ಹೊಸದಿಲ್ಲಿ: ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಕೂಟದಲ್ಲಿ ಅರ್ಜೆಂಟೈನಾವನ್ನು ಸೌದಿ ಅರೇಬಿಯಾ ತಂಡ ೨-೧ ಗೋಲುಗಳಿಂದ ಮಣಿಸಿದೆ. ಈ ಐತಿಹಾಸಿಕ ಜಯವನ್ನು ಸಂಭ್ರಮಿಸಲು ಸೌದಿ ಸರ್ಕಾರ ಬುಧವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿತ್ತು.
ಬುಧವಾರ ಎಲ್ಲ ಸಾರ್ವಜನಿಕ, ಖಾಸಗಿ ಸಂಸ್ಥೆಗಳು, ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಸಾರಲಾಗಿತ್ತು. ಸೌದಿ ದೊರೆ ಕಿಂಗ್ ಸಲ್ಮಾನ್ ರಜೆ ಘೋಷಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದರು.
ಸೌದಿ ರಾಜಧಾನಿ ರಿಯಾದ್ನಲ್ಲಿ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿದೆ. ಇದರ ಜತೆಗೆ ಸೌದಿಯ ಪ್ರಮುಖ ಥೀಮ್ ಪಾರ್ಕ್, ಮನೋರಂಜನಾ ತಾಣಗಳ ಪ್ರವೇಶ ಶುಲ್ಕವನ್ನು ರದ್ದು ಮಾಡಲಾಗಿದೆ.