ಜಿನಿವಾ: ಸ್ವಿಜರ್ಲ್ಯಾಂಡ್ನ ಜಿನಿವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಯ ಎದುರು ಭಾರತ ವಿರೋಧಿ ಪೋಸ್ಟರ್ಗಳನ್ನು ಹಾಕಿರುವ ಬಗ್ಗೆ ಸ್ವಿಜರ್ಲ್ಯಾಂಡ್ ರಾಯಭಾರಿಗೆ ಭಾರತ ಭಾನುವಾರ ಸಮನ್ಸ್ ಜಾರಿಗೊಳಿಸಿದೆ.
ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ(ಪಶ್ಚಿಮ) ಅವರು ನವದೆಹಲಿಯಲ್ಲಿ ಇರುವ ಸ್ವಿಜರ್ಲ್ಯಾಂಡ್ ರಾಯಭಾರಿಯನ್ನು ಕರೆದು, ಭಾರತ ವಿರೋಧಿ ಪೋಸ್ಟರ್ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ವಿಜರ್ಲ್ಯಾಂಡ್ ರಾಯಭಾರಿ, ಗಂಭೀರತೆಯೊಂದಿಗೆ ಭಾರತದ ಕಳವಳದ ಬಗ್ಗೆ ಸ್ವಿಜರ್ಲ್ಯಾಂಡ್ ಸರ್ಕಾರಕ್ಕೆ ತಿಳಿಸಲಾಗುವುದು. ಜಾಹೀರಾತು ಪ್ರದರ್ಶನಕ್ಕೆ ವಿಶ್ವಸಂಸ್ಥೆ ಕಟ್ಟಡದ ಎದುರು ಎಲ್ಲರಿಗೂ ಅವಕಶವಿದೆ. ಆದರೆ ಈ ಪೋಸ್ಟರ್ಗೂ ಸ್ವಿಜರ್ಲ್ಯಾಂಡ್ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.