರೆ.
ಗುಂಡು ಹಾರಿಸಿದಾತ ಹೇಳಿದ್ದೇನು? : ಇಮ್ರಾನ್ ಖಾನ್ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಹೀಗಾಗಿ ಅವರನ್ನು ಕೊಲ್ಲಲು ಬಂದಿದ್ದೇನೆ ಎಂದು ಗುಂಡು ಹಾರಿಸಿದ ಆರೋಪಿ ಹೇಳಿದ್ದಾನೆ. ನಾನು ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಬಂದಿದ್ದೇನೆ. ಅವರು ಜನರನ್ನು ದಾರಿ ತಪ್ಪಿಸುತ್ತಿದ್ದರಿಂದ ನಾನು ಹೀಗೆ ಮಾಡಿದ್ದೇನೆ. ನನಗೆ ಇದನ್ನು ಸಹಿಸಲಾಗಲಿಲ್ಲ. ಅವರು ರ್ಯಾಲಿ ಪ್ರಾರಂಭಿಸಿದ ದಿನವೇ ನಾನು ಕೊಲೆ ಮಾಡಲು ನಿರ್ಧರಿಸಿದ್ದೆ. ನಾನು ಏಕಾಂಗಿ, ನನ್ನ ಹಿಂದೆ ಯಾರೂ ಇರಲಿಲ್ಲ’ ಎಂದು ಆರೋಪಿ ಹೇಳಿದ್ದು, ಪೊಲೀಸರು ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಪ್ರತಿಭಟನೆಗೆ ಕಾರಣವೇನು?:
ಪಂಜಾಬ್ನ ವಜೀರಾಬಾದ್ನ ಅಲ್ಲಾವಾಲಾ ಚೌಕ್ ಬಳಿ ಈ ಘಟನೆ ನಡೆದಿದೆ. ಲಾಹೋರ್ನಿಂದ ಅಕ್ಟೋಬರ್ 28 ರಂದು ಲಾಂಗ್ ಮಾರ್ಚ್ ಪ್ರಾರಂಭವಾಗಿದ್ದು, ನವೆಂಬರ್ 4 ರಂದು ರಾಜಧಾನಿ ಇಸ್ಲಾಮಾಬಾದ್ ಅನ್ನು ತಲುಪುವ ನಿರೀಕ್ಷೆಯಿದೆ. ಒಂದು ವಾರದ ಅವಧಿಯಲ್ಲಿ ಸುಮಾರು 380 ಕಿ.ಮೀ. ತಲುಪುತ್ತಿದೆ.
ಈ ಪ್ರತಿಭಟನಾ ರ್ಯಾಲಿ ಪಾಕಿಸ್ತಾನದ ದೊಡ್ಡ ಸ್ವಾತಂತ್ರ್ಯ ಚಳುವಳಿ ಎಂದು ಇಮ್ರಾನ್ ಖಾನ್ ಹೇಳಿದ್ದು, ತಕ್ಷಣವೇ ಚುನಾವಣೆಗಳನ್ನು ಘೋಷಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲು ಮೆರವಣಿಗೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಹೆಚ್ಚಾಯ್ತು ರಾಜಕೀಯ ಕೆಸರೆರಚಾಟ: ವಿದೇಶಿ ನಾಯಕರಿಂದ ಪಡೆದ ಉಡುಗೊರೆಗಳ ಮಾರಾಟದಿಂದ ಬಂದ ಹಣವನ್ನು ಬಚ್ಚಿಟ್ಟ ಆರೋಪದ ಮೇಲೆ ಪಾಕಿಸ್ತಾನದ ಚುನಾವಣಾ ಆಯೋಗವು ಖಾನ್ ಅವರನ್ನು ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಾಗಿತ್ತು.
ಇನ್ನು ಈ ದಾಳಿಯು ಪಾಕಿಸ್ತಾನದಲ್ಲಿ ಈಗಾಗಲೇ ಇರುವ ಘರ್ಷಣೆಯನ್ನು ಅಪಾಯಕಾರಿಯಾಗಿ ಹೆಚ್ಚಿಸಲಿದೆ. ಹೊಸ ಸರ್ಕಾರದ ವಿರುದ್ಧ ಇಮ್ರಾನ್ ಖಾನ್ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಲಿದ್ದಾರೆ. ಈ ಘಟನೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳಲಿದ್ದಾರೆ.