ಹೆಲಿಟೂರಿಸಂ ಜನಾಭಿಪ್ರಾಯದಂತೆ ತೀರ್ಮಾನ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಹೆಲಿ ಟೂರಿಸಂ ಬೇಕೆ ಅಥವಾ ಬೇಡವೇ ಎಂಬುದನ್ನು ಅರಣ್ಯ ಇಲಾಖೆ ಸಾರ್ವಜನಿಕ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಪುರಭವನದಲ್ಲಿ ಜಿಲ್ಲಾಡಳಿತದ ಪರವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಜನ ವಿರೋಧದ ಯಾವುದೇ ಯೋಜನೆಗೆ ನನಗೆ ವಿರೋಧವಿದೆ. ಮರ ಕಡಿದು ಹೆಲಿ ಟೂರಿಸಂ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಮಾಧ್ಯಮಗಳಲ್ಲಿ ಈ ವಿಚಾರವನ್ನ ಗಮನಿಸಿದ್ದೇನೆ. ಅರಣ್ಯ ಇಲಾಖೆ ಜನರ ಅಭಿಪ್ರಾಯ ಕೇಳಲು ಸಭೆ ಕರೆಯಲಾಗಿದೆ. ಸದರಿ ಸಭೆಯ ತೀರ್ಮಾನದಂತೆ ಎಲ್ಲವು ನಡೆಯುತ್ತದೆ.
ಕೋವಿಡ್ ಮೈಸೂರಿಗೆ ಪ್ರತ್ಯೇಕ ನಿಯಮ ಜಾರಿ ಇಲ್ಲ. ರಾಜ್ಯದ ಬೇರೆ ಜಿಲ್ಲೆಗೆ ಮಾರ್ಗಸೂಚಿ ಇದೆ. ಅದೇ ಮಾರ್ಗಸೂಚಿ ಮೈಸೂರಿಗೂ ಅನ್ವಯವಾಗಲಿದೆ. ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಪಾಲಿಕೆ ಕ್ರಮ ವಹಿಸುತ್ತಿದೆ. ನಗರದಲ್ಲಿ ಕ್ಲಬ್‌ಗಳು ಹಾವಳಿ ಹೆಚ್ಚಾಗಿದೆ. ಕೆಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ಲಬ್‌ಗಳು ಹಣ ಮಾಡುವ ದಂಧೆಯಾಗಿದೆ. ಇದರ ನಿಯಂತ್ರಣಕ್ಕೆ ಪೊಲೀಸ್ ಆಯುಕ್ತರ ಜೊತೆ ಸಭೆ ಮಾಡಿದ್ದೇನೆ. ಇದನ್ನು ನಿಯಂತ್ರಣ ಮಾಡಲು ಸೂಚಿಸಿದ್ದೇನೆ ಎಂದರು.

ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪ್ರಕರಣದ ತನಿಖೆ ಮಾಡಿ ಕಿಡಿಗೇಡಿಗಳನ್ನು ಬಂಧಿಸಲು ಸೂಚಿಸಿದ್ದೇನೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು.
ಈ ವಿಚಾರವಾಗಿ ಪೊಲೀಸ್ ಆಯುಕ್ತರ ಬಳಿ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದರು. ಇದೇ ವೇಳೆ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ನೂತನ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು.

 

× Chat with us