ಹೊಸದಿಲ್ಲಿ: ಲಂಡನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ವಿವಿಧ ಸಂವಾದ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ನೀಡಿರುವ ಹೇಳಿಕೆಗಳು ತೀವ್ರ ವಿವಾದ ಸೃಷ್ಟಿಸಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ರಾಹುಲ್ ಗಾಂಧಿ, ‘ಆರೆಸ್ಸೆಸ್ ವ್ಯಕ್ತಿಯ ಮಗಳು’ ಎಂದು ಪರಿಚಯಿಸಿಕೊಂಡ ಉದ್ಯಮಿಯನ್ನು ಶ್ಲಾಘಿಸಿರುವುದು ಕುತೂಹಲ ಮೂಡಿಸಿದೆ.
ಛಾತಮ್ ಹೌಸ್ ಸಂವಾದದಲ್ಲಿ ಲಂಡನ್ನಲ್ಲಿ ನೆಲೆಯೂರಿರುವ ಮಾಲಿನಿ ಮೆಹ್ರಾ ಎಂಬುವವರು ಭಾರತವು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು, ಅದರ ಕಡೆಗೆ ಮರಳಿ ಹೋಗಬೇಕಿದೆ ಎಂದು ಹೇಳಿದ್ದಾರೆ. ಇದನ್ನು ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.
ತಾಯ್ನಾಡಿನ ಈಗಿನ ಸ್ಥಿತಿಯನ್ನು ಕಂಡಾಗ ತುಂಬಾ ನೋವಾಗುತ್ತದೆ. ಹೆಮ್ಮೆಯ ಆರೆಸ್ಸಿಸ್ಸಿಗನಾಗಿದ್ದ ತಮ್ಮ ತಂದೆ, ಭಾರತ ಹಿಂದೆ ಇದ್ದಂತೆ ಈಗ ಇಲ್ಲ ಎನ್ನುತ್ತಾರೆ ಎಂಬುದಾಗಿ ಮಾಲಿನಿ ಮೆಹ್ರಾ ಸೋಮವಾರ ಸಂಜೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.