ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಕುಸಿತ!

ಮೈಸೂರು : ಕಳೆದೊಂದುವಾರದಿಂದ ನಿರಂತರ ಮಳೆಯಾದ ಹಿನ್ನೆಲೆ ನಗರದ ಅಗ್ರಹಾರದ ವಾಣಿವಿಲಾಸ ರಸ್ತೆ ಭಾಗದಲ್ಲಿರುವ ಬಸ್‌ ನಿಲ್ದಾಣದ ಹಿಂಭಾಗದ ಕಟ್ಟಡದ ಮೇಲ್ಚಾವಣಿ ಕುಸಿತಗೊಂಡಿದೆ.

ಸುಮಾರು 96 ವರ್ಷಗಳ  ಇತಿಹಾಸವಿರುವ ಈ ಕಟ್ಟಡವು ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ ಕಾಲದಲ್ಲಿ ನಿರ್ಮಾಣಗೊಂಡಿದ್ದು,  ಸದ್ಯ ಮೂವರು ಸಾರ್ವಜನಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಪಾರಂಪರಿಕವಾದ ಕಟ್ಟಡಗಳನ್ನು ನಿರ್ವಹಣೆ ಮಾಡುವಲ್ಲಿ ಮೈಸೂರು ನಗರ ಪಾಲಿಕೆಯವರು ನಿರ್ಲಕ್ಷ್ಯ ವಹಿಸಿದ್ದಾರೆ ಹೀಗಾಗಿ  ಏಕಾಏಕಿ ಮಾರುಕಟ್ಟೆಯ ಅಂಗಡಿ ಮಳಿಗೆಗಳ ಮೇಲ್ಚಾವಣಿ ಕುಸಿದಿದೆ ಎಂದು ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.