ವಯಸ್ಸಾದಂತೆಲ್ಲಾ ನಮ್ಮ ಆಪ್ತ ವಲಯದ ಸಂಪರ್ಕಗಳು ಕಡಿಮೆ ಯಾಗುತ್ತಿರುತ್ತವೆ. ಬಾಲ್ಯದಲ್ಲಿ, ಶಾಲಾ-ಕಾಲೇಜಿನಲ್ಲಿ ಜತೆಯಾದವರ ಗುಂಪು ಈಗ ಚದುರಿ ಹೋಗಿರುತ್ತದೆ. ಅವರ ಸಂಪರ್ಕ ಅಪರೂಪ. ಇದರ ಮೇಲೆ ಕೆಲಸದ ಮೇಲೆ ಹೊರ ಹೋಗಿ ಅಲ್ಲಿಯೇ ನೆಲೆಸಿ ಎಲ್ಲರ ಸಂಪರ್ಕದಿಂದ ದೂರಾಗಿ ಕ್ರಮೇಣ ನೆನಪೇ ಕರಗಿ ಹೋಗಿರುತ್ತದೆ. ಕೊನೆಗೆ ಬಾಳಿನುದ್ದಕ್ಕೂ ನಮ್ಮ ಸ್ನೇಹಿತೆ, ಸಂಗಾತಿಯಾಗಿ ಉಳಿಯುವುದು ನಮ್ಮ ಪತ್ನಿ ಮಾತ್ರ.
ನಮ್ಮ ಮಕ್ಕಳೂ ಅವರದ್ದೇ ಆದ ಕುಟುಂಬದೊಂದಿಗೆ ಬೇರೆಡೆ ನೆಲೆಸಿ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರನ್ನೂ ಕಾಲ ಒಗ್ಗೂಡಿಸುವುದು, ಮಕ್ಕಳು-ಮೊಮ್ಮಕ್ಕಳ ಜೊತೆ, ಸ್ನೇಹಿತರ ಜತೆ ಮಾತನಾಡುತ್ತಾ ಕಳೆಯಲು ಅವರೊಂದಿಗೆ ಸಂಪರ್ಕದಲ್ಲಿರಲು ವರದಾನವಾಗಿ ಬಂದಿರುವುದೇ ಸ್ಮಾರ್ಟ್ ಫೋನ್.
ಇತ್ತೀಚೆಗೆ ಸ್ಟಾರ್ಟ್ ಫೋನ್‌ನಿಂದ ದುರುಪಯೋಗವೇ ಹೆಚ್ಚು. ಇದರ ವ್ಯಾಮೋಹಕ್ಕೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಲಿಯಾಗಿ ಅದರಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನ್ನುವವರೆ ಹೆಚ್ಚು. ಆದರೆ ಈ ಸ್ಟಾರ್ಟ್‌ಫೋನ್ ಕೂಡ ನಮಗೆ ನೆಮ್ಮದಿ ಮತ್ತು ಸಂತೋಷದಿಂದರಲು, ಅದರಲ್ಲಿಯೂ 70-80 ವಯಸ್ಸು ದಾಟಿರುವವರಿಗಂತೂ ಸ್ನೇಹಿತರೊಂದಿಗೆ, ಕುಟುಂಬದ ಮಂದಿಯೊಂದಿಗೆ ಸಂಪರ್ಕದಿಂದಿರಲು ಸಹಾಯ ಮಾಡುತ್ತದೆ.
ತಮ್ಮ ಅಜ್ಜ ಅಜ್ಜಿಯನ್ನು ಆಗಾಗ್ಗೆ ಮಾತನಾಡಿಸುವ ಸಲುವಾಗಿ ಮೊಮ್ಮಕ್ಕಳು ಅವರಿಗೊಂದು ಸ್ಟಾಟ್ ಫೋನ್ ಕೊಡಿಸಿರುತ್ತಾರೆ. ಗೆಳೆಯನಾಗಬಹುದು. ಸ್ಟಾಟ್‌ಫೋನ್ ಅದು ಅವರೆಲ್ಲೇ ಇದ್ದರೂ ತಮ್ಮ ಅಜ್ಜ ಅಜ್ಜಿಯೊಂದಿಗೆ ಮಾತನಾಡುತ್ತಾ ಸಮಯ ಕಳೆಯಲು ಅನುಕೂಲ. ಇತ್ತೀಚೆಗೆ ಬಂದಿರುವ ಸಾಫ್ಟ್‌ವೇರ್‌ಗಳ ಮೂಲಕ ವಿಡಿಯೋ ಕಾಲ್ ಮಾಡಿಕೊಂಡು ಕುಟುಂಬಸ್ಥರು, ಸ್ನೇಹಿತರು ಪರಸರ ಒಬ್ಬರನ್ನೊಬ್ಬರು ನೋಡಿಕೊಂಡು ಮಾತನಾಡಬಹುದು. ಇದು ನಮ್ಮನ್ನು ಮತ್ತಷ್ಟು ಹತ್ತಿರ ಮಾಡುತ್ತದೆ. ಅಲ್ಲದೆ ಫೋಟೋ, ವಿಡಿಯೋಗಳನ್ನೂ ಪರಸ್ಪರ ವಿನಿಯಮ ಮಾಡಿಕೊಂಡು ನಾವು ಬೇರೆಡೆ ಇದ್ದರೂ ಅಂದಿನ ಸಂಭ್ರಮದಲ್ಲಿ ಕುಟುಂಬದೊಂದಿಗೆ ಭಾಗಿಯಾಗುವ ಅವಕಾಶವನ್ನು ಈ ಸ್ಟಾರ್ಟ್ ಫೋನ್‌ಗಳು ನೀಡಿವೆ.
ಇನ್ನು ಮನೆಯಲ್ಲಿ ಹಿರಿಯರಿಬ್ಬರೆ ಅಥವಾ ಒಬ್ಬೊಂಟಿ ಯಾಗಿದ್ದ ಸಂದರ್ಭದಲ್ಲಿ ಏನಾದರೂ ತುರ್ತು ಸಂದರ್ಭ ಬಂದಲ್ಲಿ ಕೂಡಲೇ ಕುಟುಂಬಸ್ಥರನ್ನೋ, ಸ್ನೇಹಿತರನ್ನೋ ಸಂಪರ್ಕಿಸಲು ಸಹಾಯಕವಾಗಿದೆ ಈ ಸ್ಮಾರ್ಟ್ ಫೋನ್.
ಇತ್ತೀಚೆಗೆ ಸ್ಟಾರ್ಟ್‌ಫೋನ್ ಎಷ್ಟರ ಮಟ್ಟಿಗೆ ಅವಲಂಬಿತವಾಗಿದೆ ಎಂದರೆ, ಮನೆಗೆ ಬೇಕಾದ ಗ್ಯಾಸ್ ಸಿಲಿಂಡರ್‌ನಿಂದ ಹಿಡಿದು, ದಿನಸಿ, ಪ್ರತಿಯೊಂದು ವಸ್ತುವನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಮನೆಗೆ ತರಿಸಿಕೊಳ್ಳಬಹುದು. ಮೊಬೈಲ್‌ನಲ್ಲಿ ಬುಕ್ ಮಾಡಿದರೆ ಸಾಕು. ಮುಂಜಾನೆಯೇ ಎದ್ದು ಹಾಲು ತರಲು ಹೋಗುವ ಪ್ರಮೇಯವೇ ಬರುವುದಿಲ್ಲ.
ಹಾಗಂತ ಇದಕ್ಕೇ ಕಟ್ಟುಬೀಳುವುದು ಸರಿಯಲ್ಲ. ಇದು ನಮ್ಮ ದೈಹಿಕ ಶ್ರಮವನ್ನು ಕಸಿಯಬಹುದು. ಎಷ್ಟೋ ಬಾರಿ ನಾವು ಆನ್ ಲೈನ್ ಮೋಸದ ಜಾಲಕ್ಕೆ ಸಿಲುಕಬಹುದು. ಆದ್ದರಿಂದ ಹಿರಿಯರಾದವರು ಹಣಕಾಸು ವ್ಯವಹಾರವನ್ನು ಫೋನ್‌ನಲ್ಲಿ ಇಟ್ಟುಕೊಳ್ಳುವುದು ಅಷ್ಟು ಉಚಿತವಲ್ಲ. ಉಳಿದಂತೆವೈದ್ಯರೊಂದಿಗಿನ ಸಂಪರ್ಕ, ಇತರೆ ಅಗತ್ಯ ವಸ್ತುಗಳ ಖರೀದಿಗೆ ಈ ಸ್ಟಾರ್ಟ್ ಫೋನ್ ಉಪಯೋಗಿಸುವುದು ಸೂಕ್ತ.
ಇನ್ನು ಬಿಡುವಿನ ವೇಳೆ ಸಂಗೀತ ಆಲಿಸಲು, ನಮ್ಮಿಷ್ಟದ ಕಾರ್ಯಕ್ರಮಗಳನ್ನು ವೀಕ್ಷಿಸಲು ಈ ಸ್ಮಾರ್ಟ್ ಫೋನ್ ಹೆಚ್ಚು ಈ ಉಪಯುಕ್ತವಾಗಿದೆ. ಅಲ್ಲದೆ ನೀವು ಶಿಕ್ಷಕರಾಗಿದ್ದರೆ, ಸಂಗೀತಗಾರರಾಗಿದ್ದರೆ ಅಥವಾ ಅಡುಗೆ ಮಾಡಲು ನಿಪುಣರಾಗಿದ್ದಾರೆ, ಕಲೆ, ಚಿತ್ರಕಲೆ, ಯೋಗ ಶಿಕ್ಷಕರಾಗಿದ್ದರೆ ಆನ್ ಲೈನ್ ಮೂಲಕ ತರಗತಿಗಳನ್ನು ಮಾಡಿ ಇಳಿವಯಸ್ಸಿನಲ್ಲಿಯೂ ದುಡಿಯಬಹುದು. ಜತೆಗೆ ಸಮಾಜದೊಂದಿಗೆ ಮನೆಯಲ್ಲಿ ಕುಳಿತಿದ್ದರೂ ಸಂಪರ್ಕ ಸಾಧಿಸಬಹುದು.
ಸ್ಮಾರ್ಟ್ ಫೋನ್ ಇಳಿವಯಸ್ಸಿನಲ್ಲಿ ನಮಗೆ ಅತ್ಯುತ್ತಮ ಆದರೆ ನಮ್ಮ ಆರೋಗ್ಯ ಸಲಹೆಗಾರನಾಗುವುದಿಲ್ಲ. ಆದ್ದರಿಂದ ಮುಂಜಾನೆ ಅಥವಾ ಸಂಜೆ ವೇಳೆ ಒಂದು ವಾಕ್ ಅಥವಾ ಲಘು ವ್ಯಾಯಾಮಗಳನ್ನು ಮಾಡುವುದು ಸೂಕ್ತ. ಉತ್ತಮ ವಾತಾವರಣದಲ್ಲಿ, ತಂಗಾಳಿಯಲ್ಲಿ ಒಂದಿಷ್ಟು ಸಮಯ ಕಳೆಯುವುದು ಜನರೊಂದಿಗೆ ಬೆರೆಯುವುದೂ ಅತ್ಯಗತ್ಯ. ಆಗ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ಇಳಿವಯಸ್ಸಿನಲ್ಲಿಯೂ ಆರೋಗ್ಯವಂತ ಜೀವನ ಸಾಗಿಸಲು ಸಾಧ್ಯವಾಗುತ್ತದೆ.
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…