ಮನರಂಜನೆ

ಜ್ಯೂನಿಯರ್ NTR ಹುಟ್ಟುಹಬ್ಬಕ್ಕೆ ‘ವಾರ್ 2’ ಚಿತ್ರ ತಂಡದ ಉಡುಗೊರೆ

ತೆಲುಗಿನ ಹಲವು ಜನಪ್ರಿಯ ನಟರು ಬಾಲಿವುಡ್‍ನಲ್ಲಿ ಹೀರೋಗಳಾಗಿ ನಟಿಸಿದ್ದಾರೆ. ಚಿರಂಜೀವಿ, ನಾಗಾರ್ಜುನ, ವೆಂಕಟೇಶ್‍, ರಾಮ್‍ಚರಣ್‍ ತೇಜ, ಪ್ರಭಾಸ್‍ ಮುಂತಾದವರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಈ ಪೈಕಿ ಸೋಲು ಕಂಡವರೇ ಹೆಚ್ಚು. ಈಗ ಜ್ಯೂನಿಯರ್ NTR ಸಹ ಬಾಲಿವುಡ್‍ಗೆ ಕಾಲಿಟ್ಟಿದ್ದಾರೆ. ಹೃತಿಕ್‍ ರೋಶನ್‍ ಜೊತೆಗೆ ‘ವಾರ್ 2’ ಚಿತ್ರದಲ್ಲಿ ನಟಿಸಿದ್ದಾರೆ.

‘ವಾರ್ 2’ ಚಿತ್ರವು ಯಶ್‍ ರಾಜ್‍ ಫಿಲಂಸ್‍ ಸ್ಪೈ ಯೂನಿವರ್ಸ್‍ನ ಹೊಸ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಹೃತಿಕ್‍ ರೋಶನ್‍, ರಾ ಏಜೆಂಟ್‍ ಕಬೀರ್ ಆಗಿ ತಮ್ಮ ಪಾತ್ರವನ್ನು ಮುಂದುವರೆಸಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಇನ್ನು, ಅವರೆದುರು ವಿಲನ್‍ ಆಗಿ ಜ್ಯೂನಿಯರ್ NTR ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

‘ವಾರ್ 2’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿವೆ. ಚಿತ್ರವು ಆಗಸ್ಟ್.14ರಂದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಈ ಮಧ್ಯೆ, ಮಂಗಳವಾರ ಜ್ಯೂನಿಯರ್ NTR ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ‘ವಾರ್ 2’ ಚಿತ್ರದ ಟೀಸರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ.

‘ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ಆದರೆ, ಸದ್ಯದಲ್ಲೇ ಗೊತ್ತಾಗಲಿದೆ. ಗೆಟ್‍ ರೆಡಿ ಫಾರ್ ಮೋರ್…’ ಎಂದು ಜ್ಯೂನಿಯರ್ NTR ಸಂಭಾಷಣೆ ಹೇಳಿಕೊಂಡು ಎಂಟ್ರಿ ಕೊಡುತ್ತಾರೆ. ಅವರ ಮತ್ತು ಹೃತಿಕ್‍ ರೋಶನ್‍ ಅಭಿನಯದ ಸಾಹಸಮಯ ದೃಶ್ಯಗಳು ಸಾಕಷ್ಟು ಕುತೂಹಲ ಮೂಡಿಸುತ್ತವೆ. ಇದೊಂದು ಸ್ಪೈ ಚಿತ್ರವಾಗಿದ್ದು, ಯಶ್‍ರಾಜ್‍ ಫಿಲಂಸ್‍ ಸಂಸ್ಥೆಯು ಈ ಹಿಂದೆ ‘ಟೈಗರ್’, ‘ಪಠಾಣ್‍’, ‘ವಾರ್’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.

‘ವಾರ್ 2’ ಚಿತ್ರವನ್ನು ಅಯಾನ್ ‍ಮುಖರ್ಜಿ ನಿರ್ದೇಶನ ಮಾಡಿದ್ದು, ಆದಿತ್ಯ ಜೋಪ್ರಾ ನಿರ್ಮಿಸಿದ್ದಾರೆ. ಜೊತೆಗೆ ಕಥೆಯನ್ನು ಸಹ ರಚಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಖಾಸಗಿ ಶಾಲೆಗಳಿಂದ ಶುಲ್ಕ ಏರಿಕೆ: ಮಧ್ಯಮ ವರ್ಗದ ಪೋಷಕರಿಗೆ ಸಂಕಷ್ಟ

ಬೆಂಗಳೂರು: ಖಾಸಗಿ ಶಾಲೆಗಳು ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026-27ನೇ ಸಾಲಿನ ಶುಲ್ಕವನ್ನು 5-10%, ಮತ್ತೆ ಕೆಲವು 10-15% ವರೆಗೆ ಏರಿಕೆ ಮಾಡಿವೆ.…

39 seconds ago

ಬೂದಿಪಡಗ ಆನೆ ಶಿಬಿರದಿಂದ 63 ವರ್ಷದ ಗಜೇಂದ್ರ ಆನೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ

ಬೆಂಗಳೂರು: ಚಾಮರಾಜನಗರ ಜಿಲ್ಲೆ ಬೂದಿಪಡಗ ಆನೆ ಶಿಬಿರದಲ್ಲಿ ಒಂಟಿಯಾಗಿದ್ದ 63 ವರ್ಷದ ಗಜೇಂದ್ರ ಆನೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ…

7 mins ago

ಡಿಜಿಟಲ್‌ ಪಾವತಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಆರ್‌ಬಿಐ

ನವದೆಹಲಿ: ಡಿಜಿಟಲ್‌ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಹಾಗೂ ವಂಚನೆಗಳನ್ನು ತಡೆಯುವ ಉದ್ದೇಸದಿಂದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೊಸ ಮಾರ್ಗಸೂಚಿ…

16 mins ago

ನಾಳೆ ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಭೇಟಿ

ತುಮಕೂರು: ನಾಳೆ(ಏಪ್ರಿಲ್.‌1ರಂದು) ತ್ರಿವಿಧ ದಾಸೋಹಿ, ಶತಾಯುಷಿ ಸಿದ್ಧಗಂಗಾ ಮಠದ ಶಿವೈಕ್ಯ ಶಿವಕುಮಾರ ಸ್ವಾಮೀಜಿಗಳ 119ನೇ ಜನ್ಮದಿನೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಈ…

41 mins ago

ಹಾಸನ: ಹೆತ್ತ ತಾಯಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ ಮಗ: ಕಾರಣ ಇಷ್ಟೇ

ಹಾಸನ: 40 ವರ್ಷವಾದರೂ ತನಗೆ ಮದುವೆ ಮಾಡಿಸಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ…

53 mins ago

ಮಳೆಗಾಲ ಸಮೀಪಿಸುತ್ತಿದ್ದಂತೆ ಎಚ್ಚೆತ್ತ ಅರಮನೆ ಆಡಳಿತ ಮಂಡಳಿ: ಕೋಟೆ ದುರಸ್ತಿ ಕಾರ್ಯ ಪ್ರಗತಿಯಲ್ಲಿ

ಮೈಸೂರು: ಮಳೆಗಾಲ ಸಮೀಪಿಸುತ್ತಿದ್ದಂತೆ ಮೈಸೂರು ಅರಮನೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಅರಮನೆ ಸುತ್ತ ಇರುವ ಕೋಟೆಯ ದುರಸ್ತಿಯನ್ನು ಕಾರ್ಯ ಕೈಗೊಂಡಿದೆ.…

2 hours ago