“ಗಾರ್ಗಿ”ಯಾಗಿ ಕನ್ನಡಕ್ಕೆ ಎಂಟ್ರಿ ಕೊಟ್ಟ ನಟಿ ಸಾಯಿ ಪಲ್ಲವಿ!

 ಬೆಂಗಳೂರು : ತಮಿಳು, ಮಲೆಯಾಳಂ, ತೆಲಗು ಭಾಷೆಯ ಚಿತ್ರಗಳಲ್ಲಿ ಮಿಂಚಿ ಸಂಚಲನ ಮೂಡಿಸಿದ್ದ ಖ್ಯಾತ ನಟಿ ಸಾಯಿ ಪಲ್ಲವಿ ಸೆಂತಮರಾಯಿ ಇಂದು ತಮ್ಮ ಹುಟ್ಟು ಹಬ್ಬದ ದಿನವೇ ಗಾರ್ಗಿದ ಪಸ್ಟ್‌ ಲುಕ್‌ ರಿಲೀಸ್‌ ಮಾಡುವ ಮೂಲಕ ಸ್ಯಾಂಡಲ್‌ ವುಡ್‌ ಗೆ ಪ್ರವೇಶ ಪಡೆದಿದ್ದಾರೆ.

ಹೌದು, ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ಸಿನಿಮಾದ ಮೂಲಕ ಸಾಯಿ ಪಲ್ಲವಿ ಕನ್ನಡಕ್ಕೆ ಬರಲಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು, ಇಂದು ನಟಿ ಸಾಯಿ ಪಲ್ಲವಿ ಗಾರ್ಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದು, ಹೊಸ ಚಿತ್ರಕ್ಕೆ ಹಾರೈಸಿ ಎಂದು ಕೇಳಿಕೊಂಡಿದ್ದಾರೆ. ಈ ಫಸ್ಟ್ ಲುಕ್ ವಿಶೇಷ ಅರ್ಥ ನೀಡುತ್ತಿರುವಂತಿದೆ.  ಅಸಹಾಯಕ ಮಹಿಳೆಯೊಬ್ಬಳು ನ್ಯಾಯ ದೇವತೆಯ ಮುಂದೆ ಬ್ಯಾಗ್‌ ಹಾಕಿಕೊಂಡು ಓಡುತ್ತಿರುವಂತೆ ಸಾಯಿ ಪೋಸ್‌ ಕೊಟ್ಟಿದ್ದಾರೆ. ಗಾರ್ಗಿ ಚಿತ್ರವು ನಾಲ್ಕು ಭಾಷೆಗಳಲ್ಲಿ ತಯಾರಾಗಿದ್ದು. ಚಿತ್ರರಂಗದಿಂದ ದೂರ ಉಳಿಯುತ್ತಾರೆ ಎಂಬ ಮಾತಿಗೆ ಈ ಮೂಲಕ ಉತ್ತರಿಸಿದ್ದಾರೆ.

ಗಾರ್ಗಿ ಪದ ಬ್ರಹ್ಮವಾದಿನಿ ಅಥವಾ ಪ್ರಕಾರ ಪಂಡಿತೆ ಎಂಬರ್ಥವನ್ನು ಕೊಡುತ್ತದೆ.  ಕ್ರಿ. ಪೂ. 7 ನೇ ಶತಮಾನದಲ್ಲಿ ಜೀವಿಸಿದ್ದ ವಚಕ್ನು ಎಂದ ಋಷಿಯ ಮಗಳಾಗಿದ್ದು, ಹಮ್ಮು-ಬಿಮ್ಮುಗಳಿಲ್ಲದ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದಳು ಎಂದು ಐತಿಹಾಸಿಕವಾಗಿ ತಿಳಿದು ಬರುತ್ತದೆ.