ನವದೆಹಲಿ: ಟೆಸ್ಲಾ ಓನರ್ ಎಲೋನ್ ಮಸ್ಕ್ ಅವರನ್ನು ಹಿಂದಿಕ್ಕಿರುವ ಫ್ರೆಂಚ್ ಉದ್ಯಮಿ ಹಾಗೂ ಎಲ್‌ಎಚ್‌ಎಂವಿ ಸಿಇಒ ಬರ್ನಾರ್ಡ್ ಆರ್ನಾಲ್ಟ್ ಅವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೆಂಬ ಸ್ಥಾನವನ್ನು ಮತ್ತೆ ಪಡೆದಿದ್ದಾರೆ.
ಫೋರ್ಟ್ಸ್ ಪ್ರಕಾರ, ಲೂಯಿ ವಿಟಾನ್ ನಂತಹ ಬ್ರಾಂಡ್ ಗಳನ್ನು ಒಳಗೊಂಡಿರುವ ಜಾಗತಿಕ ಐಷಾರಾಮಿ ಸರಕುಗಳ ಕಂಪನಿ ಎಲ್ ವಿಎಂಎಚ್ ನ ಅಧ್ಯಕ್ಷ ಮತ್ತು ಸಿಇಒ ಮತ್ತು ಅವರ ಕುಟುಂಬದ ನಿವ್ವಳ ಮೌಲ್ಯವು 23.6 ಬಿಲಿಯನ್ ಡಾಲರ್ ಹೆಚ್ಚಳದ ನಂತರ 207.8 ಬಿಲಿಯನ್ ಡಾಲರ್ ಗೆ ಏರಿದೆ. ಏತನ್ಮಧ್ಯೆ, ಟೆಸ್ಲಾ ಸಿಇಒ ನಿವ್ವಳ ಮೌಲ್ಯವು 204.5 ಬಿಲಿಯನ್ ಡಾಲರ್ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದೀಗ ಬೆರ್ನಾರ್ಡ್ ಆರ್ನಾಲ್ಡ್ 207 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೆ ಎರಡನೇ ಸ್ಥಾನದಲ್ಲಿರುವ ಎಲಾನ್ ಮಸ್ಕ್ ಅವರ ಒಟ್ಟು ಸಂಪತ್ತಿನ ಮೌಲ್ಯ 204.7 ಬಿಲಿಯನ್ ಡಾಲರ್ ಆಗಿದೆ. ಜೆಫ್ ಬೆಸ್ ಮೂರನೇ ಸ್ಥಾನದಲ್ಲಿ (181.3 ಬಿಲಿಯನ್ ಡಾಲರ್), ಲಾರಿ ಎಲ್ಲಿಸನ್ ನಾಲ್ಕನೇ ಸ್ಥಾನದಲ್ಲಿ (142.2 ಬಿಲಿಯನ್ ಡಾಲರ್), ಮಾರ್ಕ್ ಝುಕರ್ ಬರ್ಗ್ ಐದನೇ ಸ್ಥಾನದಲ್ಲಿ (1391.1 ಬಿಲಿಯನ್ ಡಾಲರ್) ಮತ್ತು ವಾರೆನ್ ಬಫೆಟ್ (127.2 ಬಿಲಿಯನ್ ಡಾಲರ್)ಆರನೇ ಸ್ಥಾನದಲ್ಲಿದ್ದಾರೆ.
ಆದರೆ ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ 199 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನೊಂದಿಗೆ ಎಲಾನ್ ಮಸ್ಕ್ ಈಗಲೂ ಮೊದಲನೇ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಅಮೆಝಾನ್ ಮುಖ್ಯಸ್ಥ ಜೆಫ್ ಬೆರೋಸ್ (184 ಬಿಲಿಯನ್ ಡಾಲರ್) ಮತ್ತು ಮೂರನೇ ಸ್ಥಾನದಲ್ಲಿ ಬೆರ್ನಾರ್ಡ್ ಆರ್ನಾಲ್ಡ್ (183 ಬಿಲಿಯನ್ ಡಾಲರ್) ಇದ್ದಾರೆ.
ಫ್ರಾನ್ಸ್ ದೇಶದ ಉದ್ಯಮಿಯಾದ ಬರ್ನಾರ್ಡ್ ಆರ್ನಾಲ್ಡ್ ಅವರು ಎಲ್‌ಎಂವಿಎಚ್ ಎಂಬ ಲಕ್ಷುರಿ ವಸ್ತುಗಳ ಕಂಪನಿಯ ಸಿಇಒ ಆಗಿದ್ದಾರೆ. ಬಹಳ ದುಬಾರಿ ಹಾಗೂ ಉಚ್ಚ ಗುಣಮಟ್ಟದ ಲೂಯಿಸ್ ವ್ಯೂಟನ್ ಸೇರಿದಂತೆ ವಿವಿಧ ಬ್ರಾಂಡ್‌ಗಳ ಅಡಿಯಲ್ಲಿ ಹಲವು ಐಷಾರಾಮಿ ವಸ್ತುಗಳನ್ನು ಇವರ ಕಂಪನಿ ತಯಾರಿಸಿ ಮಾರುತ್ತದೆ.
ಹೊಸದಿಲ್ಲಿ : ವೇಗ, ಸೌಲಭ್ಯ, ಆರಾಮಕ್ಕಾಗಿಯೇ ಜನಪ್ರಿಯವಾಗಿರುವ ವಂದೇ ಭಾರತ್ ಇದೀಗ ಸ್ಲೀಪರ್ ಆವೃತ್ತಿ ಮೂಲಕವೂ ಹಳಿಗಿಳಿಯಲು ಸಜ್ಜಾಗಿದೆ. ಪ್ರಯಾಣಿಕರ…
ರಾಯಚೂರು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಕಾಯ್ದೆಯನ್ನು ಹೊಸ ಹೆಸರಲ್ಲಿ ಹೊಸ ಕಾಯ್ದೆಯೆಂದು ಘೋಷಿಸಿರುವ…
ಕ್ಯಾರಕಾಸ್ : ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು…
ಮಂಡ್ಯ : ಪ್ರಸ್ತುತ ಭಾರತ ದೇಶದಲ್ಲಿ ಮಹಿಳಾ ಸಾಕ್ಷರತೆ ಶೇ.69ರಷ್ಟಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು. ನಗರದ ಹರ್ಡೀಕರ್ಭವನದಲ್ಲಿ…
ಮೈಸೂರು : ನಗರ ಮತ್ತು ಹೊರ ವಲಯದ ಬಡಾವಣೆಗಳು, ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ದಿನದ 24 ಗಂಟೆಗಳ ಕಾಲ ಕುಡಿಯುವ…
ಗುವಾಹಟಿ : ಭಾರತ ಮತ್ತು ಬಾಂಗ್ಲಾದೇಶ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉದ್ವಿಘ್ನಗೊಂಡಿರುವ ನಡುವೆ, ಇಂಡಿಯನ್ ಪ್ರಿಮಿಯರ್ ಲೀಗ್ನ(ಐಪಿಎಲ್) 2026ರ…