ಫೇಸ್‌ ಮ್ಯಾಪಿಂಗ್‌ ವಿಧಾನದಲ್ಲಿ ಬಯಲಾಯ್ತು ನೋಡಿ ವಿಶ್ವದ ಅತ್ಯಂತ ಸುಂದರ ಸೆಲೆಬ್ರಿಟಿ ಮುಖಗಳು

ಲಂಡನ್‌ (ಯುಕೆ) : ಲಂಡನ್‌ನಲ್ಲಿರುವ ಸೆಂಟರ್‌ ಫಾರ್‌ ಅಡ್ವಾನ್ಸ್‌ ಫೇಶಿಯಲ್‌ ಕಾಸ್ಮೆಟಿಕ್ಸ್‌ ಮತ್ತು ಪ್ಲಾಸ್ಟಿಕ್‌ ಸರ್ಜರಿಯ ಡಾ. ಜೂಲಿಯನ್‌ ಡಿ ಸಿಲ್ವಾ ಅವರು 2016 ರಲ್ಲಿ ತಮ್ಮ ಸಂಶೋಧನೆ ಯ ಮೂಲಕ ವಿಶ್ವದ ಅತ್ಯಂತ ಸುಂದರವಾದ ಮುಖ ಹೊಂದಿರುವವರನ್ನು ಕಂಡುಹಿಡಿಯಲು ಪ್ರಾಚೀನ ಫೇಸ್‌ ಮ್ಯಾಪಿಂಗ್‌ ತಂತ್ರ ‘PHI”  ಅನ್ನು ಬಳಸಿದ್ದರು ಕಂಡುಹಿಡಿದಿದ್ದರು ಇದೀಗ ಫೇಸ್‌ ಮ್ಯಾಪಿಂಗ್‌ ವಿಧಾನದ ಮೂಲಕ  ನಟಿ ಅಂಬರ್‌ ಹರ್ಡ್‌ ಅವರನ್ನು ವಿಶ್ವದ ಅತ್ಯಂತ ಸುಂದರ ಮಹಿಳೆ ಮತ್ತು ʼದಿ ಬ್ಯಾಟ್ಸ್‌ಮನ್‌ʼ ನಟ ರಾಬರ್ಟ್‌ ಪ್ಯಾಟಿನ್ಸನ್‌ ಅವರನ್ನು ವಿಶ್ವದ ಅತ್ಯಂತ ಸುಂದರ ವ್ಯಕ್ತಿಯನ್ನು ವಿಶ್ವದ ಸುಂದರ ಸೆಲೆಬ್ರಿಟಿಗಳು ಎಂದು ಘೋಷಿಸಲಾಗಿದೆ.

ಮುಖವು ಎಷ್ಟು ಪರಿಪೂರ್ಣವಾಗಿದೆ ಎಂಬುದನ್ನು ಲೆಕ್ಕಹಾಕಲು ‘ಫೈ'(‘PHI) ಎಂಬುದು ಗ್ರೀಕ್ ಫೇಸ್ ಮ್ಯಾಪಿಂಗ್ ತಂತ್ರವನ್ನು ಬಳಸಲಾಗಿದೆ. ಇದನ್ನು ಸೌಂದರ್ಯ 1.618ರ ಗ್ರೀಕ್ ಗೋಲ್ಡನ್ ಅನುಪಾತ ಎಂದೂ ಕರೆಯಲಾಗುತ್ತದೆ. ಡಾ. ಸಿಲ್ವಾ ಅವರು ಬಳಸಿದ್ದು ಈ ತಂತ್ರವನ್ನೆ.

ಅಂಬರ್ ಹರ್ಡ್ ಅವರ ಮುಖವು ಗ್ರೀಕ್ ಗೋಲ್ಡನ್ ಅನುಪಾತಕ್ಕೆ 91.85 ಪ್ರತಿ ಶತ ಕಂಡುಹಿಡಿದಿದೆ. ಅವರನ್ನು  ಹೀಗಾಗಿ ಇವರನ್ನು ‘ವಿಶ್ವದ ಅತ್ಯಂತ ಸುಂದರ ಮಹಿಳೆ’ ಎಂದು ಘೋಷಿಸಿದೆ.

ಇದರೊಂದಿಗೆ, ಡಾ.ಸಿಲ್ವಾ ಇದೇ ವಿಧಾನವನ್ನು ಬಳಸಿ ರಾಬರ್ಟ್ ಪ್ಯಾಟಿನ್ಸನ್ 92.15 ಪ್ರತಿ ಶತ ನಿಖರತೆಯೊಂದಿಗೆ ‘ವಿಶ್ವದ ಅತ್ಯಂತ ಸುಂದರ ವ್ಯಕ್ತಿ’ ಎಂದು ಘೋಷಿಸಿದರು. ನಂತರ ‘ಮ್ಯಾನ್ ಆಫ್ ಸ್ಟೀಲ್’ ನಟ ಹೆನ್ರಿ ಕ್ಯಾವಿಲ್ ಶೇ.91.64 ನಿಖರತೆಯೊಂದಿಗೆ ಮತ್ತು ಬ್ರಾಡ್ಲಿ ಕೂಪರ್ ಮತ್ತು ಬ್ರಾಡ್ ಪಿಟ್ ಕ್ರಮವಾಗಿ ಶೇ 90.55 ಮತ್ತು ಶೇ. 90.51 ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.