ಟೆಫಾನಿಯಾ ಮೆರಾಸಿನಿನು ಹುಟ್ಟುಹಬ್ಬಕ್ಕೆ ಡೂಡಲ್ ಗೌರವ ಸಲ್ಲಿಸಿದ ಗೂಗಲ್

ರಾಸಾಯನಿಕ ಮತ್ತು ಬೌತಿಕ ವಿಜ್ಞಾನ ವಿಷಯದಲ್ಲಿ ಪದವಿ ಪಡೆದುಕೊಂಡ ಸಂಶೋಧನೆಯ ಪ್ರವರ್ತಕ ಮಹಿಳೆಯರಲ್ಲಿ ಒಬ್ಬರಾದ ಟೆಫಾನಿಯಾ ಮೆರಾಸಿನಿನು (Ștefania Mărăcineanu) ಗೆ ಇಂದು (ಜೂನ್ 18 ಶನಿವಾರ 2002) 140 ನೇ ಹುಟ್ಟುಹಬ್ಬ ಹೀಗಾಗಿ ಡೂಡಲ್ ಗೌರವ ಸಲ್ಲಿಸುವ ಮೂಲಕ ಗೂಗಲ್ ಗೌರವ ಸೂಚಿಸಿದೆ.

ಇವರು ಭೌತಶಾಸ್ತ್ರಜ್ಞ ಮೇರಿ ಕ್ಯೂರಿಯ ನಿರ್ದೇಶನದಲ್ಲಿ ವಿಶ್ವದಾದ್ಯಂತ ವಿಕಿರಣಶೀಲತೆಯ ಅಧ್ಯಯನದಲ್ಲಿ ತೊಡಗಿಕೊಂಡಿದ್ದರು. ಇವರ ಸಂಶೋಧನೆಯಲ್ಲಿ ಕೃತಕ ವಿಕಿರಣಶೀಲತೆಯ ಟು ಮೊದಲ ಉದಾಹರಣೆಯಾಗಿದೆ. ಭೌತ ಶಾಸ್ತ್ರ ವಿಷಯದಲ್ಲಿ ಪಿಎಚ್ ಡಿ ಮಾಡಿ ಪ್ಯಾರಿಸ್ ನಲ್ಲಿರುವ ಸೊರ್ಬೋನ್ನೆ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸಿದ್ದು, ತಮ್ಮ ಹೆಚ್ಚಿನ ಸಮಯವನ್ನು ಕೃತಕ ಮಳೆಯ ಕುರಿತು ಸಂಸದರಿಗೆ ಮೀಸಲಿಟ್ಟಿದ್ದರು. ಇದರ ಜೊತೆಗೆ ಭೂಕಂಪಕ್ಕೆ ಕಾರಣವಾಗುವ ಕೇಂದ್ರ ಬಿಂದುವಿನಲ್ಲಿ ವಿಕಿರಣಶೀಲತೆಯ ಗಮನಾರ್ಹ ಹೆಚ್ಚಳ ವಿದೆ ಎಂದು ವರದಿ ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ. ಆದರೆ ಇವರ ಆವಿಷ್ಕಾರದ ಕುರಿತು ಹೆಚ್ಚಿನ ಮನ್ನಣೆ ಸಿಗದಿರುವುದು ಬೇಸರದ ಸಂಗತಿ.