ಅಂತಾರಾಷ್ಟ್ರೀಯ

ಭಾರತ ಸೇರಿದಂತೆ ಯಾವ ಯಾವ ದೇಶಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹುಲಿಗಳಿವೆ ಗೊತ್ತಾ.?

ನವದೆಹಲಿ: ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯು ಸುಂದರ ಹಾಗು ಅಳಿವಿನಂಚಿನಲ್ಲಿರುವ ಪ್ರಾಣಿ. ಈ ಭವ್ಯ ಜೀವಿ ಪ್ರಪಂಚದ ಆಯ್ದ ಪ್ರದೇಶಗಳಲ್ಲಿ ಮಾತ್ರ ಇವೆ ಅನ್ನೋದೇ ಅಚ್ಚರಿಯ ವಿಚಾರ.

ಅತೀ ಸುಂದರ ಹಾಗೂ ಭವ್ಯ ಜೀವಿ ಹುಲಿಯು ಸುಮಾರು ಕಡೆ ಇಲ್ಲವೇ ಇಲ್ಲ. ಭಾರತದಲ್ಲಿ ಅತೀಹೆಚ್ಚು ಹುಲಿಗಳಿದ್ದು, ದೇಶಕ್ಕೆ ಇದೊಂದು ಹೆಮ್ಮೆಯ ವಿಷಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತದಲ್ಲಿ ರಣಥಂಬೋರ್‌ ಹಾಗು ಬಾಂಧವಗಢದಂತಹ ಸ್ಥಳಗಳು ಹುಲಿಗಳ ನೆಲೆಗೆ ಹೆಸರುವಾಸಿಯಾಗಿವೆ. ಭಾರತ ಹೊರತುಪಡಿಸಿದರೆ ರಷ್ಯಾದಲ್ಲಿ ಅಮುರ್‌ ಹುಲಿಗಳು, ಇಂಡೋನೇಷ್ಯಾ ಸುಮಾತ್ರಾನ್‌ ಹುಲಿಗಳಿಗೆ ನೆಲೆಯಾಗಿದೆ. ನೇಪಾಳವು ಕೂಡ ಚಿತ್ವಾನ್‌ ಮತ್ತು ಬಾರ್ಡಿಯಾ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳನ್ನು ರಕ್ಷಿಸುತ್ತಿದೆ. ಇದಲ್ಲದೇ ಮಲೇಷ್ಯಾದ ಮಲಯನ್‌ ಹುಲಿಗಳು ಮಲಯ ಪರ್ಯಾಯ ದ್ವೀಪದಲ್ಲಿ ಸಂಚರಿಸುತ್ತವೆ. ಬಾಂಗ್ಲಾದೇಶವು ತನ್ನ ಮ್ಯಾಂಗ್ರೋವ್‌ ಕಾಡುಗಳಲ್ಲಿ ರಾಯಲ್‌ ಬೆಂಗಾಲ್‌ ಹುಲಿಗಳಿಗೆ ಆತಿಥ್ಯ ವಹಿಸುತ್ತದೆ.

ಇನ್ನೂ ಭಾರತದಲ್ಲಿ 2022ರ ಹುಲಿಗಣತಿಯಂತೆ 3167 ಹುಲಿಗಳನ್ನು ಹೊಂದಿರುವ ಮೂಲಕ ಈ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಹುಲಿಗಳನ್ನು ಸಂರಕ್ಷಣೆ ಮಾಡುವ ಪ್ರಯತ್ನದಲ್ಲಿ ಭಾರತವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಹಾಗೆಯೇ ಕಾಡು ಹುಲಿಗಳಿಗೆ ಭಾರತವು ಜಾಗತಿಕ ನೆಲೆಯಾಗಿದೆ.

ಇದಲ್ಲದೇ ಬೇರೆ ದೇಶಗಳಲ್ಲಿ ಅಂದರೆ ರಷ್ಯಾದಲ್ಲಿ 371, ಇಂಡೋನೇಷ್ಯಾದಲ್ಲಿ 371, ನೇಪಾಳದಲ್ಲಿ 355, ಮಲೇಷ್ಯಾದಲ್ಲಿ 120, ಬಾಂಗ್ಲಾದೇಶದಲ್ಲಿ 106, ಥೈಲ್ಯಾಂಡ್‌ನಲ್ಲಿ 149 ಹುಲಿಗಳಿಗೆ ಎಂದು ಅಂದಾಜಿಸಲಾಗಿದೆ.

ಈ ಎಲ್ಲಾ ದೇಶಗಳಿಗಿಂತ ನಮ್ಮ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿದ್ದು, ತನ್ನ ವಿಸ್ತಾರವಾದ ರಾಷ್ಟ್ರೀಯ ಉದ್ಯಾನವನಗಳಾದ ರಣಥಂಬೋರ್‌, ಜಿಮ್‌ ಕಾರ್ಬೆಟ್‌ ಮತ್ತು ಬಾಂಧವ್‌ಗಢ್‌ಗಳಲ್ಲಿ ಅನೇಕ ಸಂಖ್ಯೆಯಲ್ಲಿ ಹುಲಿಗಳನ್ನು ಕಾಣಬಹುದಾಗಿದೆ.

 

 

 

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Share
Published by
ಕೆಂಡಗಣ್ಣಸ್ವಾಮಿ

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

17 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

18 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

19 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

20 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

23 hours ago