ಕೆಜಿಎಫ್ ದಿನ ಏಪ್ರಿಲ್ 14

ಮೊನ್ನೆ ನಟ ಯಶ್ ಹುಟ್ಟುಹಬ್ಬದ ದಿನ ಅವರಿಗೆ ಹೊಂಬಾಳೆ ಸಂಸ್ಥೆ ಶುಭ ಹಾರೈಸುವ ವೇಳೆ ಕೆಜಿಎಫ್ ಚಾಪ್ಟರ್ 2ರ ಬಿಡುಗಡೆ ದಿನವನ್ನು ಮತ್ತೆ ಪ್ರಕಟಿಸಿದೆ.

ವಿಶ್ವಾದ್ಯಂತ ಏಪ್ರಿಲ್ 14ರಂದು ತೆರೆಗೆ ಬರಲಿದೆ ಎಂದು ಸಂಸ್ಥೆ ಹೇಳಿದೆ. ಯಶ್ ಅವರ ಮುಂದಿರುವ ‘Caution Danger Ahead’ ಎನ್ನುವ ಸಾಲು ಅವರ ಪಾತ್ರಕ್ಕೆ ಅನ್ವಯಿಸಿದ್ದೋ ಅಥವಾ ಕೊರೊನಾ ಕುರಿತೋ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ. ಕೆಜಿಎಫ್ ಮೊದಲ ಆವೃತ್ತಿಯ ಗೆಲುವು, ಅದರ ಪ್ರಚಾರ, ಎರಡನೇ ಅಧ್ಯಾಯದ ಮೇಲೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದೆ.

 

ಗರುಡಾಕ್ಷನಿಗೆ ಬಿಡುಗಡೆಯ ಭಾಗ್ಯ ವಿಳಂಬ

‘ಗರುಡಾಕ್ಷ’ ಚಿತ್ರ ಈ ವಾರ ತೆರೆಗೆ ಬರಬೇಕಾಗಿತ್ತು. ಹಾಗೆ ಸಿದ್ಧತೆಯೂ ಆಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೊಸ ಚಿತ್ರಗಳ ಬಿಡುಗಡೆ ತಡವಾಗಲಿದೆ.

 

 

ಮೊನ್ನೆ ಚಿತ್ರದ ಟೀಸರ್ ಬಿಡುಗಡೆಯ ವೇಳೆ ಈ ಕುರಿತಂತೆ ಚಿತ್ರತಂಡ ಹೇಳಿತ್ತು. ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಶ್ರೀಧರ್ ವೈಷ್ಣವ್ ಈ ಚಿತ್ರದ ನಿರ್ದೇಶಕರು. ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕರಾದ ನರಸಿಂಹಮೂರ್ತಿ ನಿರ್ಮಾಪಕರು. ಚೇತನ್ ಯದು ರಕ್ಷಾ ಮುಖ್ಯಪಾತ್ರದ ಚಿತ್ರವಿದು. ತನ್ನ ತಂದೆಗೆ ಅನ್ಯಾಯ ಮಾಡಿದ್ದಲ್ಲದೆ, ಅವರನ್ನು ಕೊಲೆಗೈದು ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದವರ ಮೇಲೆ ಸೇಡು ತೀರಿಸಿಕೊಳ್ಳುವ ನಾಯಕನ ಕಥೆಯೇ ‘ಗರುಡಾಕ್ಷ’.

ನಿರ್ಮಾಪಕರ ಕಲ್ಪನೆಯ ಕಥೆ ಇದು. ಕೊರೊನಾಗೂ ಮೊದಲೇ ಬಿಡುಗಡೆಯಾಗಬೇಕಾಗಿದ್ದ ಈ ಚಿತ್ರ ಈಗ ಸಂಕ್ರಾಂತಿಗೂ ತೆರೆಗೆ ಬರಲಾಗುತ್ತಿಲ್ಲ ಚೇತನ್ ಯದು, ರಕ್ಷಾ ಜೊತೆ ಸತ್ಯರಾಜ್ ಪಲ್ಲವಿ, ಉಗ್ರಂ ರೆಡ್ಡಿ, ರಫೀಕ್ ಈ ಚಿತ್ರದ ತಾರಾಗಣದಲ್ಲಿದ್ದಾರೆ. ವಿಶ್ವ ಸಂಕಲನ, ರಾಜುಬಾಯ್, ಅರಸುಅಂತಾರೆ ಗೀತರಚನೆ, ಶ್ರೀವತ್ಸ ಸಂಗೀತ ಸಂಯೋಜನೆ, ವೀರೇಶ್ ಛಾಯಾಗ್ರಹಣವಿದೆ.

× Chat with us