ಮನರಂಜನೆ

ಯುವಕರ ಮನಸ್ಸು ಮತ್ತು ಕಡಲ ಕುರಿತು ಯೋಗರಾಜ್‍ ಭಟ್‍ ಹೊಸ ಚಿತ್ರ

ಇಂದಿನ ತಲೆಮಾರಿನ ಯುವಕ, ಯುವತಿಯರ ಯೋಚನೆ ಮತ್ತು ಮನಸ್ಥಿತಿಯನ್ನು ಹಿಡಿದಿಡುವ ಪ್ರಯತ್ನವನ್ನು ಯೋಗರಾಜ್‍ ಭಟ್‍ ಆಗಾಗ ಮಾಡುತ್ತಲೇ ಇರುತ್ತಾರೆ. ‘ಪಂಚರಂಗಿ’ ನಂತರ ಅವರು ಈ ತರಹದ ಸಿನಿಮಾ ಮಾಡಿರಲಿಲ್ಲ. ಈಗ ಸಣ್ಣ ಗ್ಯಾಪ್‍ನ ನಂತರ ಅವರು ಇಂದಿನ ತಲೆಮಾರಿನವರ ಚಿತ್ರವನ್ನು ಮಾಡುವುದಕ್ಕೆ ಮುಂದಾಗಿದ್ದಾರೆ. ವಿಶೇಷವೆಂದರೆ, ಈ ಬಾರಿ ಅವರ ಜೊತೆಗೆ ಇ. ಕೃಷ್ಣಪ್ಪ ಕೈಜೋಡಿಸಿದ್ದಾರೆ.

18 ವರ್ಷಗಳ ಹಿಂದೆ ಬಿಡುಗಡೆಯಾದ ‘ಮುಂಗಾರು ಮಳೆ’ ಚಿತ್ರವನ್ನು ಇದೇ ಕೃಷ್ಣಪ್ಪ ನಿರ್ಮಿಸಿದ್ದರು. ಅದೇ ಯೋಗರಾಜ್‍ ಭಟ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಈಗ ಪುನಃ ಅವರಿಬ್ಬರೂ ಜೊತೆಯಾಗಿದ್ದಾರೆ. ಸದ್ದಿಲ್ಲದೆ ‘ಮನದ ಕಡಲು’ ಎಂಬ ಚಿತ್ರವನ್ನು ಪ್ರಾರಂಭಿಸಿರುವ ಅವರು, ಈಗಾಗಲೇ ಶೇ. 95ರಷ್ಟು ಚಿತ್ರೀಕರಣವೂ ಆಗಿದೆ. ಇದೀಗ ಭಟ್ ಮತ್ತು ಚಿತ್ರತಂಡ ಮೊದಲ ಬಾರಿಗೆ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

‘ಮುಂಗಾರು ಮಳೆ’ ಮತ್ತು ‘ಮೊಗ್ಗಿನ ಮನಸ್ಸು’ ಚಿತ್ರಗಳ ನಂತರ ಈ ಬಾರಿ ಸಹ ಹೊಸ ಕುದುರೆಗಳ ಜೊತೆಗೆ ಸಿನಿಮಾ ಮಾಡೋಣ ಎಂದು ಹೇಳಿದರಂತೆ ಇ. ‘ಕೃಷ್ಣಪ್ಪ ಮೊದಲೇ ಹೊಸ ಕುದುರೆ ಜೊತೆಗೇ ಸಿನಿಮಾ ಮಾಡೋಣ ಎಂದರು. ಹೊಸಬರ ಜೊತೆಗೆ ಸಿನಿಮಾ ಮಾಡೋದು ಸುಲಭವಲ್ಲ. ಆದರೆ, ಹೊಸಬರ ಜೊತೆಗೆ ಕೆಲಸ ಮಾಡುವುದರಿಂದ ತುಂಬಾ ಕಲಿಯುತ್ತೇವೆ. ಅವರ ಎನರ್ಜಿ ಲೆವೆಲ್‍ ಅದ್ಭುತವಾಗಿರುತ್ತದೆ. ಇವತ್ತಿನ ಯುವಕರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರೆ ಅವರ ಸಹವಾಸ ಮಾಡಬೇಕು’ ಎನ್ನುತ್ತಾರೆ ಯೋಗರಾಜ್‍ ಭಟ್‍.

‘ಮನದ ಕಡಲು’ ಎಂಬ ಹೆಸರೇ ಹೇಳುವಂತೆ ಚಿತ್ರದಲ್ಲಿ ಕಡಲು ಒಂದು ಪ್ರಮುಖ ಪಾತ್ರ ವಹಿಸುತ್ತದಂತೆ. ‘ನನಗೆ ಸಮುದ್ರ ಹೊಸದು. ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಕಡಲನ್ನು ಇಷ್ಟೊಂದು ಬಳಸಿಕೊಂಡಿದ್ದೇನೆ. ಕಡಲು ನೋಡಿದರೆ ಕೀಳರಿಮೆ ಬರುತ್ತದೆ. ಪ್ರಕೃತಿ ಮುಂದೆ ನಾವೆಷ್ಟು ಚಿಕ್ಕವರು ಎಂದನಿಸುತ್ತದೆ. ಚಿತ್ರದ ಪಾತ್ರಗಳು ಕಡಲು ನೋಡಿ ಹೇಗೆ ತಮ್ಮ ಬದುಕನ್ನು ಹೇಗೆ ಸರಿ ಮಾಡಿಕೊಳ್ಳುತ್ತಾರೆ ಎನ್ನುವುದು ಚಿತ್ರದ ಕಥೆ’ ಎಂದರು.

‘ಮನದ ಕಡಲು’ ಚಿತ್ರಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಮಹಾರಾಷ್ಟ್ರದ ಮುರುಡ್‍ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್‍ ಮತ್ತು ರಾಶಿಕಾ ಶೆಟ್ಟಿ ನಾಯಕ-ನಾಯಕಿಯರಾಗಿ ನಟಿಸಿದರೆ, ದತ್ತಣ್ಣ, ರಂಗಾಯಣ ರಘು ಮುಂತಾದ ಹಿರಿಯರಿದ್ದಾರೆ.

ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಸಂತೋಷ್‍ ರೈ ಪಾತಾಜೆ ಛಾಯಾಗ್ರಹಣ, ಜಯಂತ್‍ ಕಾಯ್ಕಿಣಿ ಸಾಹಿತ್ಯವಿದೆ. ಇ.ಕೆ. ಎಂಟರ್‍ಟೈರ್ಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಭೂಮಿಕಾ

Recent Posts

ಕೊಡಗು ; ವ್ಯಕ್ತಿ ಬಲಿ ಪಡೆದಿದ್ದ ರೌಡಿ ಆನೆ ಕೊನೆಗೂ ಸೆರೆ

ಕೊಡಗು : ಕಳೆದ ಕೆಲ ದಿನಗಳಿಂದ ಉಪಟಳ ನೀಡುವ ಜತೆಗೆ ವ್ಯಕ್ತಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಕಾಡಾನೆಯನ್ನು…

7 hours ago

ಸೋಮವಾರದಿಂದಲೇ ತಂಬಾಕು ಖರೀದಿ : ಗೋಯಲ್‌ ಭರವಸೆ

ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ…

7 hours ago

ಸೃಜನಶೀಲತೆಗೆ  ʻಎಐʼ ಕುತ್ತು : ಲೇಖಕ ನಾಗಭೂಷಣ ಸ್ವಾಮಿ

ಬೆಂಗಳೂರು : ಸಾಹಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ, ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ ಮಾರಕವಾಗಲಿದೆ…

8 hours ago

ಊಹಾ ಪತ್ರಿಕೋದ್ಯಮ ಬಿಟ್ಟು, ಸತ್ಯವನ್ನೇ ಬರೆಯಿರಿ : ಪತ್ರಕರ್ತರಿಗೆ ಮುಖ್ಯಮಂತ್ರಿ ಸಲಹೆ

ಬೆಂಗಳೂರು : ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…

8 hours ago

ಕೈ ಸಾಲವಾಗಿ 25 ಕೋಟಿ ನೀಡುವ ಆಮಿಷ : ಹುಬ್ಬಳ್ಳಿಯ ವ್ಯಕ್ತಿಗೆ ಮೈಸೂರಿನ ಐವರಿಂದ ಲಕ್ಷಾಂತರ ರೂ. ವಂಚನೆ

ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ…

8 hours ago

ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯ : ನಾಗಲಕ್ಷ್ಮೀ ಚೌಧರಿ

ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…

9 hours ago