ಮೈಸೂರಿನಲ್ಲಿ ಹೆಚ್ಚುತ್ತಿರುವ ಹುಕ್ಕಾಬಾರ್ ಹಾವಳಿ
ಮೈಸೂರು: ನಗರದಾದ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಹುಕ್ಕಾಬಾರ್ಗಳು ತಲೆಯೆತ್ತಿವೆ. ಇದರಿಂದಾಗಿ ಯುವಜನರು ಹಾಗೂ ಫ್ರೌಡಶಾಲಾ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಹುಕ್ಕಾ ಸೇವನೆಯಿಂದಾಗಿ ಅವರ ಆರೋಗ್ಯ ಹಾಳಾಗುವುದಲ್ಲದೆ ಸಮಾಜದ ಸ್ವಾಸ್ಥತ್ಯೃಕ್ಕೂ ಹಾನಿಯಾಗುತ್ತಿದೆ. ಹೀಗಾಗಿ ನಗರದಾದ್ಯಂತ ಇರುವ ಹುಕ್ಕಾ ಬಾರ್ಗಳ ಲೈಸನ್ಸ್ನ್ನು ರದ್ದುಪಡಿಸಬೇಕು ಎಂದು ಮಾಜಿ ಮಹಾಪೌರ ಅಯೂಬ್ಖಾನ್ ಒತ್ತಾಯಿಸಿದರು.
ಹುಕ್ಕಾ ಬಾರ್ಗಳಲ್ಲಿ 18 ವರ್ಷ ವೋಂಮಾನದ ಒಳಗಿನ ಮಕ್ಕಳೇ ಹೆಚ್ಚಾಗಿ ಇರುತ್ತಾರೆ. ಆಯಾ ಠಾಣೆಯ ಪೊಲೀಸರು ಇದನ್ನು ಕಂಡೂ ಕಾಣದಂತೆ ಇದ್ದಾರೆ. ಹೀಗಾಗಿ ನಗರಪಾಲಿಕೆೆಯೇ ಕ್ರಮ ತೆಗದುಕೊಳ್ಳಬೇಕು. ಹುಕ್ಕಾ ಬಾರ್ಗಳಿಗೆ ನಿಡಲಾಗಿರುವ ಟ್ರೇಡ್ ಲೈಸನ್ಸ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯ ಶಿವಕುಮಾರ್ ಹಾಗೂ ಇನ್ನಿತರರು ಧನಿಗೂಡಿಸಿದರು. ಅಂತಿಮವಾಗಿ ಮಾತನಾಡಿದ ಮಹಾಪೌರರು ಹುಕ್ಕಾ ಬಾರ್ಗಳಿಗೆ ನೀಡಲಾಗಿರುವ ಟ್ರೇಡ್ ಲೈಸನ್ಸ್ ರದ್ದುಗೊಳಿಸಲು ನಿರ್ಣಯ ಮಾಡಿದರು.