ಮೈಸೂರು: ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ನಿವಾಸದಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ನವ ಜೋಡಿಗಳು ಹಳದಿ ಶಾಸ್ತ್ರದಲ್ಲಿ ಮಿಂಚಿದ್ದಾರೆ.
ಧನಂಜಯ್ ಮತ್ತು ಧನ್ಯತಾ ಅವರ ಹಳದಿ ಶಾಸ್ತ್ರ ಶುಕ್ರವಾರ ಶ್ರೀರಂಗಪಟ್ಟಣದಲ್ಲಿ ಅದ್ದೂರಿಯಾಗಿ ನಡೆದಿದ್ದು ಕುಟುಂಬದವರು, ನಟ, ನಟಿಯರು, ಹಾಗೂ ಸ್ನೇಹಿತರು ಆಗಮಿಸಿ ಶುಭ ಕೋರಿದ್ದಾರೆ. ಅಲ್ಲದೇ ಈ ಹಳದಿ ಶಾಸ್ತ್ರಕ್ಕೆ ಜರ್ಮನಿಯ ರಂಗ ನಿರ್ದೇಶಕ ಕ್ರಿಸ್ಟೆನ್ ಭಾಗವಹಿಸಿದ್ದು ಸಹ ವಿಶೇಷವಾಗಿತ್ತು.
ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಇಂದು(ಫೆಬ್ರವರಿ.15) ನಟ ಮತ್ತು ಡಾಕ್ಟರ್ ಜೋಡಿಯ ಆರತಕ್ಷತೆ ನಡೆಯಲಿದೆ. ಇಂದು ಬೆಳಿಗ್ಗೆಯಿಂದಲೇ ಮದುವೆಗೆ ಸಂಬಂಧಪಟ್ಟ ಎಲ್ಲಾ ಶಾಸ್ತ್ರಗಳು ನಡೆಯಲಿವೆ. ಇನ್ನು ಸಂಜೆ 6 ಗಂಟೆಯ ನಂತರ ಆರಕ್ಷತೆ ಕಾರ್ಯಕ್ರಮ ಇರಲಿದೆ.
ನಾಳೆ(ಫೆಬ್ರವರಿ.16) ಬೆಳಿಗ್ಗೆ ಧಾರಾ ಮುಹೂರ್ತ ನಡೆಯಲಿದೆ. ಆರಕ್ಷತೆಗೆ ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ರಂಗದ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ.
ಗೋಣಿಕೊಪ್ಪ: ಪಟ್ಟಣದಲ್ಲಿ ಇಂದು ಸಂಜೆ ವೇಳೆಗೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಧಾರಾಕಾರ ಮಳೆಗೆ ಶಾಲಾ-ಕಾಲೇಜುಗಳ ಮೈದಾನಗಳು ಕೆರೆಯಂತಾಗಿದ್ದು, ಮಕ್ಕಳು…
ಬೆಂಗಳೂರು: ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಈ ಮೊದಲು ನಿಗದಿಗೊಳಿಸಿದ್ದ ಸಿಇಟಿ ಕನ್ನಡ ಪರೀಕ್ಷೆಯನ್ನು ಏಪ್ರಿಲ್.18ಕ್ಕೆ ಬದಲಾಗಿ ಏಪ್ರಿಲ್.15ರಂದೇ…
ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶ್ಯಾಂಪು ಬಳಕೆಗೆ ನಿಷೇಧ ವಿಧಿಸಲಾಗಿದೆ. ಅಂತರಗಂಗೆಯ 500…
ಮಡಿಕೇರಿ: ಫ್ರೆಂಡ್ಸ್ ಹುಲಿತಾಳ ಇವರ ವತಿಯಿಂದ ಪ್ರಥಮ ವರ್ಷದ ಹುಳಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ಮಾರ್ಚ್ 21,22,23ರಂದು ಮಡಿಕೇರಿಯ…
ಬೆಂಗಳೂರು: 1942ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು. ನೀವು ಬ್ರಿಟಿಷರ ಏಜೆಂಟರು ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಈ…
ಪಿರಿಯಾಪಟ್ಟಣ: ನಿತ್ಯ ಮನೆ ಕೆಲಸ, ಕೃಷಿ ಕೆಲಸದಲ್ಲಿಯೇ ಸಂಪೂರ್ಣ ಸಮಯ ಕಳೆಯುತ್ತಿದ್ದ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮಕ್ಕಳಂತೆ ಸಂಭ್ರಮಿಸಿದ್ದಾರೆ.…