ಮೇಲ್ಬೋರ್ನ (ಆಸ್ಟ್ರೇಲಿಯಾ) : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಹೈತಿಹಾಸಿಕ ಬದಲಾವಣೆಯತ್ತ ದಾಪುಗಾಲು ಇಡುತ್ತಿದೆ, ಮೋದಿ ಅವರು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಜೀವನವನ್ನು ಸ್ಪರ್ಶಿಸಲು ಯತ್ನಿಸುತ್ತಾರೆ ಮತ್ತು ಪ್ರತಿಯೊಬ್ಬ ಭಾರತೀಯರು ಇವರಿಂದ ನಿರೀಕ್ಷಿಸಿದ್ದನು ಪಡೆಯಲು ಸಾಧ್ಯ ಈ ಮೂಲಕ ಭಾರತವು ಮೋದಿ ಅವರಿಂದ ಎಲ್ಲವನ್ನು ಪಡೆದುಕೊಳ್ಳುತ್ತಿದೆ ಅವರ ಅವಿರತಶ್ರಮ ಶ್ಲಾಘನೀಯ ಎಂದು ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ತಿಳಿಸಿದರು.
ಎನ್ ಐಡಿ ಪೌಂಡೇಶನ್ ವತಿಯಿಂದ ವಿಶ್ವ ಸದ್ಭಾವನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು “ಹಾರ್ಟ್ ಫೆಲ್ಟ್-ದಲೆಗಸಿ ಆಪ್ ಹೋಪ್” ಮತ್ತು “ಮೋದಿ @ 20: ಡ್ರೀಮ್ಸ್ ಮೀಟ್ ಡೆಲಿವರಿ” ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶಿಷ್ಟ ಮತ್ತು ಅಗಾಧವಾದ ಯಶಸ್ವಿ ಆಡಳಿತ ಮಾನವೀಯತೆ ಮತ್ತು ಪ್ರೀತಿ ವಾತ್ಸಲ್ಯವನ್ನು ಬಿಂಬಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಟ್ರೇಲಿಯ ಪಾರ್ಲಿಮೆಂಟಿನ ಸದಸ್ಯರಾದ ಜೂಲಿಯನ್ ಹಿಲ್, ಎನ್ಐಡಿ ಫೌಂಡೇಶನ್ ಮತ್ತು ಕುಲಪತಿಗಳು ಚಂಡಿಗಡ ವಿಶ್ವವಿದ್ಯಾಲಯದ ಪ್ರೊ ಹಿಮಾನಿ ಸೂದ್, ಏನ್ ಐ ಡಿ ಫೌಂಡೇಶನ್ ಸ್ಥಾಪಕ ಜೋಸೆಫ್ ಹವೆಲ್, ಸೇರಿದಂತೆ ಪಾರ್ಲಿಮೆಂಟ್ ಮತ್ತು ಸೆನೆಟ್ ನ ಸದಸ್ಯರು, ಉದ್ಯಮಿಗಳು, ಕಾರ್ಪೊರೇಟ್ ನಾಯಕರು, ಶಿಕ್ಷಣ ತಜ್ಞರು ಇದ್ದರು.