ಮತದಾನಕ್ಕೆ ಅವಕಾಶ ನೀಡದಿದ್ದರೆ ವಿಷ ಸೇವಿಸುತ್ತೇವೆ: ಮತದಾರರ ಎಚ್ಚರಿಕೆ

ಗುಂಡ್ಲುಪೇಟೆ: ಸಾಮಾನ್ಯವಾಗಿ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಬಹಿಷ್ಕರಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ತಮಗೆ ಮತದಾನಕ್ಕೆ ಅವಕಾಶವೇ ಸಿಗಲಿಲ್ಲವೆಂದು ಕೆರಳಿ ಮತದಾರರು ವಿಷ ಕುಡಿಯುವ ಎಚ್ಚರಿಕೆಯನ್ನು ನೀಡಿರುವ ಅಚ್ಚರಿದಾಯಕ ಪ್ರಸಂಗ ನಡೆದಿದೆ.

ತಾಲ್ಲೂಕಿನಲ್ಲಿ ಚಿರಕನಹಳ್ಳಿ ಗ್ರಾಮದಲ್ಲಿ ಈ ಹಿಂದೆ ವಿಧಾನಸಭೆ ಚುನಾವಣೆಗೆ ಕಡಬೂರಿನ ಮತದಾರರು ಚಿರಕನಹಳ್ಳಿಗೆ ಬಂದು ಮತ ಚಲಾಯಿಸುತ್ತಿದ್ದರು. ಆದರೆ, ಗ್ರಾಮ ಪಂಚಾಯಿತಿಯಲ್ಲಿ ಕಡಬೂರಿನ ಜನರು ಅಲ್ಲಿಯೇ ಮತ ಚಲಾಯಿಸುವುದರಿಂದ ಚಿರಕನಹಳ್ಳಿ ಗ್ರಾಮದ ಮತದಾರರು ತಮ್ಮ ಗ್ರಾಮದಲ್ಲಿಯೇ ಮತ ಚಲಾಯಿಸಲಾಗುತ್ತಿದ್ದು, ಮತದಾರರ ಪಟ್ಟಿಯಿಂದ 31 ಮತದಾರರ ಹೆಸರು ಇಲ್ಲದಾಗಿದೆ.

ಇದಕ್ಕೆ ಮತದಾರರು ಕೆರಳಿ ನಮಗೆ ಮತದಾನದ ಅವಕಾಶ ಮಾಡಿಕೊಡದಿದ್ದರೆ ವಿಷ ಸೇವಿಸುವುದಾಗಿ ತಾಲ್ಲೂಕು ಕಚೇರಿ ಮುಂಭಾಗ ವಿಷದ ಬಾಟಲಿ ಹಿಡಿದು ಪ್ರತಿಭಟಸಿದರು.

ಕೊನೆಗೆ ತಹಸಿಲ್ದಾರ್‌ ಅವರು ಚಿರಕನಹಳ್ಳಿ ಮತದಾರರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು.

× Chat with us