ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಿಸಿ ಒಳಗೊಳಗೆ ಕಠಿಣ ನಿಯಮ; ಅತಿಥಿ ಉಪನ್ಯಾಸಕರ ಆಕ್ರೋಶ!

ಮೈಸೂರು: ಕಳೆದೊಂದು ತಿಂಗಳಿನಿಂದ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಸೇವಾ ವಿಲೀನತೆ ಎಂಬ ಏಕೈಕ ಬೇಡಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಹೈರಾಣಾದ ಉಪನ್ಯಾಸಕರಿಗೆ ಸಮಾಧಾನಪಡಿಸಲು ಜಾರಿಗೊಳಿಸಿರುವ ಹೊಸ ನಿಯಮಗಳು ಮತ್ತಷ್ಟು ಕಂಗೆಡುವಂತೆ ಮಾಡಿದೆ.

ಈ ಹಿಂದೆ ವಾರಕ್ಕೆ 8 ಗಂಟೆಗಳ ಕಾರ್ಯಭಾರ ನೀಡಲಾಗುತ್ತಿತ್ತು. ಈ ಕೆಲಸಕ್ಕೆ ಯುಜಿಸಿ ಅರ್ಹತೆ ಇದ್ದವರಿಗೆ 13 ಸಾವಿರ ರೂ. ಹಾಗೂ ಯುಜಿಸಿ ಅರ್ಹತೆ ಇಲ್ಲದವರಿಗೆ 11 ಸಾವಿರ ರೂ. ನೀಡಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ ಒಬ್ಬರಿಗೆ 15 ಗಂಟೆಗಳ ಕಾರ್ಯಭಾರ ಜತೆಗೆ ೫ ವರ್ಷಕ್ಕಿಂತ ಹೆಚ್ಚಿನ ಸೇವಾನುಭವದೊಂದಿಗೆ ಯುಜಿಸಿ ಅರ್ಹತೆ ಪಡೆದವರಿಗೆ 23 ಸಾವಿರ ರೂ., ಎನ್‌ಇಟಿ, ಕೆ-ಸೆಟ್ ಅರ್ಹತೆಯುವುಳ್ಳವರಿಗೆ 28 ಮತ್ತು ಯುಜಿಸಿ ಅರ್ಹತೆ ಇಲ್ಲದವರಿಗೆ 26 ಸಾವಿರ ರೂ. ವೇತನ ನಿಗದಿಪಡಿಸಿದೆ.

ಹಾಗೊಂದು ವೇಳೆ ಸರ್ಕಾರ ಜಾರಿ ಮಾಡಿರುವ ಹೊಸ ನಿಯಮ ಪ್ರಕಾರ ಅನುಸರಿಸಿದಲ್ಲಿ ಬರೋಬ್ಬರಿ 7500ಕ್ಕೂ ಹೆಚ್ಚು ಉಪನ್ಯಾಸಕರಿಗೆ ಕೆಲಸವೇ ಇಲ್ಲದಂತಾಗುತ್ತದೆ. ಈ ಮೊದಲು ವಾರಕ್ಕೆ 8 ಗಂಟೆಗಳ ಕಾರ್ಯಭಾರವಿದ್ದುದ್ದು ಈಗ 15 ಗಂಟೆ ಆಗಿದ್ದರಿಂದ ಅರ್ಧದಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ತರಗತಿ ಬಹಿಷ್ಕರಿಸಿ ಹೋರಾಟ ಮುಂದುವರಿಸಿದ್ದೇವೆ ಎನ್ನುತ್ತಾರೆ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು.

ಸೊರಗಿದ ವಿದ್ಯಾರ್ಥಿ ಸಮೂಹ:
ಅತ್ತ ಅತಿಥಿ ಉಪನ್ಯಾಸಕರು ನಿರಂತರ ಹೋರಾಟಕ್ಕೆ ಇಳಿದಿರುವುದರಿಂದ ಇತ್ತ ವಿದ್ಯಾರ್ಥಿ ಸಮೂಹಕ್ಕೆ ತರಗತಿಯೇ ನಡೆಯುಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ಕಲಾ ವಿಭಾಗದ ವಿದ್ಯಾರ್ಥಿಗಳು ಸ್ವಯಂ ಅಧ್ಯಯನದಲ್ಲಿ ತೊಡಗಿದರೆ, ವಿಜ್ಞಾನ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಪಾಠ ಪ್ರವಚನವೇ ಆದ್ಯತೆಯಾಗಿದೆ. ಪ್ರಾಯೋಗಿಕ ತರಗತಿಗಳೂ ನಡೆಯಬೇಕಿದೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದಿಂದ ಈಗಾಗಲೇ ಪಠ್ಯ ಬದಲಾವಣೆಯಾಗಿದ್ದು, ಇದರಿಂದ ಉಪನ್ಯಾಸಕರ ಉಪಸ್ಥಿತಿ ಅನಿವಾರ್ಯವಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ನಿಯಮ 1(3)(2) ಮತ್ತು 14ರ ಅಡಿಯಲ್ಲಿ ಸೇವಾ ವಿಲೀನಗೊಳಿಸಬೇಕು. ಈ ನಿಯಮವನ್ನು ಈಗಾಗಲೇ ಹಿಮಾಚಲ ಪ್ರದೇಶ, ಹೊಸದಿಲ್ಲಿ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಅದೇ ಮಾದರಿಯನ್ನು ರಾಜ್ಯ ಅನುರಿಸಬೇಕು. ಅಲ್ಲಿಯವರೆಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ತಡೆಯಿಡಿಯುವಂತೆ ಅತಿಥಿ ಉಪನ್ಯಾಸಕರು ಪ್ರತಿಭಟನೆಗಿಳಿದಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯದಲ್ಲೂ ಪ್ರತಿಭಟನೆ, ಪತ್ರಿಕಾಗೋಷ್ಠಿಗಳು ನಡೆದು ಸರ್ಕಾರದ ಆದೇಶ ವಾಪಾಸಿಗೆ ಒತ್ತಾಯಿಸಿದ್ದಾರೆ.

—–
ಶಿಕ್ಷಣ ಸಚಿವರಿಗೆ ಇದೀಗ ಶಿಕ್ಷಕರ ಕ್ವಾಲಿಫೈಡ್ ನೆನಪು ಆಗಿದೆ. ೨೦ ವರ್ಷಗಳಿಂದ ನೆನಪು ಆಗಲಿಲ್ಲ. ನಾವೆಲ್ಲ ಕ್ವಾಲಿಫೈಡ್ ಶಿಕ್ಷಕರೇ. ಬೇಕಿದ್ದರೆ ಚೆಕ್ ಮಾಡಿಕೊಳ್ಳಿ. ೧೪ ಸಾವಿರ ಶಿಕ್ಷಕರಲ್ಲಿ ೭ ಸಾವಿರ ಮಂದಿಯನ್ನು ತೆಗೆದು ಹಾಕುವ ಹುನ್ನಾರ ಅಡಗಿದೆ. ಒಂದು ವೇಳೆ ಹೊಸ ಆದೇಶದಿಂದ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಸತ್ತರೆ ಅದಕ್ಕೆ ಉನ್ನತ ಶಿಕ್ಷಣ ಸಚಿವರೇ ನೇರ ಹೊಣೆ.
-ನಾಗಮಣಿ, ಅತಿಥಿ ಉಪನ್ಯಾಸಕರು.
——–
ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಪ್ರಸ್ತುತ ಹೊರಡಿಸಿರುವ ಉದ್ಯೋಗ ಕಡಿತಗೊಳಿಸುವ ಮಾರಕ ಆದೇಶ ಹಿಂಪಡೆದು ಸಾಮಾಜಿಕ ನ್ಯಾಯ ತತ್ವದಡಿಯಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಸೇವಾ ವಿಲೀನತೆ ಮೂಲಕ ಉದ್ಯೋಗ ಭದ್ರತೆ ನೀಡಬೇಕು. ಇಲ್ಲವಾದಲ್ಲಿ ಅತಿಥಿ ಉಪನ್ಯಾಸಕರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದಾರೆ.
-ಕೆ.ಟಿ.ಶ್ರೀಕಂಠೇಗೌಡ, ವಿಧಾನಪರಿಷತ್ ಸದಸ್ಯ
———
೪೦ ದಿನಗಳಿಂದಲೂ ಅತಿಥಿ ಉಪನ್ಯಾಸಕರು ಸೇವಾ ವಿಲೀನತೆ ಹಾಗೂ ಸೇವಾ ಭದ್ರತೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟ ನಡೆಸಿದ್ದೇವೆ. ಆದರೆ, ಸರ್ಕಾರ ತರಾತುರಿುಂಲ್ಲಿ ಸಮಿತಿೊಂಂದನ್ನು ರಚಿಸಿ ಶಿಕ್ಷಣ ತಜ್ಞರಿಲ್ಲದ ಸಮಿತಿ ವರದಿುಂನ್ನು ಆದೇಶ ವಾಡುವ ಮೂಲಕ ಅತಿಥಿ ಉಪನ್ಯಾಸಕರನ್ನು ವಂಚಿಸಿದೆ.
– ಕೆ.ಪರಮೇಶ್, ಅಧ್ಯಕ್ಷ,
————-
ಮಂಡ್ಯ ಜಿಲ್ಲಾ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಆಶಯದ ಮೇಲಾದರೂ ಆದೇಶ ನೀಡದೇ, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ದಾರಿ ತಪ್ಪಿಸುವ ಆದೇಶ ನೀಡಿ ಉನ್ನತ ಶಿಕ್ಷಣ ಸಚಿವರು ಶೇ.೫೦ ರಷ್ಟು ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಕೈಬಿಡುವಂತೆ ನಿರ್ಧಾರ ಮಾಡುವುದರ ಜೊತೆಗೆ ಅತಿಥಿ ಉಪನ್ಯಾಸಕರಿಗೆ ದ್ರೋಹವೆಸಗಿದ್ದಾರೆ.
-ಮಲ್ಲಿಕಾರ್ಜುನಸ್ವಾಮಿ, ಅಧ್ಯಕ್ಚ
ಸಮನ್ವಯ ಸಮಿತಿ, ಚಾ.ನಗರ ಜಿಲ್ಲೆ