ಕೊಲಂಬಿಯಾ : ದೇಶದ ಮೊದಲ ಕಪ್ಪು ಉಪಾಧ್ಯಕ್ಷರಾಗಿ ಫ್ರಾನ್ಸಿಯಾ ಮಾರ್ಕ್ವೆಜ್ ಆಯ್ಕೆ

ಬೊಗೋಟಾ : ಕೊಲಂಬಿಯ ದೇಶದ ಮೊದಲ ಕಪ್ಪು ಉಪಾಧ್ಯಕ್ಷರನ್ನಾಗಿ ಫ್ರಾನ್ಸಿಯಾ ಮಾರ್ಕ್ವೆಜ್ ಎಂಬ ಮಹಿಳೆಯನ್ನು ಆಯ್ಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಮಾಜಿ ಎಡಪಂಥಿಯ ರೆಬೆಲ್ ಗುಸ್ಟಾವೊ ಪೆಟ್ರೋ ಆಗಸ್ಟ್ 7 ರಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಅವರ ಆಡಳಿತದಲ್ಲಿ ಪ್ರಮುಖರಾಗಿರುವ ಫ್ರಾನ್ಸಿಯಾ ಮಾರ್ಕ್ವೇಜ್ ಭಾನುವಾರ ನಡೆದ ಚುನಾವಣೆಯಲ್ಲಿ ಬಹುಮತದಿಂದ ಗೆದ್ದಿದ್ದಾರೆ.

ಮಾರ್ಕ್ವೆಜ್ ಅವರು ಗೋಲ್ಡನ್ ಪರಿಸರ ಪ್ರಶಸ್ತಿ ಮತ್ತು ಪರಿಸರ ನೊಬೆಲ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಹಾಗೂ ಪರ್ಯಾಯ ಡೆಮಾಕ್ರಟಿಕ್ ಸಮೀಕ್ಷೆಯಿಂದ ಬೆಂಬಲಿಗರಾಗಿದ್ದರು. ಅಲ್ಲಿಯವರು 7.80.000 ಕ್ಕಿಂತ ಹೆಚ್ಚು ಮತಗಳಿಂದ ಗೆ 2ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಕೊಲಂಬಿಯದಲ್ಲಿ ಇಲ್ಲಿಯತನಕ ಉಪಾಧ್ಯಕ್ಷ ಸ್ಥಾನವನ್ನು ಹೊಂದಿರುವ ಇತರರಿಗಿಂತ ಮಾರ್ಕ್ವೆಜ್ ಬಿನ್ನ ಎಂದು ಮಾನವ ಹಕ್ಕುಗಳ ಗುಂಪಿನ ಲ್ಯಾಟಿನ್ ಅಮೆರಿಕದ ವಾಷಿಂಗ್ಟನ್ ಕಚೇರಿಯ ಆಂಡಿಸ್ ನಿರ್ದೇಶಕ ಗಿಮೆನಾ ಸ್ಯಾಂಚೆಜ್ ಹೇಳಿದ್ದಾರೆ.

ಮಾರ್ಕ್ವೆಜ್ ಅವರು ಜಲವಿದ್ಯುತ್ ಯೋಜನೆಯ ವಿರುದ್ಧ ಅಭಿಯಾನಗಳನ್ನು ಆಯೋಜಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಇದೀಗ ಕಪ್ಪು ಕೊಲಂಬಿಯನ್ನರ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳ ಪ್ರಬಲ ವಕ್ತಾರರಾಗಿ ಮಾರ್ಕ್ವೆಜ್ ಹೊರಹೊಮ್ಮಿದರು.

ಫ್ರಾನ್ಸಿಯಾ ಮಾರ್ಕ್ವೇಜ್ 1981 ರಲ್ಲಿ ಸೌರಜ್ ನ ಕಾಕಾ ದಲ್ಲಿ ಜನಿಸಿದರು. ಪರಿಸರ ಕಾರ್ಯಕರ್ತೆಯಾಗಿ ಮಾನವ ಹಕ್ಕುಗಳು ಮತ್ತು ಸ್ತ್ರೀವಾದದ ರಕ್ಷಕ್ಷರಾಗಿ ಹೊರಹೊಮ್ಮಿದ್ದಾರೆ.