ಎಸ್‍ಎಎಫ್‍ಎಫ್‍ ಫುಟ್ಬಾಲ್ : 8 ಬಾರಿ ಪ್ರಶಸ್ತಿ ಗೆದ್ದ ಭಾರತ, ಮೆಸ್ಸಿ ದಾಖಲೆ ಸರಿಗಟ್ಟಿದ ಚೇಟ್ರಿ

ಢಾಕಾ : ಭಾರತ ಫುಟ್ಬಾಲ್ ತಂಡ 8ನೇ ಬಾರಿಗೆ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಟ್ರೋಫಿ ಗೆದ್ದು ಸಾಧನೆ ಮಾಡಿದೆ. ಅಲ್ಲದೇ ಇದೇ ಪಂದ್ಯದಲ್ಲಿ ನಾಯಕ ಸುನಿಲ್ ಚೇಟ್ರಿ ತಮ್ಮ ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆಯನ್ನು 80ಕ್ಕೆ ಏರಿಸಿಕೊಂಡು, ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ದಾಖಲೆಯನ್ನು ಸರಿಗಟ್ಟಿದ್ದಾರೆ.

ಬಾಂಗ್ಲಾದೇಶದ ರಾಜಧಾನಿ ಢಾಕಾದ ಬಂಗಬಂಧು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಪಂದ್ಯದ 21ನೇ ನಿಮಿಷದಲ್ಲಿ ನೇಪಾಳ ತಂಡಕ್ಕೆ ಗೋಲು ಗಳಿಸುವ ಅವಕಾಶ ಲಭಿಸಿದರೂ ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಯಿತು. ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳು ಗೋಲುರಹಿತ ಸಮಬಲ ಸಾಧಿಸಿದವು. ದ್ವಿತೀಯಾರ್ಧದ ಆರಂಭಗೊಂಡ ಕೆಲ ಹೊತ್ತಿನಲ್ಲೇ ನಾಯಕ ಸುನಿಲ್ ಛೇಟ್ರಿ 49ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಸುರೇಶ್ ಸಿಂಗ್ 50ನೇ ನಿಮಿಷದಲ್ಲಿ, ಸಹಲ್ ಅಬ್ದುಲ್ ಸಮದ್ ೯೦ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದಲ್ಲಿ ನೇಪಾಳ ಕನಿಷ್ಠ ಒಂದು ಗೋಲೂ ದಾಖಲಿಸಲು ವಿಫಲವಾಯಿತು.

ಸ್ಯಾಫ್ ಕಪ್ ಚಾಂಪಿಯನ್‌ಶಿಪ್‌ನಲ್ಲಿ 12 ಬಾರಿ ಫೈನಲ್ ತಲುಪಿದ್ದ ಭಾರತೀಯ ತಂಡ, ಈ ಬಾರಿಯೂ ಸೇರಿದಂತೆ ಎಂಟು ಬಾರಿ ಟೈಟಲ್ ತನ್ನದಾಗಿಸಿಕೊಂಡಿದೆ. ಐದು ಬಾರಿ ರನ್ನರ್ ಅಪ್ ಆಗಿದ್ದು, ಇದಕ್ಕೂ 2018ರಲ್ಲಿ ಮಾಲ್ಡೀವ್ ವಿರುದ್ಧ ಫೈನಲ್‌ನಲ್ಲಿ ಸೋಲು ಕಂಡಿತ್ತು. ಭಾರತವು ಈ ಹಿಂದೆ 1993, 1997, 1999, 2005, 2009, 2011, 2015ರಲ್ಲಿ ಸ್ಯಾಫ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಜಯಿಸಿತ್ತು.

× Chat with us