ಊಟವೇ ಇಲ್ಲ.. ಸಿಎಂ ಯಡಿಯೂರಪ್ಪ, ಸಚಿವರಿಗೆ ಹಾಡಿ ಜನರ ಅಳಲು!

ಹನೂರು: ಕೊರೊನಾ ಕಾಲದಲ್ಲಿ ನಮಗೆ ಪಡಿತರವೂ ಸಿಕ್ಕಿಲ್ಲ, ಯಾವ ಸೌಲಭ್ಯವೂ ಕೊಟ್ಟಿಲ್ಲ ಎಂದು ಸೋಲಿಗರು ಅಳಲು ತೋಡಿಕೊಂಡು ಸಿಎಂ ಬಿಎಸ್ವೈ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಗೆ ಟ್ವೀಟ್ ಮಾಡಿರುವ ಘಟನೆ ನಡೆದಿದೆ‌.

ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ಸೇಬಿನ ಕೊಪ್ಪೆ ಎಂಬ ಹಾಡಿಯ ಜನರು ವಿಡಿಯೋವೊಂದನ್ನು ಮಾಡಿ ತಮಗೆ ಯಾವ ಸೌಲಭ್ಯಗಳು ಸಿಗುತ್ತಿಲ್ಲ, ಕೊರೊನಾ ಕಾಲದಲ್ಲಿ ಊಟ-ತಿಂಡಿಗೆ ಬಹಳಷ್ಟು ತೊಂದರೆ ಉಂಟಾಗಿದೆ, ದಯವಿಟ್ಟು ಸರ್ಕಾರ ತಮಗೆ ಸ್ಪಂದಿಸಬೇಕೆಂದು “ಕನ್ನಡ ಮನಸುಗಳು ಪ್ರತಿಷ್ಟಾ‌‌ನ” ಎಂಬ ಸಂಘಟನೆಯ ಮೂಲಕ ಸಿಎಂ ಯಡಿಯೂರಪ್ಪ, ಸಚಿಚರಾದ ಸುರೇಶ್ ಕುಮಾರ್, ಸುಧಾಕರ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿದೆ‌.

ಇನ್ನು, ಈ ಟ್ವೀಟ್ ಗಮನಿಸಿದ ರಾಜ್ಯ ಯುವ ಕಾಂಗ್ರೆಸ್ ಇಂದು ಸೇಬಿನ ಕೊಪ್ಪೆಗೆ ತೆರಳಿ ಹಾಡಿಯ 62 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಿದೆ.