ನನಗೆ ಗೊತ್ತಿರುವುದು ಸಫಾಯಿ ಕರ್ಮಚಾರಿ ಭಾಷೆ ಮಾತ್ರ!

ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಬೆಜವಾಡ ವಿಲ್ಸನ್ ‘‘ನನ್ನ ಕಥೆ ಅಂದರೆ ಬೇರೆ ಏನಿಲ್ಲ, ನನ್ನ ಮಕ್ಕಳ ವ್ಯಥೆ. ನನ್ನ ಮಕ್ಕಳು ಬೇರೆ ಯಾರಲ್ಲ, ಎಲ್ಲ ಸಫಾಯಿ ಕರ್ಮಚಾರಿಗಳ ಮಕ್ಕಳು’’ ಎನ್ನುತ್ತಾರೆ. ಮಲ ಹೊರುವ ಪದ್ಧತಿಯ ಕ್ರೌರ್ಯವನ್ನು, ಶತಮಾನಗಳಿಂದ ಸಮುದಾಯವೊಂದು ಅನುಭವಿಸಿದ ಅಸೃಶ್ಯತೆ ಅವಮಾನ, ಅಮಾನವೀಯತೆಯನ್ನು ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ.

ಸುಮಂಗಲಾ
smuangalagm@gmail.com

i-only-know-safai-karmachari-language

ಅಕ್ಟೋಬರ್ ಎರಡರಂದು ಮತ್ತೊಂದು ಗಾಂಧಿ ಜಯಂತಿ ಬಂದು ಹೋಯಿತು. ನಮ್ಮ ನೇತಾರರಿಗೆ ಆ ದಿನ ಗಾಂಧೀಜಿಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ತೋರಿಕೆಗಾದರೂ ನೆನಪಿಸಿಕೊಳ್ಳುವ ಅನಿವಾರ್ಯತೆ. ತಾವು ಕೂಡ ಗಾಂಧಿ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂದು ಬಿಂಬಿಸಲು ಕೆಲವು ಕೆಲಸಗಳನ್ನು ಮಾಡಿದಂತೆ ನಟಿಸುವ ಅನಿವಾರ್ಯತೆ. ಹಾಗೆ ಕಾಟಾಚಾರಕ್ಕೆ ನಟಿಸುವ ಸಂಗತಿಗಳಲ್ಲಿ ಒಂದು ಗಾಂಧಿ ಜಯಂತಿಯಂದು ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಳ್ಳುವುದು ಮತ್ತು ಉದ್ದುದ್ದನೆಯ ಕಸಬರಿಗೆಗಳಿಂದ ಚೊಕ್ಕವಾಗಿರುವ ರಸ್ತೆಗಳನ್ನು ಗುಡಿಸಿದ ಫೋಸು ಕೊಡುವುದು.

ಗಾಂಧೀಜಿಗೆ ಹಾಗೆ ಶೌಚಾಲಯ ಸ್ವಚ್ಛಪಡಿಸುವ ಫೋಸು ಕೊಡುವ ಅಗತ್ಯವೇನೂ ಇರಲಿಲ್ಲ. ದಕ್ಷಿಣ ಅಮೆರಿಕದಲ್ಲಿ ಫೀನಿಕ್ಸ್ ಆಶ್ರಮವನ್ನು ಆರಂಭಿಸಿದಾಗ ಶೌಚಾಲಯಗಳನ್ನು ಎಲ್ಲರೂ ಸ್ವಚ್ಛ ಮಾಡಬೇಕೆಂದು ಒತ್ತಾಯಿಸಿದ್ದರಲ್ಲಿ ನಮ್ಮ ಕೆಲಸ ನಾವು ಮಾಡಿಕೊಳ್ಳಬೇಕು ಎಂಬ ಒಂದು ಸರಳ ತರ್ಕವಿತ್ತು. ಮರಳಿ ಭಾರತಕ್ಕೆ ಬಂದು ಸೇವಾಗ್ರಾಮದಲ್ಲಿ ಆಶ್ರಮ ಶುರು ಮಾಡಿದಾಗಲೂ ಇದೇ ತತ್ವ ಪಾಲಿಸಿದರು. ಆದರೆ ಶತಮಾನಗಳಿಂದ ಊರಿನ ಎಲ್ಲ ಬಗೆಯ ಹೊಲಸು ಸ್ವಚ್ಛಪಡಿಸುವ ಕೆಲಸವನ್ನು ಒಂದು ದಲಿತ ಸಮುದಾಯಕ್ಕೆ ಹೊರೆಸಿ, ಕಿಲುಬುಗೆಟ್ಟ ಮನಸ್ಥಿತಿಯ ಭಾರತೀಯ ಸಮಾಜವನ್ನು ಬದಲಿಸುವುದು ಗಾಂಧೀಜಿಯಲ್ಲ, ದೇವರೇ ಬಂದರೂ ಆಗುವ ಮಾತಲ್ಲ. ‘‘everyone must be his own scavenger’’ ಪ್ರತಿೊಂಬ್ಬರೂ ಸ್ವತಃ ತಮ್ಮ ಭಂಗಿಯಾಗಿರಬೇಕು ಎಂದರು ಗಾಂಧೀಜಿ. ಆದರೆ ನಾವು ಭಂಗಿ ಅಥವಾ ತೋಟಿಗಳಾಗಲಿಲ್ಲ, ಬದಲಿಗೆ ವರ್ಷಗಳಿಂದ ಈ ಕೆಲಸವನ್ನು ಮಾಡಿಸುತ್ತಿದ್ದ ಸಮುದಾಯಕ್ಕೆ ಹೊಸ ಬಗೆಯಲ್ಲಿ ಹೊಲಸು ಬಾಚುವ ಅಮಾನುಷ ಕೆಲಸವನ್ನು ಹೊರೆಸಿದೆವು.

ಮಹಾನಗರಗಳಿಂದ ಹಿಡಿದು ಚಿಕ್ಕ ಪಟ್ಟಣಗಳವರೆಗೆ, ಐಷಾರಾಮಿ ಬಂಗಲೆಗಳಿಂದ ಹಿಡಿದು ಸಣ್ಣಪುಟ್ಟ ಮನೆಗಳವರೆಗೆ ಅತ್ಯಾಧುನಿಕ ಶೌಚಾಲಯಗಳನ್ನು ಕಟ್ಟಿದೆವು. ಮಲ ಹೊರುವ ಪದ್ಧತಿ ಎಲ್ಲಿದೆ ಎಂದು ಕೇಳಿದೆವು. ಹಲವಾರು ರಾಜ್ಯಗಳಲ್ಲಿ ಇನ್ನೂ ಲಕ್ಷಗಟ್ಟಲೆ ಇರುವ ಒಣ ಪಾಯಿಖಾನೆಗಳೆಂಬ ಕರಾಳ ಕೂಪಗಳಾಗಲೀ, ಅವುಗಳ ಮಲವನ್ನು ಅಂಗೈಯಗಲದ ತಗಡಿನ ಚೂರುಗಳಿಂದ ಬಳಿದು ಬುಟ್ಟಿ ತುಂಬಿ, ಹೊರ ಸಾಗಿಸುವ ಭಂಗಿ ಮಹಿಳೆಯರಾಗಲೀ ನಮ್ಮ ಕಣ್ಣುಗಳಿಗೆ ಕಾಣುವುದೇ ಇಲ್ಲ. ಸ್ವಚ್ಛ ಭಾರತ ಆಂದೋಲನದಲ್ಲಿ ಹಳ್ಳಿ ಮತ್ತು ನಗರಗಳಲ್ಲಿ 9 ಕೋಟಿಗೂ ಹೆಚ್ಚು ಶೌಚಾಲಯ ಕಟ್ಟಿಸಿದೆವು. ಇದಕ್ಕನುಗುಣವಾಗಿ ಹೆಚ್ಚಳಗೊಂಡ ಒಳಚರಂಡಿ ಗುಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕುಗಳು ಕಟ್ಟಿಕೊಂಡು ನಾರುವಾಗ ಮತ್ತೆ ಅದೇ ದಲಿತ ಸಮುದಾಯವನ್ನು ಗುಂಡಿಗೆ ಇಳಿಸಿ, ಬರಿಗೈಯಲ್ಲಿ ಮಲ ಬಾಚಿಸಿದೆವು ಮತ್ತು ಮುಂದೆಯೂ ಬಾಚಿಸುತ್ತೇವೆ. ವಿಷಾನಿಲದಿಂದ ಉಸಿರುಗಟ್ಟಿ ಸತ್ತವರನ್ನು ಕಂಡೂ ಕಾಣದಂತಿರುವ ನಾವು ಆತ್ಮಸಾಕ್ಷಿ ಸತ್ತವರಾಗಿ ಬಾಳುತ್ತಿದ್ದೇವೆ.

2014ರ ನಂತರ 1071.04 ಲಕ್ಷ ಹೊಸ ಶೌಚಾಲಯಗಳನ್ನು ಗ್ರಾಮೀಣ ಭಾಗದಲ್ಲಿ ಕಟ್ಟಲಾಗಿದೆ ಎಂದು ಸ್ವಚ್ಛಭಾರತ್ ಮಿಷನ್ ಅಂಕಿಸಂಖ್ಯೆಗಳು ಹೇಳುತ್ತವೆ. ಅಂದರೆ ಶೌಚಾಲಯಗಳು ಇರುವ ಮನೆಗಳ ಸಂಖ್ಯೆ ೬೧.೨೪% ರಷ್ಟು ಹೆಚ್ಚಳವಾಗಿದೆ. ಇನ್ನು ನಗರಗಳಲ್ಲಿ ೬೨,೬೦,೬೦೬ ಹೊಸ ಶೌಚಾಲಯಗಳನ್ನು ಹಾಗೂ 6,15,864 ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಲಾಗಿದೆ. ಹೌದು, ಉತ್ತಮ ಸಾಧನೆೆುೀಂ ಸರಿ. ಆದರೆ ಈ ಶೌಚಾಲಯಗಳ ಗುಂಡಿ ಕಟ್ಟಿಕೊಂಡಾಗ, ಚರಂಡಿಯ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡಾಗ, ಅವುಗಳನ್ನು ಸ್ವಚ್ಛಪಡಿಸಲು ಏನು ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದೇವೆ? ಅದಕ್ಕೆ ಎಷ್ಟು ಸಿಬ್ಬಂದಿ ಹಾಗೂ ಆಯವ್ಯಯವನ್ನು ಮೀಸಲಾಗಿಟ್ಟಿದ್ದೇವೆ? ಈ ಪ್ರಶ್ನೆಗಳನ್ನು ಮಾತ್ರ ಕೇಳಬೇಡಿ!

ಕಳೆದ ತಿಂಗಳಷ್ಟೇ ಕೇಂದ್ರದ ಸಾಮಾಜಿಕ ನ್ಯಾಯ ಸಚಿವರು ರಾಜ್ಯಸಭೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮಲದ ಗುಂಡಿಯಲ್ಲಿ ಇಳಿದು ಉಸಿರುಗಟ್ಟಿ ಯಾರೊಬ್ಬರೂ ತೀರಿಕೊಂಡಿಲ್ಲ ಎಂದಿದ್ದರು. ಇದೇ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಬಜೆಟ್ ಸಭೆಯಲ್ಲಿ ಕಳೆದ ಐದು ವರ್ಷಗಳಲ್ಲಿ ೩೪೦ ಜನರು ಮಲದ ಗುಂಡಿಯನ್ನು ಸ್ವಚ್ಛಪಡಿಸುವಾಗ ಸತ್ತಿದ್ದಾರೆ ಎಂದಿತ್ತು. ನಮ್ಮ ಚುನಾಯಿತ ಪ್ರತಿನಿಧಿಗಳಿವೆ ಈ ಬಗ್ಗೆ ಇರುವ ಮಲದ ಗುಂಡಿಯನ್ನು ಸ್ವಚ್ಛಪಡಿಸುವ ಪೌರಕಾರ್ಮಿಕರ ಕುರಿತ ಅಸಡ್ಡೆ ಮತ್ತು ಒಂದು ತಣ್ಣನೆಯ ಕ್ರೌರ್ಯ ಎಷ್ಟು ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆ. ಕಳೆದ ಮೂರೂವರೆ ದಶಕಗಳಿಂದ ಬೆಜವಾಡ ವಿಲ್ಸನ್ ಮಲ ಹೊರುವ ಮತ್ತು ಮಲದ ಗುಂಡಿಗಳನ್ನು ಸ್ವಚ್ಛಪಡಿಸುವವರ ಬದುಕು ಹಸನಾಗಿಸಲು, ಅವರ ವಿರುದ್ಧ ಸಮಾಜ ಮತ್ತು ಸರ್ಕಾರದ ಕ್ರೂರ ಪದ್ಧತಿಗಳನ್ನು ನಿವಾರಿಸಲು ಹೋರಾಡುತ್ತಲೇ ಇದ್ದಾರೆ, ಆಂದೋಲನಗಳನ್ನು ರೂಪಿಸುತ್ತಲೇ ಇದ್ದಾರೆ.
ಮಲ ಹೊರುವವರ ಒಡಲಾಳದ ಸಂಕಟ, ಬೇಗುದಿಯನ್ನು ವ್ಯಕ್ತಪಡಿಸಲು, ಮಲ ಹೊರುತ್ತ ಮೈಕೈಗೆ ಮೆತ್ತಿಕೊಂಡಾಗಿನ ವಾಕರಿಕೆಯನ್ನು ವಿವರಿಸಲು ನಮ್ಮ ಭಾಷೆ ಶಕ್ತವೇ? ಇದಕ್ಕೆ ಭಾಷೆಯಿಲ್ಲ ಎನ್ನುತ್ತಾರೆ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಬೇಜವಾಡ ವಿಲ್ಸನ್.

‘‘ಶತಮಾನಗಳಿಂದ ಒಂದು ಸಮುದಾಯದಿಂದ ಹೀಗೆ ಅಸಹ್ಯಕರವಾದ ಕೆಲಸ ಮಾಡಿಸ್ತಾ ಬಂದಿದ್ದಾರಲ್ಲ, ಈ ನೋವು, ಅಪಮಾನವನ್ನು ಹೇಳುವುದು ಹೇಗೆ? ಬೇರೆಯದಕ್ಕೆ ಭಾಷೆ ಇದೆ. ಆದರೆ ಇದಕ್ಕೆ ಭಾಷೆಯಿಲ್ಲ. ನನ್ನ ಸುತ್ತ ಇದ್ದ ಜನಗಳು ಮಾಡುವ ಕೆಲಸವನ್ನು ನೋಡಿದೆ. ಕೈಯಿಂದ ಮಲ ಬಾಚಿ, ಬುಟ್ಟಿಗಳಲ್ಲಿ ತುಂಬಿಕೊಂಡು ಊರ ಹೊರಗೆ ಹಾಕಿಬರುವುದು, ಕಕ್ಕಸು ಗುಂಡಿಗಳು ತುಂಬಿಕೊಂಡಾಗ ಸ್ವಚ್ಛಮಾಡುವುದು. ನೋಡುತ್ತಲೇ ಬೆಳೆದ ನನ್ನೊಳಗೆ ಜ್ವಾಲಾಮುಖಿ. ಈ ಜ್ವಾಲಾಮುಖಿಯನ್ನು ವಿವರಿಸಲು ಭಾಷೆಯಿಲ್ಲ. ನನಗೆ ಗೊತ್ತಿರುವುದು ಒಂದೇ ಭಾಷೆ; ಸಫಾಯಿ ಕರ್ಮಾಚಾರಿ ಭಾಷೆ. ತೋಟಿ ಅಥವಾ ಭಂಗಿ ಭಾಷೆ’’.

ಕೋಲಾರದ ಕೆಜಿಎಫ್‌ನಲ್ಲಿ ಹುಟ್ಟಿ, ಬಡತನವನ್ನು ಹಾಸಿಹೊದ್ದ ಸಮುದಾಯದ ನಡುವೆ ಬೆಳೆದು, ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಸಫಾಯಿ ಕರ್ಮಚಾರಿ ಆಂದೋಲನ ಹುಟ್ಟುಹಾಕಿ, ಮ್ಯಾಗ್ಸೆಸೆ ಪ್ರಶಸ್ತಿ ಪಡೆಯುವವರೆಗಿನ ಹೋರಾಟ ಹೂವಿನ ಹಾದಿಯಾಗಿರಲಿಲ್ಲ. ಈಗ ಹಿಂತಿರುಗಿ ನೋಡಿದರೆ?
‘‘ಸ್ಕೂಲಲ್ಲಿದ್ದಾಗ ಯಾಕೆ ಬೇರೆ ಮಕ್ಕಳು ತಮಾಷೆ ಮಾಡುತ್ತಾರೆ? ಯಾಕೆ ನನ್ನ ನೋಡಿ ನಗುತ್ತಾರೆ, ತೋಟಿ ಎನ್ನುತ್ತಾರಲ್ಲ, ಏನು ಹಾಗೆಂದರೆ… ನಮ್ಮ ತಾಯಿಗೆ ಕೇಳಲು ಶುರು ಮಾಡಿದೆ. ನೀನು ಸುಮ್ಮನೇ ಓದು, ಅದೆಲ್ಲ ಯಾಕೆ ನಿಂಗೆ ಅಂತ ಅಮ್ಮ ಹೇಳೋರು. ನಂತರ ಕುಪ್ಪಂನಲ್ಲಿ ಸೋಶಿಯಲ್ ವೆಲ್‌ಫೇರ್ ಹಾಸ್ಟೆಲಿನಲ್ಲಿ ಓದಲು ಹೋದೆ. ಹತನೇ ಕ್ಲಾಸಿನ ನಂತರ ಮರಳಿ ಬಂದಾಗ ಮತ್ತೆ ಕೇಳಲು ಶುರುಮಾಡಿದೆ, ಏನಿದು ತೋಟಿ ಕೆಲಸ ಎಂದರೆ. ‘ನೀನು ಓದು, ಮೇಲೆ ಹೋಗು’, ಅಮ್ಮ ಹೇಳುತ್ತಿದ್ದರು. ಅವರಿಗೆ ನಾಚಿಕೆ, ಅಸಹ್ಯ, ಹೇಗೆ ಹೇಳದು ಅಂತ. ಕಾಲೇಜು ಸೇರಿದೆ. ಅದನ್ನೂ ಪೂರ್ಣ ಮುಗಿಸಲಿಲ್ಲ. ಯಾಕೆ ಇಷ್ಟು ಬಡತನ ನಮ್ಮ ಜನರಿಗೆ. ಯಾಕೆ ಎಲ್ಲರೂ ಕುಡಿಯುತ್ತಾರೆ. ನನ್ನೊಳಗೆ ಕೇಳಿಕೊಳ್ಳಲು ಶುರು ಮಾಡಿದೆ. ನನ್ನ ಸುತ್ತಲಿನವರಿಗೆ ಹೇಳತೊಡಗಿದೆ, ‘ನೀವು ಕುಡಿೋಂದು ನಿಲ್ಲಿಸಿ, ಕುಡಿದು ಬಂದು ಮನೆಯ ಹೆಣ್ಣುಮಕ್ಕಳಿಗೆ ಹೊಡೆೋಂದು ನಿಲ್ಲಿಸಿ’ ಅಂತ. ‘ಕುಡಿಯಲಿಲ್ಲ ಎಂದರೆ ಕೆಲಸ ಮಾಡಬೇಕಲ್ಲ… ನಾವು ಮಾಡೋ ಕೆಲಸ ನೋಡು ಬಾ, ಆಗ ಗೊತ್ತಾಗುತ್ತೆ’ ಎಂದರವರು. ಹೋಗಿ ನೋಡಿದೆ. ಒಣ ಪಾಯಿಖಾನೆಗಳಿಂದ ಮಲ ಬಾಚುತ್ತಿದ್ದ ನನ್ನ ಅಮ್ಮ ಮತ್ತು ಸಮುದಾಯದ ಇನ್ನಿತರ ಹೆಣ್ಣು ಮಕ್ಕಳು. ಕಟ್ಟಿಕೊಂಡ ಕಕ್ಕಸು ಗುಂಡಿಗಿಳಿದು ಬರಿಗೈಯಿಂದ ಬಳಿಯುತ್ತಿದ್ದ ಗಂಡಸರು. ಆಗ ನೋಡಿದ್ದು ಶಾಶ್ವತ ಚಿತ್ರಪರದೆಯಂತೆ ಕಣ್ಣ ಮುಂದೆ ಬಿದ್ದಿದೆ. ಮಲ ಹೊರುವ ಪದ್ಧತಿ ಎಂದರೆ ಏನು? ಯಾಕೆ ನಾವೇ ಈ ಕೆಲಸ ಮಾಡಬೇಕು ಅಂತ ಕೇಳತೊಡಗಿದೆ. ಅಂಬೇಡ್ಕರ್ ಬಗ್ಗೆ ಓದಲು ಶುರು ಮಾಡಿದೆ. ಮೊದಲು ಕರ್ನಾಟಕದಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಓಡಾಡಿ, ಸಫಾಯಿ ಕೆಲಸ ಮಾಡುವವರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡೆ. ನಡೆದಂತೆಲ್ಲ ಹೋರಾಟದ ಒಂದೊಂದೇ ಮೆಟ್ಟಿಲು ಕಾಣತೊಡಗಿತು…’’

ಹಲವು ನೆಲೆಯಲ್ಲಿ ಹೋರಾಟ ರೂಪುಗೊಂಡಿದ್ದನ್ನು ಬೆಜವಾಡ ವಿಲ್ಸನ್ ತೆರೆದಿಡುತ್ತಾರೆ.
‘‘ಬಾರ್ವೆ ಕಮಿಟಿ, ಕಾಕಾ ಕಾಲೇಕರ್ ಕಮಿಟಿ, ಮಲ್ಕಾನಿ ಕಮಿಟಿ, ಪಾಂಡ್ಯ ಕಮಿಟಿ… ಹೀಗೆ ಈ ಸಮಸ್ಯೆಯ ಅಧ್ಯಯನಕ್ಕೆ ನೇಮಿಸಿದ ನಾಲ್ಕೆ ದು ಸಮಿತಿಗಳು ಕೂಡ ಒಣ ಪಾಯಿಖಾನೆಗಳನ್ನು ಮುಚ್ಚಿಸಿ, ಅವರಿಗೆ ಸುರಕ್ಷತಾ ಸಾಧನಗಳನ್ನು ಕೊಡಿ ಎಂದವೇ ಹೊರತು ಒಬ್ಬ ಮನುಷ್ಯನ ಮಲವನ್ನು ಇನ್ನೊಬ್ಬ ಮನುಷ್ಯ ಬಾಚುವುದು ಘನತೆಯಿಲ್ಲದ ಕೆಲಸ, ಅದನ್ನು ನಿಲ್ಲಿಸಬೇಕು, ನಿಷೇಧಿಸಬೇಕು ಎನ್ನಲಿಲ್ಲ. ಎಷ್ಟು ಸುದೀರ್ಘ ಹೋರಾಟ ಮಾಡಬೇಕಾಯಿತು. ಮೊದಲು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದಾಗ ನಾನಂದುಕೊಂಡಿದ್ದೆ, ಸಿನಿಮಾಗಳಲ್ಲಿ ನೋಡುತ್ತೇವಲ್ಲ, ಹಾಗೆ ನನ್ನನ್ನು ಕರೆಯುತ್ತಾರೆ, ನಾನು ಯುವರ್ ಆನರ್ ಎಂದು ಶುರು ಮಾಡಿ, ನನ್ನ ಜನ ಕೈಯಲ್ಲಿ ಮಲ ಬಾಚುತ್ತಾರೆ, ಬಕೀಟುಗಳಲ್ಲಿ ತುಂಬಿ ಚೆಲ್ಲುತ್ತಾರೆ, ನೀವು ನೋಡಿಲ್ಲವಾ, ನಿಮಗೆ ಇದು ನ್ಯಾಯ ಅನ್ನಿಸುತ್ತಾ ಎಂದೆಲ್ಲ ವಾದಿಸಬೇಕು ಅಂದುಕೊಂಡಿದ್ದೆ. ಆದರೆ ಅಲ್ಲಿ ನಮ್ಮನ್ನು ಬಿಡೋದೆ ಇಲ್ಲ ಅಂತ ಆಮೇಲೆ ಗೊತ್ತಾಯಿತು. ನಮ್ಮ ವಕೀಲರು ಹೋಗಿ ವಾದಿಸುತ್ತಾರೆ. ೧೯೯೩ರಲ್ಲಿ ಬಂದ ತೀರ್ಪು ಕೂಡ ಪರಿಪೂರ್ಣವಾಗಿರಲಿಲ್ಲ. ಮತ್ತೆ ಹೋರಾಟ. ೨೦೧೩ರಲ್ಲಿ ಕೊನೆಗೂ ತೀರ್ಪು ಬಂದಿತು. ಆದರೆ ಇದೂ ಕೂಡ ನಾವು ನಿರೀಕ್ಷಿಸಿದಷ್ಟು ಬಲವಾದ ಕಾಯಿದೆ ಅಲ್ಲ. ಒಣ ಪಾಯಿಖಾನೆಗಳ ಮಲ ಬಾಚುವುದು, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕುಗಳಲ್ಲಿ ಇಳಿದು ಹೊಲಸನ್ನು ಕೈಯಿಂದ ಬಾಚುವುದು, ಸಾಗಿಸುವುದು, ರೈಲ್ವೆ ಟ್ರಾಕಿನ ಮೇಲಿನ ಮಲ ಬಾಚುವುದು… ಹೀಗೆ ಎಲ್ಲ ರೀತಿಯಲ್ಲಿ ಹೊಲಸು ಬಾಚುವ ಕೆಲಸವನ್ನು ಮಾಡುತ್ತಿದ್ದರೆ ಅದನ್ನು ನಿಷೇಧಿಸಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಎಲ್ಲ ರಾಜ್ಯಗಳೂ ನಮ್ಮಲ್ಲಿ ಈಗ ಈ ಪದ್ಧತಿ ಇಲ್ಲ ಎಂದವು. ಕ್ಷಿಪಣಿ ಉಡಾಯಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ನಮಗೆ ಮಲದ ಗುಂಡಿಯನ್ನು ಸ್ವಚ್ಛಪಡಿಸಲು ಯಂತ್ರಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲವೇ? ನಾವು ಮನಸ್ಸು ಮಾಡುತ್ತಿಲ್ಲ. ಈಗ ಎಚ್‌ಎಎಲ್‌ನವರು ಒಂದು ರೋಬಾಟಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಆ ಯಂತ್ರಕ್ಕೆ ಕೇವಲ ೫ ಲಕ್ಷ ರೂ. ಅದನ್ನೀಗ ಹೈದರಾಬಾದಿನಲ್ಲಿ ಪರಿವೀಕ್ಷಣೆ ಮಾಡ್ತಿದ್ದಾರೆ. ಪ್ರತೀ ವರ್ಷ ಮಲದ ಗುಂಡಿಗೆ ಬಿದ್ದು ಸಾಯುವವರ ಪ್ರಾಣಕ್ಕೆ ಹೋಲಿಸಿದರೆ ಈ ಯಂತ್ರದ ಬೆಲೆ ಏನೂ ಅಲ್ಲ. ತಂತ್ರಜ್ಞಾನ ಇಲ್ಲವೇ ಇಲ್ಲ ಅಂತಲ್ಲ, ಆದರೆ ಅದನ್ನು ಒಗ್ಗಿಸಿ, ಬಳಸಲು ಮುಂದಾಗಬೇಕಿದೆಯಷ್ಟೆ’’.

ಶತಮಾನಗಳಿಂದ ಶಿಕ್ಷಣದಿಂದ ವಂಚಿತಗೊಳಿಸಿದ ಈ ಸಮುದಾಯಕ್ಕೆ ಅಕ್ಷರಗಳೇ ಬಿಡುಗಡೆ ತರುತ್ತದೆ ಎನ್ನುವುದು ವಿಲ್ಸನ್ ಅವರ ನಂಬಿಕೆ.
‘‘ನನ್ನಮ್ಮ ಶಾಲೆಯ ಹತ್ತಿರ ಹೋದಾಕೆ ಕೂಡ ಅಲ್ಲ, ಶಾಲೆಯ ನೆರಳೂ ಅವಳ ಮೇಲೆ ಬಿದ್ದಿರಲಿಲ್ಲ. ಆದರೆ ಅವಳಿಗೆ ಗೊತ್ತಿತ್ತು, ಕಲಿತರೆ ಮಾತ್ರ ಇಲ್ಲಿಂದ ಹೊರಹೋಗಲು ಸಾಧ್ಯ ಅಂತ. ಕೆಲ ವರ್ಷಗಳ ಹಿಂದೆ ನನ್ನಮ್ಮ ತೀರಿಕೊಂಡಾಗ ಕೆಜಿಎಫ್‌ಗೆ ಬಂದಿದ್ದೆ. ದಿನ ಎಲ್ಲ ಮುಗಿಸಿ ಹೊರಡುವಾಗ, ನಿನ್ನಮ್ಮ ಇದ್ದಾಗ ಬರ್ತಿದ್ದೆ ಇಲ್ಲಿಗೆ, ಈಗ ಎಲ್ಲಿಗೆ ಹೋಗ್ತಿದ್ದೀಯಪ್ಪ, ಮತ್ತೆ ಯಾವಾಗ ಬರ್ತೀಯಪ್ಪ ಎಂದು ಕೇಳಿದರು. ನಾನು ಹೇಳಿದೆ… ನನ್ನಮ್ಮ ಮಲ ಹೊರುತ್ತಲೇ ಸತ್ತಳು. ಈ ದೇಶದಲ್ಲಿ ಎಷ್ಟು ಜನ ಮಲ ಹೊರುವ ಹೆಣ್ಣುಮಕ್ಕಳಿದ್ದಾರೆ ಎಲ್ಲರೂ ನನ್ನಮ್ಮನೇ ಅಂತ.

ಜಾತಿ, ಅಸ್ಪ್ತ್ಯೃಶ್ಯತೆ ಈಗ ಮೊದಲಿನಷ್ಟು ಇಲ್ಲ ಎಂದು ವಾದಿಸುವವರಿಗೆ ವಿಲ್ಸನ್ ಹೇಳುತ್ತಾರೆ:
‘‘ಜಾತಿ ಎಲ್ಲಿದೆ, ಮಾಲ್ ನೋಡಿ, ಮೆಟ್ರೋ ನೋಡಿ, ಮಾರ್ಕೆಟ್ ನೋಡಿ, ಎಲ್ಲಿದೆ ಜಾತಿ, ಎಲ್ಲಿದೆ ಅಸೃಶ್ಯತೆ ಎನ್ನುತ್ತಾರೆ. ಬಹುತೇಕರಿಗೆ ತಮ್ಮ ಜಾತಿಯನ್ನು ಮರೆಯುವ ಸೌಭಾಗ್ಯ ಇರುತ್ತದೆ. ಆದರೆ ನನಗೆ ಆ ಸೌಭಾಗ್ಯ ಇರಲಿಲ್ಲ, ನಾನು ನನ್ನ ಜಾತಿಯನ್ನು ಮರೆಯಲು ಸಾಧ್ಯವಿಲ್ಲ, ಏಕೆಂದರೆ ಸಮಾಜ ಮರೆಯಲು ಬಿಡುವುದಿಲ್ಲ, ಕೆಲವು ವರ್ಷಗಳ ಹಿಂದೆ ಡೆಲ್ಲಿ ಪ್ರೆಸ್ ಕ್ಲಬ್‌ನಲ್ಲಿ ನಾನು ಮಾತನಾಡಿ ಹೊರಟಾಗ, ಯಾರೋ ಕೇಳಿದರು ಇನ್ನೊಬ್ಬರಿಗೆ ಇವನ್ಯಾರು ಎಂದು, ಅದಕ್ಕೆ ಇನ್ನೊಬ್ಬರು ಹೇಳಿದರು, ಅ್ಂಯೋ ಅವನ ಹೆಸರು ಅದೇನೋ ಇದೆಯಪ್ಪ ಬೇಜವಾಡ ಅಂತ, ಅದೇ ಭಂಗಿ ಕೆಲಸ ಮಾಡುವವರ ಪೈಕಿ ಆತ. ಮತ್ತೆ ನನಗೆ ಕೇಳುವಂತೆೆುೀಂ ಇದನ್ನು ಗುಸುಗುಸು ಮಾತಾಡುತ್ತಾರೆ… ಹೀಗೆ ನನಗೆ ಈಗಲೂ ನನ್ನ ಜಾತಿಯನ್ನು ಮರೆಯಲು ಬಿಡುವುದಿಲ್ಲ. ಒಮ್ಮೆ ಈ ಜಾತಿಯಲ್ಲಿ ಹುಟ್ಟಿದರೆ, ಸಾಯುವ ತನಕ ತೋಟಿ ಅಥವಾ ಭಂಗಿೆುೀಂ. ಹೆಸರು ಬದಲಿಸಿ, ಚಹರೆ ಬದಲಿಸಿ, ಏನೇ ಬದಲಿಸಿದರೂ ಇದು ಹೋಗುವುದಿಲ್ಲ. ಹೀಗಾಗಿ ನಾನು ಕೇಳಲು ಶುರು ಮಾಡಿದೆ. ಹೌದಪ್ಪ, ನಾನು ಭಂಗಿ, ನಾನು ತೋಟಿ, ಏನೀಗ. ನಾವು ತೋಟಿಯಾಗಬೇಕೆಂದು ಆ್ಂಕೆು ಮಾಡಿಕೊಂಡಿದ್ದಲ್ಲ, ನೀವು ನಮ್ಮನ್ನು ತೋಟಿ ಮಾಡಿದ್ದೀರಿ. ನಿಮ್ಮ ಗಲೀಜು ಬಳಿಯುವ ಕೆಲಸವನ್ನು ನಾವು ಆ್ಂಕೆು ಮಾಡಿಕೊಂಡಿದ್ದಲ್ಲ, ನಮ್ಮ ಮೇಲೆ ನೀವು ಹೇರಿದ್ದೀರಿ. ಆದ್ದರಿಂದ ದೋಷಿ ನೀವು, ನಾವಲ್ಲ. ಇದು ಕೇವಲ ಸಫಾಯಿ ಕರ್ಮಚಾರಿಗಳ ಸಮಸ್ಯೆ ಅಲ್ಲ. ಒಂದು ನಾಗರಿಕ ಸಮಾಜದ ಸಮಸ್ಯೆ. ಒಂದು ಸಮಾಜದ ಒಟ್ಟೂ ಆರೋಗ್ಯದ ಪ್ರಶ್ನೆ.

× Chat with us