ಆರೋಗ್ಯ

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಿಗಲಿದೆ ಪರಿಹಾರ

ಹೊಸದಿಲ್ಲಿ: ಟಿಬಿ, ಎಚ್‌ಐವಿ, ಹೆಪಟೈಟಿಸ್ ಬಿ, ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಪರಿಹಾರ ನೀಡುವ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನು (ಎನ್‌ಎಲ್‌ಇಎಂ) ಕೇಂದ್ರ ಸರ್ಕಾರ ಭಾನುವಾರ ಜಾರಿಗೆ ತಂದಿದೆ. ಇದರಿಂದ ಅನೇಕ ರೋಗಗಳಿಗೆ ಔಷಧಗಳು ಅಗ್ಗವಾಗಲಿವೆ. ಇದು ಪೇಟೆಂಟ್ ಔಷಧಗಳನ್ನು ಒಳಗೊಂಡಿದೆ.

ಸುಮಾರು ಏಳು ವರ್ಷಗಳ ನಂತರ ನವೀಕರಿಸಲಾದ ಈ ಪಟ್ಟಿುಂನ್ನು ಆರೋಗ್ಯ ಸಚಿವಾಲಯವು ಭಾನುವಾರ ಬಿಡುಗಡೆ ಮಾಡಿದೆ. ಇದನ್ನು ೩೫೦ ಕ್ಕೂ ಹೆಚ್ಚು ತಜ್ಞರು ಸಿದ್ಧಪಡಿಸಿದ್ದಾರೆ ಮತ್ತು ಒಟ್ಟು ೩೮೪ ಔಷಧಿಗಳನ್ನು ಒಳಗೊಂಡಿದೆ. ಇವುಗಳಲ್ಲಿ ೪ ಕ್ಯಾನ್ಸರ್ ವಿರೋಧಿ ಔಷಧಗಳು ಸೇರಿದಂತೆ ೩೪ ಹೊಸ ಔಷಧಿಗಳಿವೆ. ೨೬ ಔಷಧಗಳನ್ನೂ ತೆಗೆಯಲಾಗಿದೆ. ೨೦೧೫ರ ಪಟ್ಟಿಯಲ್ಲಿ ೩೭೬ ಔಷಧಗಳಿದ್ದವು. ಈ ಔಷಧಿಗಳನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ನಿಗದಿಪಡಿಸಿದ ಬೆಲೆಗಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ. ಕೋವಿಡ್ ಔಷಧಿಗಳು ಮತ್ತು ಲಸಿಕೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಏಕೆಂದರೆ ಅವುಗಳನ್ನು ತುರ್ತು ಬಳಕೆಗೆ ಮಾತ್ರ ಅನುಮತಿಸಲಾಗಿದೆ. ಪಟ್ಟಿಯಿಂದ ಹೊರಗುಳಿದಿರುವ ಔಷಧಿಗಳಲ್ಲಿ ರಾನಿಟಿಡಿನ್, ಬ್ಲೀಚಿಂಗ್ ಪೌಡರ್, ವಿಟಮಿನ್ ಸಪ್ಲಿಮೆಂಟ್ ನಿಕೋಟಿನಮೈಡ್ ಸೇರಿವೆ.

ಮಧುಮೇಹ ವಿರೋಧಿ ಔಷಧಗಳು, ಉದಾ ಟೆನೆಲಿಗ್ಲಿಪ್ಟಿನ್, ಇನ್ಸುಲಿನ್ ಗ್ಲಾರ್ಜಿನ್ ಇಂಜೆಕ್ಷನ್. ಪ್ರತಿಜೀವಕಗಳು ಉದಾಹರಣೆಗೆ ಮೆರೊಪೆನೆಮ್, ಸೆಫುರಾಕ್ಸಿಮ್. ಸಾಮಾನ್ಯ ನೋವು ನಿವಾರಕಗಳು ಮತ್ತು ಇತರ ಔಷಧಿಗಳಾದ ವಾರ್ಫಿನ್, ಐಬುಪ್ರೊಫೇನ್, ಡಿಕ್ಲೋಫೆನಾಕ್, ಪ್ಯಾರಸಿಟವಾಲ್, ಟ್ರವಾಡಾಲ್, ಪ್ರೆಡ್ನಿಸೋಲೋನ್, ಹಾವಿನ ವಿಷಕ್ಕೆ ಪ್ರತಿವಿಷ, ಕಾರ್ಬವಾಜೆಪೈನ್, ಅಲ್ಬೆಂಡಜೋಲ್, ಐವರ್ಮೆಕ್ಟಿನ್, ಸೆಟಿರಿಜಿನ್, ಅಮೋಕ್ಸಿಸಿಲಿನ್ ಟಿಬಿ ವಿರೋಧಿ ಔಷಧಿಗಳಾದ ಬೆಡಾಕ್ವಿಲಿನ್ ಮತ್ತು ಡೆಲಾವಾನಿಡ್, ಆಂಟಿ ಎಚ್‌ಐವಿ ಡೊಲುಟೆಗ್ರಾವಿರ್, ಆಂಟಿ ಹೆಪಟೈಟಿಸ್ ಸಿ ಡಕ್ಲಾಟಾಸ್ವಿರ್ ಮುಂತಾದ ಪೇಟೆಂಟ್ ಔಷಧಗಳು ಬುಪ್ರೆನಾರ್ಫಿನ್, ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿಯಂತಹ ಡಿ-ಅಡಿಕ್ಷನ್ ಔಷಧಿಗಳು ಡಬಿಗಟ್ರಾನ್ ಮತ್ತು ಇಂಜೆಕ್ಷನ್ ಟೆನೆಕ್ಟೆ ಪ್ಲಸ್ ಅನ್ನು ಹೃದ್ರೋಗಗಳು ಮತ್ತು ಪಾರ್ಶ್ವವಾಯುಗಳಲ್ಲಿ ಬಳಸಲಾಗುತ್ತದೆ ರೋಟವೈರಸ್ ಲಸಿಕೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಪಟ್ಟಿಯಿಂದ ಹೊರಗುಳಿದಿರುವ ಔಷಧಿಗಳಲ್ಲಿ ರಾನಿಟಿಡಿನ್, ಬ್ಲೀಚಿಂಗ್ ಪೌಡರ್, ವಿಟಮಿನ್ ಸಪ್ಲಿಮೆಂಟ್ ನಿಕೋಟಿನಮೈಡ್ ಸೇರಿವೆ.

ಒಟ್ಟು ಔಷಧಿಗಳು ೩೮೪
೪ ಕ್ಯಾನ್ಸರ್ ವಿರೋಧಿ ಔಷಧಿಗಳು
೩೪ ಹೊಸ ಸೇರ್ಪಡೆ
೨೬ ಪಟ್ಟಿಯಿಂದ ಹೊರಕ್ಕೆ

andolana

Share
Published by
andolana

Recent Posts

ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್‌ ಮೇಲೆ ಐಟಿ ದಾಳಿ

ಬೆಂಗಳೂರು: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.…

17 mins ago

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಹೊಸ ರೂಲ್ಸ್

ಬೆಂಗಳೂರು: ಈ ಬಾರಿ ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದ್ದು, ಪೊಲೀಸ್‌ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 1)…

37 mins ago

ಹುಣಸೂರು| ಅಪೆ ಆಟೋ ಕೆರೆಗೆ ಉರುಳಿ ಚಾಲಕ ಸಾವು

ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಅಪೆ ಆಟೋವೊಂದು ಕೆರೆಗೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯಲ್ಲಿ…

53 mins ago

ಓದುಗರ ಪತ್ರ: ಸಾರ್ವಜನಿಕ ಶೌಚಾಲಯ ನಿರ್ಮಿಸಿ

ಎಚ್.ಡಿ.ಕೋಟೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಅನೈರ್ಮಲ್ಯ ವಾತಾವರಣ…

59 mins ago

ಓದುಗರ ಪತ್ರ:  ವಿಮಾ ವಲಯದಲ್ಲಿ ಶೇ.೧೦೦ ಎಫ್ಡಿಐ ಜನ ವಿರೋಧಿ

ವಿಮಾ ವಲಯದಲ್ಲಿ ಶೇ. ೧೦೦ ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ(ಎ-ಡಿಐ)ಯಿಂದ ವಿಮಾ ರಕ್ಷಣೆ ಪಡೆದ ಜೀವಗಳ ಮತ್ತು ಆಸ್ತಿಗಳ…

1 hour ago

ಓದುಗರ ಪತ್ರ: ಸಜ್ಜನ ರಾಜಕಾರಣಿಯಾಗಿದ್ದ ಶಾಮನೂರು ಶಿವಶಂಕರಪ್ಪ

ರಾಜ್ಯದ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರೆನಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪನವರ ನಿಧನ ನಿಜಕ್ಕೂ ನೋವಿನ ಸಂಗತಿ. ದೇಶದ…

2 hours ago