ಒಟ್ಟಾವ : ಜಿ-20 ಶೃಂಗಸಭೆಗೆ ಬಂದು ಖಲಿಸ್ತಾನಿ ಪರ ಮಾತನಾಡಿದ್ದ ಕೆನಡಾ ಸಿಎಂ ಜಸ್ಟೀನ್ ಟ್ರುಡೋ ನಂತರ ನಡೆದ ಕೆಲ ವಿದ್ಯಮಾನಗಳಿಂದ ತೀವ್ರ ಮುಜುಗರಕ್ಕೊಳಗಾಗಿದ್ದು, ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಈಗ ಭಾರತದ ವಿರುದ್ಧ ಕತ್ತಿ ಮಸೆಯಲು ಮುಂದಾಗಿದ್ದಾರೆ.
ಖಲಿಸ್ತಾನಿಗಳನ್ನು ಮಟ್ಟ ಹಾಕಲಾಗದು, ಅವರ ಪ್ರತಿಭಟನೆಯನ್ನು ನಿಲ್ಲಿಸಲಾಗದು ಎಂದು ಭಾರತಕ್ಕೆ ಬಂದಿದ್ದ ವೇಳೆ ಹೇಳಿಕೆ ನೀಡಿದ್ದ ಜಸ್ಟೀನ್ ಟ್ರುಡೋ ಅವರ ಸರ್ಕಾರ ಈಗ ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿರುವ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ವಜಾ ಮಾಡಿದೆ. ಭಾರತದ ಮೋಸ್ಟ್ ವಾಂಟೆಂಡ್ ಲಿಸ್ಟ್ನಲ್ಲಿದ್ದ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕಳೆದ ಜೂನ್ನಲ್ಲಿ ಖಲಿಸ್ತಾನಿ ಉಗ್ರ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಜ್ಜರ್ನ ಹತ್ಯೆಯಾಗಿದ್ದು, ಈ ಹತ್ಯೆಯಲ್ಲಿ ಭಾರತದ ಪ್ರಮುಖ ಪಾತ್ರವಿದೆ ಎಂದು ಕೆನಡಾ ಆರೋಪಿಸಿದ್ದು, ಇದಕ್ಕೆ ಪ್ರತೀಕಾರವಾಗಿ ಒಟ್ಟವಾದಲ್ಲಿರುವ ಭಾರತದ ಗುಪ್ತಚರ ಇಲಾಖೆ ಮುಖ್ಯಸ್ಥನ್ನು ತೆಗೆದು ಹಾಕಿದೆ. ಜಿ-20 ಶೃಂಗಸಭೆಯ ನಂತರ ಕೆನಡಾ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಈ ಮಧ್ಯೆ ಕೆನಡಾದ ಈ ನಿರ್ಧಾರ ಈಗ ಈ ಸಂಬಂಧವನ್ನು ಮತ್ತಷ್ಟು ಕೆಡಿಸಿದೆ.
ಕಳೆದ ಜೂನ್ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಈ ಹತ್ಯೆಗೂ ಭಾರತೀಯ ಏಜೆಂಟರಿಗೆ ಸಂಬಂಧವಿದೆ ಎಂದು ತಮ್ಮ ಸರ್ಕಾರವು ವಿಶ್ವಾಸಾರ್ಹ ಮೂಲಗಳಿಂದ ಆರೋಪಗಳನ್ನು ಹೊಂದಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾ ಸಂಸತ್ತಿನ ವಿರೋಧ ಪಕ್ಷದ ತುರ್ತು ಅಧಿವೇಶನದಲ್ಲಿ ಹೇಳಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಭಾರತ ತನ್ನ ನಿಲುವು ಸ್ಪಷ್ಟಪಡಿಸುವಂತೆ ಅವರು ಪ್ರಬಲವಾಗಿ ಆಗ್ರಹಿಸಿದ್ದಾರೆ.