ಮನರಂಜನೆ

‘ಮಹಾರಾಜ’ ಚಿತ್ರಕ್ಕೆ ವಿಜಯ್‍ ಸೇತುಪತಿ ತೆಗೆದುಕೊಂಡ ಸಂಭಾವನೆ ಎಷ್ಟು?

ವಿಜಯ್‍ ಸೇತುಪತಿ ಅಭಿನಯದ ತಮಿಳು ಚಿತ್ರ ‘ಮಹಾರಾಜ’, ಜೂನ್‍ 14ರಂದು ಬಿಡುಗಡೆಯಾಗಿ ಸೂಪರ್‍ ಹಿಟ್ ಆಗಿದೆ. ಸೋತು ಸುಣ್ಣವಾಗಿದ್ದ ತಮಿಳು ಚಿತ್ರರಂಗಕ್ಕೆ ಆಕ್ಸಿಜನ್ ನೀಡಿದೆ. ಚಿತ್ರವು 100 ಕೋಟಿ ರೂ. ಗಳಿಕೆ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ.

ಎಲ್ಲಾ ಸರಿ, ಈ ಚಿತ್ರಕ್ಕೆ ನಾಯಕ ವಿಜಯ್‍ ಸೇತುಪತಿ ತೆಗೆದುಕೊಂಡ ಸಂಭಾವನೆ ಎಷ್ಟು? ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಚಿತ್ರಕ್ಕೆ ವಿಜಯ್ ಸೇತುಪತಿ ಒಂದು ರೂಪಾಯಿ ಸಹ ಸಂಭಾವನೆ ಪಡೆದಿಲ್ಲವಂತೆ.

ಹೌದು, ಮೂಲಗಳ ಪ್ರಕಾರ, ಚಿತ್ರಕ್ಕೆ 20 ಕೋಟಿ ರೂ. ಬಜೆಟ್‍ ಎತ್ತಿಡಲಾಗಿತ್ತಂತೆ. ಅಷ್ಟರಲ್ಲಿ ಮುಗಿಸುವ ಅಗತ್ಯವಿದ್ದರಿಂದ, ವಿಜಯ್‍ ಸೇತುಪತಿ ಯಾವುದೇ ಸಂಭಾವನೆ ಪಡೆದಿಲ್ಲವಂತೆ. ಏಕೆಂದರೆ, ಈ ಕಥೆ ಕೇಳಿ ವಿಜಯ್‍ ಸೇತುಪತಿ ಬಹಳ ಖುಷಿಯಾಗಿದ್ದರು. ಈ ಚಿತ್ರವು ತನ್ನ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್‍ ನೀಡಬಹುದು ಎಂದು ನಂಬಿದ್ದರು. ಚಿತ್ರದ ಬಜೆಟ್‍ 20 ಕೋಟಿ ಆದರೆ, ಅವರು ಚಿತ್ರವೊಂದಕ್ಕ ಪಡೆಯುವ ಸಂಭಾವನೆಯೇ 18 ಕೋಟಿಯಷ್ಟಿದೆ. ಅವರಿಗೇ 18 ಕೋಟಿ ಕೊಟ್ಟರೆ, ಚಿತ್ರ ಮಾಡುವುದಾದರೂ ಹೇಗೆ? ಅದೇ ಕಾರಣಕ್ಕೆ ಅವರು ಚಿತ್ರಕ್ಕೆ ಯಾವುದೇ ಸಂಭಾವನೆ ಸ್ವೀಕರಿಸಲಿಲ್ಲವಂತೆ. ಅದರ ಬದಲು, ಚಿತ್ರ ಗೆದ್ದರೆ ಬರುವ ಲಾಭದಲ್ಲಿ ಪರ್ಸಂಟೇಜ್ ಕೇಳಿದ್ದರಂತೆ.

ಹಾಗೆ ನೋಡಿದರೆ, ಇದರಿಂದ ಅವರಿಗೆ ಒಳ್ಳೆಯದೇ ಆಗಿದೆ. ಏಕೆಂದರೆ, ಬರೀ ಸಂಭಾವನೆ ಪಡೆದಿದ್ದರೆ, ಸಣ್ಣ ಮೊತ್ತ ಸಿಗುತ್ತಿತ್ತೇನೋ, ಈಗ ಚಿತ್ರ 100 ಕೋಟಿ ರೂ. ಗಳಿಕೆ ಮಾಡಿರುವುದರಿಂದ, ವಿಜಯ್‍ ಸೇತುಪತಿ ತಮ್ಮ ಸಂಭಾವನೆಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ, ಇದು ವಿಜಯ್‍ ಸೇತುಪತಿ ಅಭಿನಯದ ಈ ವರ್ಷದ ಎರಡನೇ ಯಶಸ್ವಿ ಚಿತ್ರ. ಇದಕ್ಕೂ ಮೊದಲು ವರ್ಷದ ಆರಂಭದಲ್ಲಿ ಬಿಡುಗಡೆಯಾದ ವಿಜಯ್ ಸೇತುಪತಿ ಅಭಿನಯದ ‘ಮೆರ್ರಿ ಕ್ರಿಸ್ಮಸ್‍’ ಸಹ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಈಗ ‘ಮಹಾರಾಜ’ ಚಿತ್ರ ಸಹ ಯಶಸ್ವಿಯಾಗಿದೆ. ಈ ಚಿತ್ರದ ಇದೀಗ ನೆಟ್‍ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ.

ಈ ಚಿತ್ರವನ್ನು ವೀಕ್ಷಿಸಿರುವ ಬಾಲಿವುಡ್‍ ನಟ ಆಮೀರ್ ಖಾನ್‍, ಚಿತ್ರದ ರೀಮೇಕ್ ಹಕ್ಕುಗಳನ್ನು ಖರೀದಿಸಿದ್ದು, ಅದನ್ನು ಹಿಂದಿಯಲ್ಲಿ ಮಾಡುವ ನಿರೀಕ್ಷೆ ಇದೆ.

ಭೂಮಿಕಾ

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

4 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

8 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

8 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

8 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

8 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

8 hours ago