ಬೆಂಗಳೂರು– ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಶನಿವಾರ ಕೋವಿಡ್ – 19 ಸೋಂಕು ಕಾಣಿಸಿಕೊಂಡಿದೆ.
ಪ್ರಸ್ತುತ ರಾಜ್ಯಪಾಲರ ಆರೋಗ್ಯ ಸ್ಥಿರವಾಗಿದ್ದು, ಯಾರೊಬ್ಬರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ರಾಜಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜ್ಯಪಾಲರು ವೈದ್ಯರ ಸಲಹೆಯಂತೆ ರಾಜಭವನದಲ್ಲೇ
ವಿಶ್ರಾಂತಿ ಪಡೆಯುತ್ತಿದ್ದು, ಒಂದು ವಾರಗಳ ಕಾಲ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಜಂಬೂ ಸವಾರಿಗೆ ಈ ಬಾರಿ ರಾಜ್ಯಪಾಲರು ಗೈರು ಹಾಜರಾಗಲಿದ್ದಾರೆ.
ಸಾಮಾನ್ಯವಾಗಿ ರಾಜ್ಯಪಾಲರು ಜಂಬೂ ಸವಾರಿಯಲ್ಲಿ ಪಾಲ್ಗೊಂಡು ನಂತರ ಪಂಜಿನ ಕವಾಯತ್ ನಲ್ಲಿ
ಭಾಗಿಯಾಗುತ್ತಿದ್ದರು.ಆದರೆ ಈ ಬಾರಿ ರಾಜ್ಯಪಾಲರು ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವುದು ತೀರಾ ಕಡಿಮೆ ಎನ್ನಲಾಗುತ್ತದೆ.