ಮನರಂಜನೆ

ನಿರ್ದೇಶನ, ನಿರ್ಮಾಣದ ನಂತರ ನಟನೆಯತ್ತ ಸತ್ಯ

‘ರಾಮ ರಾಮಾ ರೇ’ ಚಿತ್ರದ ಮೂಲಕ ನಿರ್ದೇಶಕರಾದ ಸತ್ಯಪ್ರಕಾಶ್‍, ನಂತರ ನಿರ್ಮಾಪಕರಾದರು, ವಿತರಕರೂ ಆದರು. ಇದೀಗ ‘X&Y’ ಚಿತ್ರದ ಮೂಲಕ ಅವರು ಸದ್ದಿಲ್ಲದೆ ಹೀರೋ ಸಹ ಆಗಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವುದರ ಜೊತೆಗೆ ತಮ್ಮ ಸತ್ಯ ಪಿಕ್ಚರ್ಸ್‍ ಸಂಸ್ಥೆಯಡಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ರಾಜ್ಯಾದ್ಯಂತ ತಾವೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ‘Go Win The Swamy’ ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಚಿತ್ರದ ಬಗ್ಗೆ ಸತ್ಯಪ್ರಕಾಶ್ ಇದೇ ಮೊದಲ ಬಾರಿಗೆ ಹಲವು ವಿಷಯಗಳನ್ನು ಹಂಚಿಕೊಂಡರು.

‘X&Y’ ಚಿತ್ರದ ಕುರಿತು ಮಾತನಾಡುವ ಸತ್ಯಪ್ರಕಾಶ್‍, ‘ನಮ್ಮ ಬಳಿ ಒಂದೊಳ್ಳೆಯ ಕಥೆ ಇತ್ತು. ಆದರೆ, ಅದನ್ನು ತೆರೆಯ ಮೇಲೆ ತರುವುದು ಸುಲಭವಾಗಿರಲಿಲ್ಲ. ವಿಷಯವನ್ನು ಮನರಂಜನಾತ್ಮಕವಾಗಿ ಹೇಳುವುದರ ಜೊತೆಗೆ ಸರಳವಾಗಿ ಮತ್ತು ಎಲ್ಲಾ ವರ್ಗದ ಜನರಿಗೆ ಹೇಳಬೇಕಿತ್ತು. ಇದು ಸೈನ್ಸ್ ಫಿಕ್ಷನ್‍ ಕಥೆಯಲ್ಲ. ಇದೊಂದು ಭವನಾತ್ಮಕ ಕಥೆ. ಅದನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ನಾನು ಈ ಚಿತ್ರದ ಹೀರೋ ಅಲ್ಲ. ಒಬ್ಬ ನಟ ಅಷ್ಟೇ. ಬಹಳಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ. ಹೂವಿನ ಜೊತೆಗೆ ನಾರು ಸ್ವರ್ಗ ಸೇರುವಂತೆ ನಾನ ನಟಿಸಿದ್ದೇನೆ. ನನ್ನಿಂದ ಒಳ್ಳೆಯ ನಟನೆ ಬಂದಿದ್ದರೆ, ಅದಕ್ಕೆ ಅವರೆಲ್ಲರೂ ಕಾರಣ’ ಎಂದರು.

ಒಂದೊಳ್ಳೆಯ ತಂಡವಿದ್ದರೆ ನಿರ್ಮಾಪಕರೂ ಆಗಬಹುದು, ನಿರ್ದೇಶಕರೂ ಆಗಬಹುದು ಎನ್ನುವ ಸತ್ಯಪ್ರಕಾಶ್‍, ‘ಇಲ್ಲಿ ತಂಡ ಮುಖ್ಯ. ತಂಡ ಚೆನ್ನಾಗಿ ಇದ್ದರೆ ನಾವು ಏನು ಬೇಕಾದರೂ ಮಾಡಬಹುದು. ಈ ಚಿತ್ರವನ್ನು ನನ್ನದೇ ಸತ್ಯ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿದೆಯಾದರೂ, ನನ್ನ ಬಳಿ ದುಡ್ಡಿಲ್ಲ. ನಿರ್ಮಾಪಕರಾಗಿ ಬಹಳಷ್ಟು ಜನ ಇದ್ದಾರೆ. ಇದೊಂದು ಹೊಸ ತರಹದ ಚಿತ್ರ. ಜನ ಬಂದು ಚಿತ್ರ ನೋಡುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ಬೃಂದಾ ಆಚಾರ್ಯ ಇಲ್ಲಿ ಕೃಪಾ ಎಂಬ ಯುವತಿಯ ಪಾತ್ರ ಮಾಡಿದ್ದಾರೆ. ‘ಕಥೆ ಕೇಳಿದಾಗ ಬಹಳ ಸವಾಲಿನದ್ದು ಎಂದನಿಸಿತು. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.

‘X&Y’ ಚಿತ್ರದಲ್ಲಿ ಸತ್ಯಪ್ರಕಾಶ್‍ ಮತ್ತು ಬೃಂದಾ ಆಚಾರ್ಯ ಜೊತೆಗೆ ಧರ್ಮಣ್ಣ, ಸುಂದರ್ ವೀಣಾ, ಅಥರ್ವ ಪ್ರಕಾಶ್, ಹರಿಣಿ, ಆಯನಾ, ವೀಣಾ ಸುಂದರ್‍, ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಹರ್ಷ ಕೌಶಿಕ್ ಸಂಗೀತ ಮತ್ತು ಬಿ.ಎಸ್. ಕೆಂಪರಾಜ್ ಸಂಕಲನವಿದೆ.

ಆಂದೋಲನ ಡೆಸ್ಕ್

Recent Posts

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್!

ಬೆಂಗಳೂರು: ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಗೆ ತಡೆ…

18 hours ago

ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು!

ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕೋಹಳ ಬಳಿಯ ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್…

19 hours ago

174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ!

ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…

20 hours ago

ರಾಜ್ಯ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಸಂಚು?: ಶಾಸಕ ಗಣಿಗ ರವಿ ಗಂಭೀರ ಆರೋಪ!

ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ…

20 hours ago

ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಗುರುವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಬಳಿಕ ಸಮೀಪದ…

20 hours ago

ಓದುಗರ ಪತ್ರ: ಬಂತು ಎಟಿಎಂನಲ್ಲಿ ‘ತೇಪೆ’ ಹಾಕಿದ ನೋಟು!

ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…

21 hours ago