ರೈತರ ಧರಣಿ: ಕೊರೆವ ಚಳಿಯಿಂದಾಗಿ ಪ್ರತಿಭಟನಾನಿರತ ರೈತ ಸಾವು!

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಹಲವು ದಿನಗಳಿಂದ ಹೊಸದಿಲ್ಲಿಯ ಗಡಿಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೊರೆವ ಚಳಿಯಿಂದಾಗಿ 32 ವರ್ಷದ ರೈತ ಪ್ರತಿಭಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ʻಹರಿಯಾಣದ ರೈತ ಅಜಯ್‌ ತಮ್ಮ ಗ್ರಾಮದ ರೈತರೊಂದಿಗೆ ಸಿಂಘು ಗಡಿ ಭಾಗದಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ʻಹೈಪೊಥೆರೆಮಿಯಾʼದಿಂದಾಗಿ ಅವರು ಸಾವಿಗೀಡಾಗಿರುವ ಸಾಧ್ಯತೆ ಇದೆʼ ಎಂದು ಸೋನಿಪತ್‌ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ವೃದ್ಧ ತಂದೆ-ತಾಯಿ, ಹೆಂಡತಿ ಹಾಗೂ ಮೂವರು ಮಕ್ಕಳನ್ನು ಅಜಯ್‌ ಅಗಲಿದ್ದಾರೆ. ಪ್ರತಿಭಟನೆ ಆರಂಭವಾದಾಗಿನಿಂದ ಈವರೆಗೆ ಸುಮಾರು 5 ಸಾವುಗಳಾಗಿವೆ ಎನ್ನಲಾಗಿದೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಸಾಮೂಹಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಇದು ದೊಡ್ಡ ಮಟ್ಟದ ಪ್ರತಿಭಟನೆ ಎನ್ನಲಾಗಿದೆ.

× Chat with us