ಟೆಲ್ ಅವಿವ್ : ಗಾಜಾದಲ್ಲಿನ ಆಸ್ಪತ್ರೆಯಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 500 ಜನರು ಮೃತಪಟ್ಟಿದ್ದಾರೆ ಎಂದು ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಈ ಘಟನೆ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಇಸ್ರೇಲಿ ವಾಯುದಾಳಿಯು ಅಮಾಯಕರನ್ನು ಕೊಂದಿದೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದರೆ, ಹಮಾಸ್ ಉಗ್ರರ ರಾಕೆಟ್ ದಾಳಿ ಕೈಕೊಟ್ಟು ಈ ಅವಘಡ ಸಂಭವಿಸಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ.
“ಈ ಘಟನೆಗೆ ಇಸ್ಲಾಮಿಕ್ ಜಿಹಾದ್ ಕಾರಣವಾಗಿದ್ದು, ಅದು ಉಡಾಯಿಸಿದ ರಾಕೆಟ್ ವಿಫಲಗೊಂಡು ಗಾಜಾದ ಆಸ್ಪತ್ರೆಗೆ ಅಪ್ಪಳಿಸಿದೆ ಎಂಬುದನ್ನು ವಿವಿಧ ಮೂಲಗಳ ಗುಪ್ತಚರ ಮಾಹಿತಿಗಳು ತಿಳಿಸಿವೆ” ಎಂದು ಇಸ್ರೇಲ್ ಸೇನೆ ಹೇಳಿದೆ.
ಈ ಘಟನೆ ಸಂದರ್ಭದಲ್ಲಿ ಇಸ್ರೇಲ್ ಆಸ್ಪತ್ರೆ ಸಮೀಪ ಯಾವುದೇ ವೈಮಾನಿಕ ಕಾರ್ಯಾಚರಣೆ ನಡೆಸುತ್ತಿರಲಿಲ್ಲ ಹಾಗೂ ಅಲ್ಲಿ ಬಳಸಿದ ರಾಕೆಟ್‌ಗಳು ತಮ್ಮ ಸಾಧನಕ್ಕೆ ಹೋಲಿಕೆಯಾಗುತ್ತಿಲ್ಲ ಎಂದು ವಕ್ತಾರ ಡೇನಿಯಲ್ ಹಗಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಮಾಸ್ ಉಗ್ರ ಸಂಘಟನೆಯ ಮಿತ್ರ ಗುಂಪು ಇಸ್ಲಾಮಿಕ್ ಜಿಹಾದ್ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. “ಗಾಜಾದಲ್ಲಿನ ಬ್ಯಾಪ್ಟಿಸ್ಟ್ ಅರಬ್ ನ್ಯಾಷನಲ್ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ಮೂಲಕ ನಡೆಸಿದ ಬರ್ಬರ ಹತ್ಯಾಕಾಂಡದಲ್ಲಿನ ತನ್ನ ಹೊಣೆಗಾರಿಕೆಯಿಂದ ಸುಳ್ಳುಗಳ ಹೆಣಿಗೆಗಳ ಮೂಲಕ ಹಾಗೂ ಪ್ಯಾಲೆಸ್ಟೀನ್‌ನ ಇಸ್ಲಾಮಿಕ್ ಜಿಹಾದ್ ಚಳವಳಿಯ ಕಡೆ ಬೆರಳು ತೋರಿಸುವ ಮೂಲಕ ತಪ್ಪಿಸಿಕೊಳ್ಳಲು ಜಿಯೋನಿಸ್ಟ್ ಶತ್ರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ” ಎಂದು ಅದು ಆರೋಪಿಸಿದೆ.
ದಾಳಿಗೆ ವ್ಯಾಪಕ ಖಂಡನೆ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿಯೇ ಈ ಭಯಾನಕ ದಾಳಿ ನಡೆದಿದೆ. “ಗಾಜಾದಲ್ಲಿನ ಅಲ್- ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ನಡೆದ ಸ್ಫೋಟ ಮತ್ತು ಅದರ ಪರಿಣಾಮ ಉಂಟಾದ ಭಾರಿ ಜೀವ ಹಾನಿಯಿಂದ ನನಗೆ ಆಕ್ರೋಶ ಹಾಗೂ ದುಃಖ ಉಂಟಾಗಿದೆ” ಎಂದು ಬೈಡನ್ ಹೇಳಿಕೆ ನೀಡಿದ್ದಾರೆ.
ಈ ಭೀಕರ ವಾಯು ದಾಳಿಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬಲವಾಗಿ ಖಂಡಿಸಿದ್ದಾರೆ. ಇದು ‘ಭಯಾನಕ ದಾಳಿ’ ಎಂದಿದ್ದಾರೆ. “ಸಂತ್ರಸ್ತರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿ ರಕ್ಷಣೆ ಹೊಂದಿವೆ” ಎಂದು ಗುಟೆರಸ್ ಹೇಳಿದ್ದಾರೆ.
ಬೈಡನ್ ಜತೆಗಿನ ಸಭೆ ರದ್ದು : ಆಸ್ಪತ್ರೆ ಮೇಲಿನ ಬಾಂಬ್ ದಾಳಿ ವಿರೋಧಿಸಿ ಇರಾನ್‌ನ ಟೆಹರಾನ್‌ನಲ್ಲಿನ ಬ್ರಿಟನ್ ಮತ್ತು ಫ್ರಾನ್ಸ್ ರಾಯಭಾರ ಕಚೇರಿಗಳ ಹೊರಗೆ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಒಂದು ದಿನದ ಸಾರ್ವಜನಿಕ ಶೋಕ ಪ್ರಕಟಿಸಿದ್ದಾರೆ. ದಾಳಿಗೆ ಇಸ್ರೇಲ್ ಮತ್ತು ಅಮೆರಿಕ ಕಾರಣ ಎಂದು ದೂಷಿಸಿದ್ದಾರೆ.
“ಗಾಜಾದ ಆಸ್ಪತ್ರೆಯಲ್ಲಿನ ಪ್ಯಾಲೆಸ್ಟೀನ್ ಸಂತ್ರಸ್ತರನ್ನು ಗಾಯಗೊಳಿಸಿದ ಅಮೆರಿಕ- ಇಸ್ರೇಲ್ ಬಾಂಬ್‌ಗಳ ಜ್ವಾಲೆಗಳು ಜಿಯೋನಿಸ್ಟ್‌ಗಳನ್ನು ಶೀಘ್ರದಲ್ಲಿಯೇ ಆಹುತಿ ಪಡೆಯಲಿದೆ” ಎಂದಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಜೋ ಬೈಡನ್ ಮಾತುಕತೆ ನಡೆಸಿದ್ದಾರೆ. ಆದರೆ ಬುಧವಾರ ಬೈಡನ್ ಜತೆ ಅಮ್ಮಾನ್‌ನಲ್ಲಿ ನಿಗದಿಯಾಗಿದ್ದ ಪ್ರಾದೇಶಿಕ ಸಭೆಯನ್ನು ಜೋರ್ಡಾನ್ ರದ್ದುಗೊಳಿಸಿದೆ. ಜೋರ್ಡಾನ್ ರಾಜ ಅಬ್ದುಲ್ಲಾ II, ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮೌದ್ ಅಬ್ಬಾಸ್, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ ಸಿಸ್ಸಿ ಅವರು ಬೈಡನ್ ಜತೆಗಿನ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು.
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…