ಕರ್ನಾಟಕ ಬಂದ್‌ನಿಂದ ಮಹಾರಾಷ್ಟ್ರದವರಿಗೆ ತೊಂದರೆ ಆಗಲ್ಲ; ಬಂದ್‌ಗೆ ಕರೆ ನೀಡಿದವರು ಈ ಬಗ್ಗೆ ಯೋಚಿಸಬೇಕು : ಎಚ್‌ಡಿಕೆ

ರಾಮನಗರ: ಬಂದ್ ಮಾಡುವುದರಿಂದ ಅನುಕೂಲ ಯಾರಿಗೆ, ಅನಾನುಕೂಲ ಯಾರಿಗೆ ಎಂಬುದು ಮುಖ್ಯ. ಕರ್ನಾಟಕ ಬಂದ್ ಮಾಡುವುದರಿಂದ ಮಹಾರಾಷ್ಟ್ರದವರಿಗೇನು ತೊಂದರೆ ಇಲ್ಲ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಕಾನೂನಿನ ವ್ಯಾಪ್ತಿಯಲ್ಲಿ ಯಾರೂ ಸಾರ್ವಜನಿಕ ಆಸ್ತಿ ನಾಶ ಮಾಡುತ್ತಾರೆ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಬಂದ್ ಘೋಷಣೆ ಮಾಡಿದ್ರೆ ನಮ್ಮ ರಾಜ್ಯದ ಜನರಿಗೆ ನಷ್ಟ ಅಷ್ಟೇ ಎಂದು ಕರ್ನಾಟಕ ಬಂದ್ ವಿಚಾರವಾಗಿ ಮಾಜಿ ಮುಖ್ಯಮಂತ್ರಿ
ಈ ಬಂದ್ ದೊಡ್ಡವರ ಮೇಲೆ ಪ್ರಭಾವ ಬೀರಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವ್ರಿಗೆ ಆಗುವ ಪರಿಣಾಮದ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.

ಇದು ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ವಿಷಯ. ಹೀಗಾಗಿ ಮರಾಠಿಗರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳ ಬೇಕು ಎಂಬುದು ನನ್ನ ಅಭಿಪ್ರಾಯ. ಬಂದ್ ಕರೆ ನೀಡಿದವರು ಯೋಚಿಸಬೇಕು. ಬಂದ್ ನಿಂದ ಕನ್ನಡಿಗರಿಗೆ ಅನನುಕೂಲ ಆಗಲಿದೆ. ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಿಖಿಲ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಂದ್ ನಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.