ಮನರಂಜನೆ

ಈ ಬಾರಿ ‘ಬಿಗ್‍ ಬಾಸ್‍’ನಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ?

‘ಬಿಗ್‍ ಬಾಸ್‍’ ಕಾರ್ಯಕ್ರಮದ 11ನೇ ಅವತರಣಿಕೆಯು ಇದೇ ಸೆಪ್ಟೆಂಬರ್‍ 29ರಂದು ಸಂಜೆ ಆರಕ್ಕೆ ಪ್ರಾರಂಭವಾಗಲಿದೆ. ಈ ಬಾರಿಯ ವಿಶೇಷತೆಯೆಂದರೆ, ಒಂದು ದಿನ ಮುಂಚೆಯೇ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಐವರು ಸ್ಪರ್ಧಿಗಳ ಹೆಸರುಗಳು ಹೊರಬೀಳಲಿವೆ.

ಸರಿ, ಈ ಬಾರಿ ‘ಬಿಗ್‍ ಬಾಸ್‍’ನಲ್ಲಿ ಯಾರೆಲ್ಲಾ ಭಾಗವಹಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಸಾಮಾನ್ಯವಾಗಿ ಕಾರ್ಯಕ್ರಮಕ್ಕೂ ಮೊದಲು ಚಾನಲ್‍ನವರು ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬ ವಿಷಯವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಈ ಬಾರಿಯೂ ಅದು ಮುಂದುವರೆದಿದೆ. ಈ ಮಧ್ಯೆ, ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎಂಬ ಚರ್ಚೆ ಶುರುವಾಗಿದ್ದು, ಒಂದಿಷ್ಟು ಹೆಸರುಗಳು ಕೇಳಿ ಬಂದಿವೆ.

ಪ್ರಮುಖವಾಗಿ, ನಟಿ ಪ್ರೇಮಾ, ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ, ‘ಗೀತಾ’ ಧಾರಾವಾಹಿ ಖ್ಯಾತಿಯ ಭವ್ಯ ಗೌಡ, ಗಾಯಕಿ ಐಶ್ವರ್ಯಾ ರಂಗರಾಜನ್‍, ಸುದ್ದಿ ನಿರೂಪಕ ಹರೀಶ್‍ ನಾಗರಾಜ್‍, ‘ಗಿಚ್ಚಿ ಗಿಲಿಗಿಲಿ – ಸೀಸನ್‍ 3’ರ ವಿಜೇತ ಹುಲಿ ಕಾರ್ತಿಕ್, ತುಕಾಲಿ ಸಂತು ಪತ್ನಿ ಮಾನಸ ತಂತು, ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ, ‘ಸತ್ಯ’ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್‍, ಜ್ಯೂನಿಯರ್‍ ದರ್ಶನ್‍ ಎಂದು ಖ್ಯಾತಿ ಪಡೆದಿರುವ ಅವಿನಾಶ್‍, ರೈಡರ್‍ ಲೇಖಿ ಗೋಸ್ವಾಮಿ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ. ಇವೆಲ್ಲವೂ ಎಷ್ಟು ಜನ ನಿಜಕ್ಕೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಅಥವಾ ಎಷ್ಟು ಜನರ ಹೆಸರು ಸುಳ್ಳೇ ಕೇಳಿ ಬರುತ್ತಿದೆ ಎಂದು ಕಾರ್ಯಕ್ರಮ ಶುರುವಾದಾಗಲೇ ಗೊತ್ತಾಗಬೇಕು.

ಇನ್ನು, ಸೋಮವಾರ ಕಾರ್ಯಕ್ರಮದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್‍, ಯಾವುದೇ ಕಾರಣಕ್ಕೂ ಉದ್ಘಾಟನಾ ಕಾರ್ಯಕ್ರಮದವರೆಗೂ ತಮಗೆ ಸ್ಪರ್ಧಿಗಳ ಹೆಸರು ಹೇಳಬೇಡಿ ಎಂದು ಚಾನಲ್‍ನವರಿಗೆ ಹೇಳುತ್ತೇನೆ ಎಂದರು. ‘ಒಂದು ಪಕ್ಷ ಸ್ಪರ್ಧಿಗಳ ಹೆಸರುಗಳು ಲೀಕ್‍ ಆದರೆ, ನನ್ನಿಂದ ಆಗಿರಬಹುದು ಎಂದು ಅವರಿಗೆ ಅನ್ನಿಸಬಾರದು. ಹಾಗಾಗಿ, ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸುತ್ತಿದ್ದಾರೆ ಎಂಬ ವಿಷಯಗಳನ್ನು ನಾನು ತಿಳಿದುಕೊಳ್ಳುವುದಕ್ಕೆ ಹೋಗುವುದಿಲ್ಲ. ಉದ್ಘಾಟನಾ ದಿನದಂದೇ ನೇರವಾಗಿ ತಿಳಿದುಕೊಳ್ಳುತ್ತೇನೆ’ ಎಂದರು.

ಭೂಮಿಕಾ

Recent Posts

ದೆಹಲಿಯಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್‌ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತ ಎರಡನೇ ದಿನವೂ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ…

9 hours ago

ರಾಜ್ಯದಲ್ಲಿ ಮತ್ತಷ್ಟು ತಗ್ಗಲಿದೆ ಮಳೆ: ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ…

11 hours ago

ನೇಪಾಳಕ್ಕೆ ಮತ್ತೆ ವಿನಾಶಕಾರಿ ಪ್ರವಾಹದ ಎಚ್ಚರಿಕೆ

ಕಠ್ಮಂಡು: ನೇಪಾಳಕ್ಕೆ ಮತ್ತೆ ವಿನಾಶಕಾರಿ ಪ್ರವಾಹದ ಆತಂಕ ಎದುರಾಗಿದೆ. ದಾರ್ಚುಲಾ ಜಿಲ್ಲೆಯ ಅಪಿ ಹಿಮಾಲ್ ಗ್ರಾಮೀಣ ಪುರಸಭೆಯ ಭಟ್ಟಾರ್ ಪ್ರದೇಶದಲ್ಲಿ…

11 hours ago

ಓದುಗರ ಪತ್ರ: ಸಚಿವರಿಬ್ಬರ ಹೇಳಿಕೆಗಳು ‘ಲಕ್ಷ್ಮಣರೇಖೆ’ ಮೀರದಿರಲಿ

ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎನ್.ಚಲುವರಾಯ ಸ್ವಾಮಿಯವರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳು…

17 hours ago

ಓದುಗರ ಪತ್ರ: ‘ಸಂಧ್ಯಾ ಕಿರಣ’ ಯೋಜನೆಯ ವ್ಯಾಪ್ತಿಗೆ ವಯೋನಿಗದಿ ಬೇಡ

ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ…

17 hours ago

ಓದುಗರ ಪತ್ರ: ಗುರು-ಶಿಷ್ಯರ ಸಂಬಂಧ ವರ್ಣನಾತೀತ

ನಮ್ಮಲ್ಲಿ ಗುರುವಿಗೆ ಅಗ್ರಸ್ಥಾನ ಕೊಟ್ಟಿದ್ದೇವೆ. ಒಂದು ಅಕ್ಷರ ಕಲಿಸಿದವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. ಗುರುವು ನಮಗೆ ಒಳ್ಳೆಯ ಮಾರ್ಗ,ನಡತೆ ಹಾಗೂ ಜ್ಞಾನವನ್ನು…

17 hours ago