ವಾಷಿಂಗ್ಟನ್: ಕಳೆದೆರಡು ವಾರಗಳಿಂದ ಅಮೆರಿಕ ದೇಶದಲ್ಲಿ ಮಕ್ಕಳು ಸೇರಿದಂತೆ ನಾಗರಿಕರ ಮೇಲೆ ಬಂದೂಕುದಾರಿಗಳು ಗುಂಡಿನ ಸುರಿಮಳೆಗೈದಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಸರ್ಕಾರವು ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವುದರ ಜೊತೆಗೆ, ಶಸ್ತ್ರಾಸ್ತ್ರಗಳನ್ನು ಖರೀದಿಸುವರಿಗೆ ಕನಿಷ್ಠ 18 ರಿಂದ 21 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಿದೆ.
ಈ ಬಗ್ಗೆ ಶ್ವೇತ ಭವನದಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಜೋ ಬೖೆಡನ್ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸಬೇಕಾಗಿದೆ, ಅದು ಸಾಧ್ಯವಾಗದಿದ್ದರೆ. ಅವುಗಳನ್ನು ಖರೀದಿಸಲು ವಯಸ್ಸನ್ನು ಹೆಚ್ಚಿಸಬೇಕಾಗಿದೆ. ಇದರ ಜೊತೆಗೆ ಬಂದೂಕು ತಯಾರಕರ ಹೊಣೆಗಾರಿಕೆಯಿಂದ ವಿನಾಯಿತಿಯನ್ನು ರದ್ದುಗೊಳಿಸಬೇಕು ಎಂದು ಹೇಳಿದ್ದಾರೆ.