ಗೂಗಲ್ ಟ್ರಾನ್ಸ್ಲೇಟ್ : ಕೊಂಕಣಿ ಭಾಷೆ ಸೇರ್ಪಡೆ
ಪಣಜಿ: ಪ್ರಚಂಚದಾದ್ಯಂತ ಇರುವ ಕೊಂಕಣಿ ಭಾಷಿಕರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ.
ಹೌದು, ಗೂಗಲ್ ಟ್ರಾನ್ಸ್ಲೇಟ್ ಗೆ 24 ಭಾಷೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಅವುಗಳಲ್ಲಿ ಕೊಂಕಣಿ ಭಾಷೆಯು ಸೇರಿದ್ದು, ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಕೊಂಕಣಿ ಭಾಷೆಯನ್ನು ಮಾತನಾಡುವ ಜನರಿದ್ದು ಹಲವಾರು ವಿಷಯ ಮತ್ತು ವಿಚಾರಗಳನ್ನು ಹಂಚಿಕೊಳ್ಳಲು, ವಿನಿಮಯ ಮಾಡಿಕೊಲ್ಳು ಇದೀಗ ಸಹಾಯಕವಾಗಲಿದೆ. ಗೂಗಲ್ ಭಾಷೆಗಳ ಸೇರ್ಪಡೆಯನ್ನು ಘೋಷಿಸಿದ್ದು, ಸಾಕಷ್ಟು ತಂತ್ರಜ್ಞಾನಗಳಲ್ಲಿ ಪ್ರತಿನಿಧಿಸದ ಭಾಷೆಗಳ ಸಮಸ್ಯೆಗಳನ್ನು ನಿವಾರಿಸಲು ಹಲವಾರು ಜನ ಸಮೂದಾಯಗಳನ್ನು ಸಂಪರ್ಕಿಸಲು ಸಹಾಯಕ್ಕಾಗಿ ಈ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದೆ.