ಅಭಿಪ್ರಾಯ ಹಂಚಿಕೆ ಹತ್ತಿಕ್ಕುವುದು ಭೌತಿಕವಾಗಿ ನಾಲಿಗೆ ಕತ್ತರಿಸಿದಂತಲ್ಲವೇ?

-ನಾ.ದಿವಾಕರ

ಭಾರತ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಭಾರತದ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯ ಸಾಂವಿಧಾನಿಕವಾಗಿ ಲಭ್ಯವಾಗಿದೆ. ಈ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದು ಭಾವಿಸಿ ದೇಶದ ಅಖಂಡತೆಗೆ ಧಕ್ಕೆ ಉಂಟು ಮಾಡುವಂತಹ ಮಾತುಗಳು, ಸಂಜ್ಞೆಗಳು ಮತ್ತು ಇತರ ಅಭಿವ್ಯಕ್ತಿಗಳನ್ನು ಸಂವಿಧಾನವೇ ನಿಯಂತ್ರಿಸುತ್ತದೆ. ಒಂದು ಸ್ವಸ್ಥ ಸಮಾಜದಲ್ಲಿ ಇದು ಸಹಜವೇ. ಆದರೆ ಭಾರತದ ಪ್ರಭುತ್ವ ಸಂವಿಧಾನದ ಚೌಕಟ್ಟಿನಲ್ಲೇ ಸಂವಿಧಾನೇತರ ಕ್ರಮಗಳನ್ನು ಅನುಸರಿಸುವ ಮೂಲಕ ಈ ಮೂಲಭೂತ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದನ್ನು ಕಳೆದ ಏಳು ವರ್ಷಗಳಲ್ಲಿ ಗಮನಿಸುತ್ತಲೇ ಬಂದಿ ದ್ದೇವೆ. ಇದರ ಒಂದು ವಿಧಾನ ಅಂತರ್ಜಾಲ-ಮೊಬೈಲ್ ಸಂಪರ್ಕದ ಕಡಿತ.

ಡಿಜಿಟಲ್ ಯುಗದ ಸರದಾರನಂತೆ ಪೋಷಾಕು ಧರಿಸಿರುವ ಭಾರತ ಇಂದು ಡಿಜಿಟಲೀಕರಣದ ಉತ್ತುಂಗದಲ್ಲಿದೆ. ಪ್ರಾಥಮಿಕ ಶಾಲೆಯಿಂದ ಅತ್ಯುನ್ನತ ಅಧ್ಯಯನದವರೆಗೂ ಶಿಕ್ಷಣವೂ ಕೂಡ ಡಿಜಿಟಲ್ ಯುಗಕ್ಕೆ ಹೊಂದಿಕೊಂಡು ಹೋಗುವುದು ಕೋವಿಡ್ ಸಂದರ್ಭದಲ್ಲಿ ಅನಿವಾರ್ಯ ಅನಿಸಿಬಿಟ್ಟಿದೆ. ಈ ಯುಗದಲ್ಲಿ ದೇಶದ ಜನತೆಯ ನಡುವೆ ಸಂವಹನದ ಮಾರ್ಗಗಳನ್ನು ಕಡಿತಗೊಳಿಸುವುದು, ಸಂವಹನದ ಸಾಧನಗಳನ್ನು ಸ್ಥಗಿತಗೊಳಿಸುವುದು, ನಿರಂಕುಶಪ್ರಭುತ್ವದ ನಾಲಿಗೆ ಕತ್ತರಿಸುವ ಶಿಕ್ಷೆಯಂತೆಯೇ ತೋರುವುದಿಲ್ಲವೇ ?

ಆತ್ಮನಿರ್ಭರ ಭಾರತದ ಪ್ರಭುತ್ವ ಇದನ್ನು ವ್ಯವಸ್ಥಿತವಾಗಿ ಮಾಡುತ್ತಲೇ ಬಂದಿದೆ. ಸಂವಿಧಾನ ವಿ 370ರ ರದ್ಧತಿಯ ನಂತರದಲ್ಲಿ ಅಂತರ್ಜಾಲ ಮತ್ತಿತರ ಸಂವಹನ ಮಾಧ್ಯಮಗಳನ್ನು ಸ್ಥಗಿತಗೊಳಿಸುವ ಅಥವಾ ಕಡಿತ ಗೊಳಿಸುವ ಒಂದು ವಿಕೃತ ಆಡಳಿತ ವ್ಯವಸ್ಥೆ ಈ ದೇಶದಲ್ಲಿ ಬಹುತೇಕ ಸಾರ್ವಜನಿಕವಾಗಿಯೂ ಮಾನ್ಯತೆ ಪಡೆದುಬಿಟ್ಟಿದೆ. ಕಾಶ್ಮೀರದ ಅಮಾಯಕ ಜನತೆ ಎದುರಿಸಿದ ಶಿಕ್ಷೆಯನ್ನು ಇಂದು ದೇಶದ ಯಾವುದೇ ರಾಜ್ಯದ ಜನರು ಯಾವುದೇ ಸಮಯದಲ್ಲಿ ಎದುರಿಸಬೇಕಾಗಬಹುದು ಎನ್ನುವುದನ್ನು ಹರಿಯಾಣ ಸರ್ಕಾರ ಇತ್ತೀಚಿನ ರೈತ ಮುಷ್ಕರದ ಸಂದರ್ಭದಲ್ಲಿ ನಿರೂಪಿಸಿದೆ.

ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂಪರ್ಕ ಮತ್ತು ಅಂತರ್ಜಾಲವನ್ನು ಸ್ಥಗಿತಗೊಳಿಸುವುದು ಆಳುವ ವರ್ಗಗಳ ಬೌದ್ಧಿಕ ಕ್ರೌರ್ಯದ ಒಂದು ಹೊಸ ಆಯಾಮವಾಗಿ ಭಾರತದಲ್ಲಿ ರೂಪುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ 2020ರ ಒಂದು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ (ಅನುರಾಧ ಭಾಸಿನ್ ಮತ್ತು ಒಕ್ಕೂಟ ಸರ್ಕಾರದ ಮೊಕದ್ದಮೆ) “ಮಾಹಿತಿಯ ಸುಲಭ ಗಮ್ಯತೆ ಭಾರತದ

ಸಂವಿಧಾನದ ಪ್ರಕಾರ ಮೂಲಭೂತ ಹಕ್ಕು, ಅಂತರ್ಜಾಲ ಅಥವಾ ಇತರ ಯಾವುದೇ ಸಂಪರ್ಕ ಮಾಧ್ಯಮದ ಮೇಲೆ ನಿರ್ಬಂಧ ಹೇರುವ ಸರ್ಕಾರದ ಹಕ್ಕು  ತಾತ್ಕಾಲಿಕವಾಗಿದ್ದು, ಇದು ಕಾನೂನುಬದ್ಧವಾಗಿರಬೇಕು” ಎಂದು ಹೇಳಿದೆ.

ಆದರೆ ಇಂದಿನ ಒಕ್ಕೂಟ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಆದೇಶಗಳು ಸಂವಿಧಾನದಷ್ಟೇ ನಗಣ್ಯವಾಗಿ ಕಾಣುತ್ತವೆ. ಕೆಲವೇ ದಿನಗಳ ಹಿಂದೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಾಶ್ಮೀರದಲ್ಲಿ ಅಂತರ್ಜಾಲ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದ್ದು, ಮೊಬೈಲ್ ಸಂಪರ್ಕವನ್ನು ನಿರ್ಬಂಸಲಾಗಿದೆ. ಇದೇ ಸಂದರ್ಭದಲ್ಲಿ ಹರಿಯಾಣದಲ್ಲಿ ರೈತರು ಹಮ್ಮಿಕೊಂಡಿದ್ದ ಮುಷ್ಕರದ ಸಂದರ್ಭದಲ್ಲೂ ಅಂತರ್ಜಾಲ-ಮೊಬೈಲ್ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಸರ್ವೋಚ್ಚ ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ ಎನ್ನುವುದು ನಿಸ್ಸಂದೇಹ. ಸರ್ಕಾರದ ಆಡಳಿತ ನೀತಿಗಳನ್ನು ವಿರೋಸಿ ಸಾರ್ವಭೌಮ ಜನತೆ ನಡೆಸುವ ಪ್ರತಿರೋಧಗಳನ್ನು ಹತ್ತಿಕ್ಕುವ ಮತ್ತೊಂದು ವಿಧಾನವನ್ನು ಭಾರತ ಸರ್ಕಾರ ಡಿಜಿಟಲ್ ಮಾಧ್ಯಮದ ಮೂಲಕ ಕಂಡುಕೊಂಡಿದೆ.

ಡಿಜಿಟಲ್ ಯುಗದಲ್ಲಿ ಅಂತರ್ಜಾಲ ಮತ್ತು ಮೊಬೈಲ್ ಸಮಾಜದ ಪ್ರಧಾನ ಸಂವಹನ ಮಾಧ್ಯಮಗಳಾಗಿವೆ. ಈ ಸಂವಹನ ಸಾಧನಗಳ ಮೂಲಕವೇ ಸಮಾಜ ತನ್ನ ಆಂತರಿಕ ತುಮುಲಗಳನ್ನು, ತುಡಿತಗಳನ್ನು ಹಂಚಿಕೊಳ್ಳುವ ಮೂಲಕ ಜನಸಾಮಾನ್ಯರ ನಡುವಿನ ಸಂಪರ್ಕ ಕೊಂಡಿಯನ್ನು ರೂಪಿಸುತ್ತವೆ. ತಮ್ಮ ಹಕ್ಕೊತ್ತಾಯಗಳಿಗಾಗಿ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಆಳುವ ವರ್ಗಗಳ ಜನವಿರೋ ನೀತಿಗಳ ವಿರುದ್ಧ ಜನಸಮುದಾಯಗಳು ಹೋರಾಡುವ ಸಂದರ್ಭದಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕಾದ ಹಲವಾರು ಸಂಗತಿಗಳು ಇದ್ದೇ ಇರುತ್ತವೆ. ಈ ಅಭಿಪ್ರಾಯ ಹಂಚಿಕೆ ಮತ್ತು ವಿನಿಮಯದ ಪ್ರಯತ್ನಗಳನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳು, ಭೌತಿಕವಾಗಿ ನಾಲಿಗೆ ಕತ್ತರಿಸಿದಂತೆಯೇ ಆಗುವುದಲ್ಲವೇ ?

2020ರಲ್ಲಿ 129 ವಿಭಿನ್ನ ಸಂದರ್ಭಗಳಲ್ಲಿ ಸರ್ಕಾರಗಳು ಕೈಗೊಂಡ ಅಂತರ್ಜಾಲ ಸ್ಥಗಿತಗೊಳಿಸುವ ಕ್ರಮದಿಂದ 2.8 ಶತಕೋಟಿ ಡಾಲರ್ ಆರ್ಥಿಕ ನಷ್ಟವಾಗಿದೆಯಷ್ಟೇ ಅಲ್ಲದೆ, ಒಂದು ಕೋಟಿಗೂ ಹೆಚ್ಚು ಜನತೆ ಇದರಿಂದ ಸಂಕಷ್ಟ ಅನುಭವಿಸುವಂತಾಗಿದೆ. ಆಧುನಿಕ ಡಿಜಿಟಲ್ ಯುಗದಲ್ಲಿ ಮಾಹಿತಿ, ಶಿಕ್ಷಣ, ವಿದ್ಯಾಭ್ಯಾಸ, ಮನರಂಜನೆ, ಆರೋಗ್ಯ ಕಾಳಜಿ, ಜೀವನೋಪಾಯ ಹೀಗೆ ಜನರ ನಿತ್ಯ ಬದುಕಿನ ಪ್ರತಿಯೊಂದು ಹಂತದಲ್ಲೂ ಅಂತರ್ಜಾಲ ಮತ್ತು ಮೊಬೈಲ್ ಪ್ರಧಾನ ಪಾತ್ರ ವಹಿಸುತ್ತದೆ. ಈ ಸಾಧನಗಳನ್ನು ನಿರ್ಬಂಸುವುದರಿಂದ ಜನಸಾಮಾನ್ಯರ ನಿತ್ಯ ಬದುಕು ಅಸ್ತವ್ಯಸ್ತವಾಗುವ ಸಾಧ್ಯತೆಗಳೇ ಹೆಚ್ಚು.

ಆತ್ಮನಿರ್ಭರ ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನೂತನ ವಿಧಾನಗಳ ಆವಿಷ್ಕಾರ ನಿರಂತರವಾಗಿ ನಡೆಯುತ್ತಲೇ ಇದೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯ ವಿರುದ್ಧ ಚುನಾವಣೆಯಲ್ಲಿ ರ್ಸ್ಪಸುವು ದಾಗಿ ಹೇಳಿದ ಮಾಜಿ ಐಪಿಎಸ್ ಅಕಾರಿ ಹಠಾತ್ತನೆ ಅಪರಾಯಾಗಿ ಬಂಧನಕ್ಕೊಳಗಾಗುತ್ತಾರೆ. ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ಸೂಚಿಸುವ ಬಾಲಿವುಡ್ ನಟ ಸೋನು ಸೂದ್ ಆದಾಯ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗು ತ್ತಾರೆ. ಸರ್ಕಾರದ ನೀತಿಗಳನ್ನು ಟೀಕಿಸುವ ವಿದ್ಯುನ್ಮಾನ, ಮುದ್ರಣ ಮಾಧ್ಯಮಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯ ಸಂಗತಿಯೇ ಆಗಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ, ರಾಷ್ಟ್ರೀಯ ತನಿಖಾ ದಳ-ಎನ್‌ಐಎ ಈ ಎಲ್ಲ ಸಾಂವಿಧಾನಿಕ ಸಂಸ್ಥೆಗಳೂ ಇಂದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಂಸ್ಥಿಕ ಸಾಧನಗಳಾಗಿದ್ದರೆ, ರಾಜದ್ರೋಹ ಕಾಯ್ದೆ ಮತ್ತು ಯುಎಪಿಎ ಸಾಂವಿಧಾನಿಕ ಸಾಧನಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಊಳಿಗಮಾನ್ಯ ವ್ಯವಸ್ಥೆಯಲ್ಲಿ, ನಿರಂಕುಶ ರಾಜಪ್ರಭುತ್ವದಲ್ಲಿ ಜನಸಾಮಾನ್ಯರ ವಿರೋ ದನಿಯನ್ನು ಹತ್ತಿಕ್ಕಲು ನಾಲಿಗೆ ಕತ್ತರಿಸುವುದು, ಅಂದರೆ ಮಾತನಾಡಲಾಗದಂತೆ ಮಾಡುವುದು ಸಾಮಾನ್ಯ ಶಿಕ್ಷೆಯಾಗಿತ್ತು. ಇಂದೂ ಕೂಡ ಆಳುವ ವರ್ಗಗಳು ಇದೇ ಮಾದರಿಯನ್ನೇ ಅನುಸರಿಸುತ್ತಿರುವುದು ದುರಂತ ಅಲ್ಲವೇ? ನಾಲಿಗೆ ಕತ್ತರಿಸುವ ಆಧುನಿಕ ವಿಧಾನವನ್ನು ಡಿಜಿಟಲ್ ತಂತ್ರಜ್ಞಾನ ಯುಗದ ಅಂತರ್ಜಾಲ-ಮೊಬೈಲ್ ಸಂಪರ್ಕ ಸ್ಥಗಿತಗೊಳಿಸುವ ಪ್ರಕ್ರಿಯೆಯಲ್ಲಿ ಕಾಣುತ್ತಿದ್ದೇವೆ. ಉದ್ದೇಶಿತ ಗುರಿ ಒಂದೇ ತಂತ್ರಗಾರಿಕೆಯೂ ಒಂದೇ ಮಾರ್ಗಗಳು ಮಾತ್ರ ಭಿನ್ನ. ಕಾಲಾಯ ತಸ್ಮೈ ನಮಃ ಎನ್ನಬಹುದೆ?

× Chat with us