ಅಂತಾರಾಷ್ಟ್ರೀಯ

ಅಜ್ಜಿಯ ಕೋಟಿಗಟ್ಟಲೆ ಆಸ್ತಿ ʼನಾಯಿ-ಬೆಕ್ಕುʼಗಳ ಪಾಲು!

ಚೀನಾ: ಲೀಯು ಎಂಬ ಚೀನಾದ ವೃದ್ಧೆಯೋರ್ವಳು ತನ್ನ ಮಕ್ಕಳ ವರ್ತನೆಯಿಂದ ಬೇಸತ್ತು, ತಾನು ಸಾಕಿದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಆಸ್ತಿ ಬರೆದಿದ್ದಾಳೆ.

ಚೀನಾದ ಶಾಂಘೈನಲ್ಲಿ ಈ ಘಟನೆ ನಡೆದಿದ್ದು, ಲೀಯು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಅವರನ್ನು ಭೇಟಿಯಾಗಲು ಅವರ ಮಕ್ಕಳು ಬರಲಿಲ್ಲ.

ಫೋನ್ ಮಾಡಿಯೂ ಮಾತನಾಡಲಿಲ್ಲ. ತಾಯಿಯ ಬಗ್ಗೆ ಮಕ್ಕಳಿಗೆ ಯಾವುದೇ ಕಾಳಜಿ ಇಲ್ಲದಂತೆ, ಮಕ್ಕಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಲೀಯು ಜೊತೆ ಪ್ರತಿದಿನವೂ ನಿಯತ್ತಿನಿಂದ ಇದ್ದಿದ್ದು ಮಾತ್ರ, ಅವಳು ಸಾಕಿದ್ದ ನಾಯಿ ಮತ್ತು ಬೆಕ್ಕು.

ಇದೀಗ ಲೀಯು ತನ್ನ 23 ಕೋಟಿಗೂ ಮೀರಿದ ಆಸ್ತಿಯನ್ನು ತಾನು ಸಾಕಿದ ನಾಯಿ ಮತ್ತು ಬೆಕ್ಕಿಗೆ ಬರೆದಿಟ್ಟಿದ್ದಾರೆ. ಆಕೆಯ ಸಾವಿನ ಬಳಿಕ ಆ ಆಸ್ತಿ ಪಶು ಚಿಕಿತ್ಸಾಲಯಕ್ಕೆ ಸೇರುತ್ತದೆ. ಮತ್ತು ಅವರು ಈಕೆಯ ಸಾಕು ಪ್ರಾಣಿಗಳನ್ನು ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಾಗುತ್ತದೆ.

ಈ ಬಗ್ಗೆ ಮಾತನಾಡಿರುವ ಲೀಯು, ನನ್ನ ಮಕ್ಕಳು ನನಗೆ ಅನಾರೋಗ್ಯವೆಂದು ಗೊತ್ತಿದ್ದರೂ, ನನ್ನನ್ನು ಬಂದು ಭೇಟಿಯಾಗಲಿಲ್ಲ. ಫೋನನ್ ಮಾಡಿಯಾದರೂ ಮಾತನಾಡಬಹುದಿತ್ತು.

ಅದನ್ನೂ ಮಾಡಲಿಲ್ಲ. ನನ್ನೊಂದಿಗೆ ಪ್ರೀತಿಯಿಂದ ಇರುವುದು ನಾನು ಸಾಕಿದ ನಾಯಿ ಮತ್ತು ಬೆಕ್ಕು. ಹಾಗಾಗಿ ಇವುಗಳ ಹೆಸರಿಗೆ ನನ್ನ ಆಸ್ತಿಯನ್ನು ಬರೆದಿದ್ದೇನೆ. ನನ್ನ ಮರಣದ ನಂತರ, ಈ ಮಕ್ಕಳನ್ನು ಯಾರು ಕಾಳಜಿಯಿಂದ ಕಾಣುತ್ತಾರೋ, ಅವರಿಗೆ ನನ್ನೆಲ್ಲ ಆಸ್ತಿ ಹೋಗುತ್ತದೆ ಎಂದಿದ್ದಾರೆ.

andolanait

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

3 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

4 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

6 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

7 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

8 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

8 hours ago