ಓಲಾ ಮತ್ತು ಉಬರ್ ವಿಲೀನವಾಗುತ್ತಿವೆ ಎಂಬ ಮಾತುಕತೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಈ ಬಗ್ಗೆ ಓಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಿಶ್ ಅಗರ್ವಾಲ್ ಅವರು ಸ್ಪಷ್ಟನೆ ನೀಡಿದ್ದಾರೆ.
ಓಲಾ ಬಹಳ ಲಾಭದಾಯಕ ಮತ್ತು ಉತ್ತಮವಾಗಿ ಬೆಳೆಯುತ್ತಿದೆ ಎಂದು ಟ್ವೀಟ್ ಮಾಡಿರುವ ಅವರು ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ನಿರಾಕರಿಸಿದ್ದಾರೆ. ಇತ್ತ ಉಬರ್ ಸಹ ವಿಲೀನ ಮಾತುಕತೆಯನ್ನು ನಿರಾಕರಿಸಿದ್ದು ಮಾಧ್ಯಮಗಳಲ್ಲಿ ಬಿತ್ತರವಾದ ಆ ವರದಿಯು ತಪ್ಪಾಗಿದೆ ನಾವು ಉಬರ್ ಜೊತೆ ವಿಲೀನದ ಮಾತುಕತೆಯನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.
2022ರಲ್ಲಿ ಉಬರ್ ತನ್ನ ಸ್ಥಳೀಯ ಆಹಾರ ವಿತರಣಾ ವ್ಯವಹಾರ ಉಬರ್ ಇಟ್ಸ್ ಅನ್ನು ಜೊಮೊಟೊಗೆ ಮಾರಾಟ ಮಾಡಿತ್ತು.