ಮಾಸ್ಕೊ: ಅಮೆರಿಕಾದ ಜಾಗತಿಕ ವ್ಯವಸ್ಥೆ ದುರ್ಬಲಗೊಳ್ಳುತ್ತಾ ಬರುತ್ತಿದೆ. ಆದರೆ, ನಮ್ಮ ದೇಶವು ಈಗ ಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ರಚಿಸುವಲ್ಲಿ ಮುಂಚೂಣಿಯಲ್ಲಿದೆ. ಸಾರ್ವಭೌಮ, ಬಲಿಷ್ಟ ರಷ್ಯಾ ಇಲ್ಲದೆ ಶಾಶ್ವತ, ಸ್ಥಿರ ಜಾಗತಿಕ ಸುವ್ಯವಸ್ಥೆ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಹೇಳಿದ್ದಾರೆ.
ರಾಜ್ಯ ಉಕೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಮಾಡುತ್ತಿರುವುದು ನಮ್ಮ ದೇಶವನ್ನು ನಾಶಮಾಡುವ ಪಾಶ್ಚಿಮಾತ್ಯರ ವಿರುದ್ಧದ ಸಂಘರ್ಷವಾಗಿದೆ. ರಷ್ಯಾವನ್ನು ಬಲಿಷ್ಟ, ಸ್ವತಂತ್ರ ಶಕ್ತಿಯನ್ನಾಗಿ, ನಾಗರಿಕ ದೇಶವನ್ನಾಗಿ ಉಳಿಸುವ ನಮ್ಮ ಉನ್ನತ ಐತಿಹಾಸಿಕ ಹಕ್ಕನ್ನು ರಕ್ಷಿಸುತ್ತಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ.
ಅಮೆರಿಕ ಮತ್ತು ಅದರ ಮಿತ್ರರಾಷ್ಟಗಳು ರಷ್ಯಾವನ್ನು ಛಿದ್ರಗೊಳಿಸಲು ಮತ್ತು ಲೂಟಿ ಮಾಡಲು ಪ್ರಯತ್ನಿಸುತ್ತಿವೆ. ಆದರೆ ನಾವು ರಷ್ಯಾ ಮಾತ್ರವಲ್ಲದೇ ಇಡೀ ಪ್ರಪಂಚದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಪಾಶ್ಚಿಮಾತ್ಯರಿಗೆ ರುಸೋಫೋಬಿಯಾ(ರಷ್ಯಾ ಕುರಿತು ಭಯ) ಕಾಡುತ್ತಿದೆ.
ನಮ್ಮ ವೈವಿಧ್ಯತೆ ಮತ್ತು ಸಂಸ್ಕೃತಿ, ಸಂಪ್ರದಾಯ, ಭಾಷೆಗಳು, ಜನಾಂಗೀಯ ಗುಂಪುಗಳ ಏಕತೆಯು ಪಾಶ್ಚಿಮಾತ್ಯ ಜನಾಂಗೀಯ ವಾದಿಗಳು ಮತ್ತು ವಸಾಹತುಶಾಹಿಗಳ ನಿಲುವುಗಳನ್ನು ಒಡೆಯುವ ಮತ್ತು ಬೇರ್ಪಡಿಸುವ ಅವರ ನಿಗ್ರಹ ಮತ್ತು ಶೋಷಣೆಯ ಕ್ರೂರ ಯೋಜನೆ ಹೊಂದಿಕೆಯಾಗುವುದಿಲ್ಲ. ಇದರಿಂದಾಗಿ ಕಲಹ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ.
ನಮ್ಮ ದೇಶದ ವಿರುದ್ಧ ನಡೆಯುವ ಆಕ್ರಮಣಕಾರಿ ಭಯೋತ್ಪಾದನೆ ಮತ್ತು ಉಗ್ರವಾದ, ಅಂತರ್ ಧರ್ಮೀಯ ಘರ್ಷಣೆ ಸೇರಿದಂತೆ ಯಾವುದೇ ಬಾಹ್ಯ ಹಸ್ತಕ್ಷೇಪ, ಪ್ರಚೋದನೆಗಳನ್ನು ಒಡ್ಡಿದರು ಅದನ್ನು ನಿಗ್ರಹಿಸುವ ಸಾಮಥ್ಯ ರಷ್ಯಾಗಿದೆ ಎಂದು ಪುಟಿನ್ ಪ್ರತಿಪಾದಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…