ಪತ್ರಿಕೆಯಿಂದ

ಮೊದಲ ದಸರಾದಲ್ಲೇ ವಂಕಿ ಉಂಗುರದ ಉಡುಗೊರೆ!

ಸಂಗೀತ ಕಟ್ಟಿ
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರು.

ನಾಡಹಬ್ಬ ದಸರಾ ಎಂದಾಕ್ಷಣ ಬಹುತೇಕ ಎಲ್ಲರ ಹೃದಯಗಳಲ್ಲಿ ಮೈಸೂರಿನ ಪಾರಂಪರಿಕ ಸೊಗಡು, ಯದು ವಂಶದ ಅರಸರ ಗತವೈಭವ, ಸಂಗೀತ, ಸಾಹಿತ್ಯ, ಆಟೋಟ ಸ್ಪರ್ಧೆ, ಯುವ ದಸರಾ, ಚಲನಚಿತ್ರೋತ್ಸವ. . . ಹೀಗೆ ಹಲವಾರು ನೆನಪುಗಳು ದೇದೀಪ್ಯಮಾನವಾಗಿ ಬೆಳಗಬಹುದು. ನನಗೆ ಇವೆಲ್ಲದರ ಜೊತೆಗೆ ಮೊದಲ ದಸರಾದಲ್ಲೇ ವಂಕಿ ಉಂಗುರದ ಉಡುಗೊರೆ ಸಿಕ್ಕಿದ ಅತ್ಯಂತ ಸಂಭ್ರಮದ ಕ್ಷಣಗಳು ಎದೆಯಾಳದಲ್ಲಿ ಪುಟಿದೇಳುತ್ತವೆ.

ದಸರಾ ಉತ್ಸವ ನಡೆಯುವ ಹತ್ತು ದಿನಗಳು ಮೈಸೂರು ಸಿಂಗಾರಗೊಂಡು ಪ್ರವಾಸಿಗರ ಕಣ್ಮನ ತಣಿಸುತ್ತದೆ. ಇಂತಹ ದಸರಾದಲ್ಲಿ ೧೯೮೩ರಲ್ಲಿ ಮೊದಲ ಬಾರಿಗೆ ನಾನು ಸಂಗೀತ ಕಛೇರಿ ನಡೆಸಿಕೊಡಲು ಹೋಗಿದ್ದೆ. ಆಗೆಲ್ಲ ಅರಮನೆಯ ದರ್ಬಾರ್ ಹಾಲ್‌ನಲ್ಲೇ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ನಾನು ೭ನೇ ತರಗತಿ ವಿದ್ಯಾರ್ಥಿನಿಯಾಗಿದ್ದೆ. ದರ್ಬಾರ್ ಹಾಲ್ ರಾಜಮನೆತನದವರು, ಗಣ್ಯರು ಹಾಗೂ ಸಾರ್ವಜನಿಕರಿಂದ ತುಂಬಿ ತುಳುಕಿತ್ತು. ಅಕ್ಷರಶಃ ಮಹಾರಾಜರ ಕಾಲದ ಸಂಗೀತ ಕಛೇರಿಯಂತೆ ಭಾಸವಾಗಿತ್ತು. ನಾನು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಹಾಡುತ್ತಿದ್ದೆ. ಹಾರ‍್ಮೋನಿಯಂ ಮತ್ತು ತಬಲ ಸಹಕಾರವನ್ನು ಕ್ರಮವಾಗಿ ಎಸ್. ಬಿ. ಹುನ ಗುಂದ್ ಮತ್ತು ಭಾದ್ರಿ ಅವರು ನೀಡಿದ್ದರು.

ಅಂದು ಇಡೀ ದರ್ಬಾರ್ ಹಾಲ್‌ನಲ್ಲಿ ಸಂಗೀತವನ್ನು ಪ್ರತಿಯೊಬ್ಬರೂ ಸಂಗೀತದ ಮೇಲಿನ ಅಕ್ಕರೆಯಿಂದ ಆಲಿಸುತ್ತಿದ್ದರು. ಆಗ ಸಭಿಕರ ಮಧ್ಯದಿಂದ ಗಣ್ಯರೊಬ್ಬರು ಇದ್ದಕ್ಕಿದ್ದಂತೆ ಮೇಲೆದ್ದು ಹೊರಗೆ ನಡೆದರು. ನಾನು ಒಂದಿಷ್ಟು ಅಳುಕಿದರೂ ಆತ್ಮವಿಶ್ವಾಸದಿಂದ ಗಾಯನವನ್ನು ಮುಂದುವರಿಸಿದ್ದೆ. ಸ್ವಲ್ಪ ಸಮಯದ ಬಳಿಕ ಆ ಗಣ್ಯರು ಮತ್ತೆ ದರ್ಬಾರ್ ಹಾಲ್‌ಗೆ ವಾಪಸ್ಸಾದರು. ಆಗ ಅವರ ಪತ್ನಿ ಕೂಡ ಅವರೊಂದಿಗೆ ಇದ್ದರು. ಅದರಿಂದ ನಾನು ಹಾಡುಗಾರಿಕೆಯನ್ನು ಮತ್ತಷ್ಟು ಸಂಭ್ರಮದಿಂದ ಮುಂದುವರಿಸಿದೆ. ಆ ಗಣ್ಯರು ಮೈಸೂರಿನ ಪ್ತತಿಷ್ಠಿತ ಅರವಿಂದ ಪರಿಮಳ ಸಂಸ್ಥೆಯ ಮಾಲೀಕರಾಗಿದ್ದ ನಾಗರಾಜ್ ಎಂಬುದು ಆಮೇಲೆ ಗೊತ್ತಾಯಿತು. ನನ್ನ ಸಂಗೀತ ಕಛೇರಿ ಮುಗಿಯುವವರೆಗೂ ಕಾದಿದ್ದ ಅವರು ನಂತರ, ಕಾರ್ಯಕ್ರಮ ಆಯೋಜಕರ ಬಳಿ, ಪುಟ್ಟ ಹುಡುಗಿಯ ಸಂಗೀತ ಗಾಯನ ಬಹಳ ಚೆನ್ನಾಗಿತ್ತು. ಆಕೆಯನ್ನು ಭೇಟಿಯಾಗಬೇಕು ಎಂಬುದಾಗಿ ಮನವಿ ಮಾಡಿದರಂತೆ.

ಗಣ್ಯರಾದ್ದರಿಂದ ಆಯೋಜಕರು ಅವರನ್ನು ನಮ್ಮ ತಂಡ ಇದ್ದಲ್ಲಿಗೆ ಕರೆದುಕೊಂಡು ಬಂದರು. ಆ ಗಣ್ಯರ ಪತ್ನಿಯೂ ಜತೆಗಿದ್ದರು. ಹಾಗೆ ಬಂದವರು, ನನ್ನನ್ನು ಪ್ರೀತಿಯಿಂದ ಮಾತನಾಡಿಸಿದರು. ಅಂತಿಮವಾಗಿ ಚಿನ್ನದ ವಂಕಿ ಉಂಗುರವನ್ನು ನನಗೆ ಉಡುಗೊರೆಯಾಗಿ ನೀಡಿ ಹರಸಿದರು. ಹಾಗಾಗಿ ನಾನು ಸಂಗೀತ ಕಾರ್ಯಕ್ರಮ ನೀಡಿದ ಮೊದಲ ದಸರಾ ನನ್ನ ಜೀವನದ ಪುಟಗಳಲ್ಲಿ ಅಚ್ಚಳಿಯದ ಅಕ್ಷರಗಳಿಂದ ಅನುಕ್ಷಣದ ನೆನಪಾಗಿ ಉಳಿದಿದೆ. ಕೆಲ ವರ್ಷಗಳ ನಂತರ ಅರಮನೆಯ ಆವರಣಕ್ಕೆ ಸ್ಥಳಾಂತರಿಸಲಾಯಿತು. ಬಳಿಕವೂ ದಸರಾ ಕಾರ್ಯಕ್ರಮಗಳಲ್ಲಿ ಹಾಡಿದ್ದೇನೆ. ಆದರೆ, ಉಡುಗೊರೆ ನೀಡಿದ ಮೊದಲ ಬಾರಿಯ ದಸರಾ ಹಬ್ಬದ ನೆನಪನ್ನು ಮರೆಯಲಾಗದು.

ದರ್ಬಾರ್‌ ಹಾಲ್‌ನಲ್ಲಿ ಸಂಗೀತ ಕಛೇರಿ ಅವಿಸ್ಮರಣೀಯ
ಕಾಲಕ್ಕೆ ತಕ್ಕಂತೆ ದಸರಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ. ನಾನು ಸಾಕಷ್ಟು ಬಾರಿ ದಸರಾ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದೇನೆ. ಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಬಾಲಮುರಳಿ ಕೃಷ್ಣ, ಸಿ. ಅಶ್ವತ್ಥ್ ಮತ್ತಿತರರೊಂದಿಗೆ ನಾನು ಸಂಗೀತ ಕಾರ್ಯಕ್ರಮದಲ್ಲಿ ಹಾಡಿದ ಕ್ಷಣಗಳು ಅವಿಸ್ಮರಣೀಯ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಿ

ಮೈಸೂರಿನಲ್ಲಿ ಸ್ವಲ್ಪ ಮಳೆಯಾದರೂ ರೂಪಾನಗರ ಬಡಾವಣೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವೇಳೆ ಮಳೆ ಬಂದರಂತೂ ವಿದ್ಯುತ್ ಸಂಪರ್ಕಕಲ್ಪಿಸುವುದು ಬೆಳಿಗ್ಗೆಯೇ.…

2 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ ; ಬಿಜೆಪಿಗೆ ತಮಿಳುನಾಡು, ಪಶ್ಚಿಮ ಬಂಗಾಳವೇ ತಲೆನೋವು

ದೆಹಲಿ ಕಣ್ಣೋಟ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಳೆದ ಒಂದೂವರೆ ತಿಂಗಳಿಂದ ನಡೆಸುತ್ತಿರುವ ಯುದ್ಧದಿಂದ ಉಂಟಾಗಿರುವ ಇಂಧನ ಮತ್ತು ಅನಿಲ…

25 mins ago

ನನ್ನ ಮೊದಲ ಕವಿತೆಯ ಕಥೆ….

ಕನ್ನಡದ ನಾಲ್ವರು ಖ್ಯಾತ ಕವಿಗಳು ತಮ್ಮ ಮೊದಲ ಕವಿತೆಯ ನೆನಪಲ್ಲಿ ಹೇಗೆ ಕಳೆದು ಹೋಗಿದ್ದಾರೆ ನೋಡಿ. ಬಹುಶಃ, ಮೊದಲ ಕವಿತೆ…

51 mins ago

ಅಣ್ಣಯ್ಯ ಸೇರಿ ಐವರಿಗೆ ಅಂಬೇಡ್ಕರ್‌ ಪ್ರಶಸ್ತಿ

ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್…

1 hour ago

ಮೂಡದ ಒಮ್ಮತ : ಅಮೆರಿಕ-ಇರಾನ್ 21 ಗಂಟೆಗಳ ಮಾತುಕತೆ ವಿಫಲ

ಇಸ್ಲಾಮಾಬಾದ್ : ಪಶ್ಚಿಮ ಏಷ್ಯಾ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ 21…

2 hours ago

ಬಿರುಗಾಳಿ ಸಹಿತ ಭಾರಿ ಮಳೆ : ಧರೆಗುರುಳಿದ ತೆಂಗಿನ ಮರಗಳು.

ಮಂಡ್ಯ : ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದ ಹೊಳಲು ಗ್ರಾಮದ ವೃತ್ತದಲ್ಲಿ…

2 hours ago