ಮಕ್ಕಳ ಮೇಲೆ ಕಾಳಜಿ ವಹಿಸಲು ಪೋಷಕರೇ ಆಗಬೇಕು ಎಂದೇನಿಲ್ಲ. ಅದರಲ್ಲೂ ಮಾನವನಿಗಿಂತಲೂ ಪ್ರಾಣಿಗಳು ಹೆಚ್ಚು ಮರಿಗಳ ಮೇಲೆ ಕಾಳಜಿವಹಿಸುತ್ತವೆ. ಈ ಉದಾಹಣೆಯುಳ್ಳ ಎಷ್ಟೋ ಸನ್ನಿವೇಷಗಳ ವಿಡಿಯೋಗಳನ್ನು ನೋಡಿತ್ತಲೇ ಇರುತ್ತೇವೆ. ಅದೇ ರೀತಿ ಸಿಯೋಲ್ ಗ್ರಾಂಡ್ ಪಾರ್ಕ್ನಲ್ಲೂ ಅಧ್ಬುತ ಎನ್ನುವ ದೃಶ್ಯ ಸೆರೆಯಾಗಿದೆ.
ಇಲ್ಲೊಂದು ಆನೆ ಮರಿ ತನ್ನ ಸೊಂಡಲಿಯಲ್ಲಿ ನೀರಿನ ಹೊಂಡದಲ್ಲಿ ಆಡಲು ಹೋಗಿ ಆಯಾ ತಪ್ಪಿ ಹೊಂಡದೊಳಗೆ ಬಿದ್ದುಬಿಡುತ್ತದೆ. ಮರಿ ಆನೆ ಪಕ್ಕದಲ್ಲೇ ಇದ್ದ ಮತ್ತೊಂದು ಆನೆ ಅದನ್ನು ಹೇಗಾದರು ಕಾಪಾಡಬೇಕು ಎಂದುಕೊಂಡರು ಗಾಬರಿಗೆ ಏನು ಮಾಡಬೇಕು ಎಂದು ಅದಕ್ಕೆ ತಿಳಿಯುವುದಿಲ್ಲ.
ಅಲ್ಲೇ ಸ್ವಪ್ಪ ಅಂತರದಲ್ಲಿದ್ದ ಮಗದೊಂದು ಆನೆ ಅಲ್ಲಿಂದ ಓಡಿಬಂದು ಮತ್ತೊಂದು ಆನೆಯನ್ನು ಕರೆದುಕೊಂಡು ನೀರಿನ ಹೊಂಡಕ್ಕೆ ಇಳಿಯುತ್ತವೆ. ಮರಿಆನೆ ಇದ್ದ ಜಾಗಕ್ಕೆ ಹೋಗಿ ಮೇಲೆ ಕರೆದುಕೊಂಡು ಬರುತ್ತದೆ.
ತಾಯಿಯ ಪ್ರೀತಿ ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಮೂಕ ಪ್ರಾಣಿಗಳ ಪ್ರೀತಿ, ಕಾಳಜಿ, ಸಮಯ ಪ್ರಜ್ಞೆ ಯಾರಿಂದಲೂ ಹೇಳಲು ಸಾಧ್ಯವಿಲ್ಲ.
In the Seoul zoo, two elephants rescued baby elephant drowned in the pool pic.twitter.com/zLbtm84EDV
— Gabriele Corno (@Gabriele_Corno) August 13, 2022