ಪಾಕ್‌ ಅಣ್ವಸ್ತ್ರ ಪಿತಾಮಹ ಎ.ಕ್ಯೂ.ಖಾನ್‌ ನಿಧನ

ಇಸ್ಲಮಾಬಾದ್: ಪಾಕಿಸ್ತಾನ ಅಣ್ವಸ್ತ್ರ ಪಿತಾಮಹ ಎಂದೇ ಹೆಸರಾಗಿದ್ದ ಅಬ್ದುಲ್‌ ಖಾದಿರ್‌ ಖಾನ್‌ (85) ಭಾನುವಾರ ನಿಧನರಾದರು. ಈಚೆಗೆ ಕೋವಿಡ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಎ.ಕೆ.ಖಾನ್‌ ಅವರು ಶ್ವಾಸಕೋಸ ಸಮಸ್ಯೆಯಿಂದ ಕೆಆರ್‌ಎಲ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.

ʻಡಾ. ಎ.ಕ್ಯೂ.ಖಾನ್‌ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವುಂಟಾಯಿತು. 1982ರಿಂದಲೂ ವೈಯಕ್ತಿಕವಾಗಿ ತುಂಬಾ ಚಿರಪರಿಚಿತರಾಗಿದ್ದರುʼ ಎಂದು ಪಾಕಿಸ್ತಾನ ರಾಷ್ಟ್ರಪತಿ ಆರೀಫ್‌ ಅಲ್ವಿ ಅವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

ʻದಾಳಿಗಳಿಂದ ದೇಶವನ್ನು ರಕ್ಷಿಸಿಕೊಳ್ಳಲು ಅಣ್ವಸ್ತ್ರ ಅಭಿವೃದ್ಧಿಗೆ ಖಾನ್ ತುಂಬಾ ಸಹಕಾರ ನೀಡಿದ್ದಾರೆ. ಅವರ ಸೇವೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲʼ ಎಂದು ಸ್ಮರಿಸಿದ್ದಾರೆ.

ಇಸ್ಲಾಮಿಕ್‌ ರಾಷ್ಟ್ರಕ್ಕೆ ವಿಶ್ವದಲ್ಲೇ ಮೊದಲ ಬಾರಿಗೆ ಅಣ್ವಸ್ತ್ರ ಶಕ್ತಿಯನ್ನು ಪ್ರದರ್ಸಿಸಿದ ವಿಜ್ಞಾನಿ ಎ.ಕ್ಯೂ.ಖಾನ್‌ ಜನಮಾನಸದಲ್ಲಿ ಹೀರೋ ಎನಿಸಿಕೊಂಡಿದ್ದರು.

ಇವರ ಅನ್ವೇಷಣೆಯನ್ನು ಪಾಶ್ಚಾತ್ಯ ದೇಶಗಳು ವಿರೋಧಿಸಿದವು. ತಂತ್ರಜ್ಞಾನಗಳನ್ನು ಕಳ್ಳತನ ಮಾಡಿ ಪಾತಕ ರಾಜ್ಯಗಳಿಗೆ ನೆರವು ನೀಡಲಾಗಿತ್ತಿದೆ ಎಂದು ದೂರಿವೆ.

× Chat with us