ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರ ‘ಮಹಾರಾಜ’, ಜೂನ್ 14ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಸೋತು ಸುಣ್ಣವಾಗಿದ್ದ ತಮಿಳು ಚಿತ್ರರಂಗಕ್ಕೆ ಆಕ್ಸಿಜನ್ ನೀಡಿದೆ. ಚಿತ್ರವು 100 ಕೋಟಿ ರೂ. ಗಳಿಕೆ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ.
ಎಲ್ಲಾ ಸರಿ, ಈ ಚಿತ್ರಕ್ಕೆ ನಾಯಕ ವಿಜಯ್ ಸೇತುಪತಿ ತೆಗೆದುಕೊಂಡ ಸಂಭಾವನೆ ಎಷ್ಟು? ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಚಿತ್ರಕ್ಕೆ ವಿಜಯ್ ಸೇತುಪತಿ ಒಂದು ರೂಪಾಯಿ ಸಹ ಸಂಭಾವನೆ ಪಡೆದಿಲ್ಲವಂತೆ.
ಹೌದು, ಮೂಲಗಳ ಪ್ರಕಾರ, ಚಿತ್ರಕ್ಕೆ 20 ಕೋಟಿ ರೂ. ಬಜೆಟ್ ಎತ್ತಿಡಲಾಗಿತ್ತಂತೆ. ಅಷ್ಟರಲ್ಲಿ ಮುಗಿಸುವ ಅಗತ್ಯವಿದ್ದರಿಂದ, ವಿಜಯ್ ಸೇತುಪತಿ ಯಾವುದೇ ಸಂಭಾವನೆ ಪಡೆದಿಲ್ಲವಂತೆ. ಏಕೆಂದರೆ, ಈ ಕಥೆ ಕೇಳಿ ವಿಜಯ್ ಸೇತುಪತಿ ಬಹಳ ಖುಷಿಯಾಗಿದ್ದರು. ಈ ಚಿತ್ರವು ತನ್ನ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಬಹುದು ಎಂದು ನಂಬಿದ್ದರು. ಚಿತ್ರದ ಬಜೆಟ್ 20 ಕೋಟಿ ಆದರೆ, ಅವರು ಚಿತ್ರವೊಂದಕ್ಕ ಪಡೆಯುವ ಸಂಭಾವನೆಯೇ 18 ಕೋಟಿಯಷ್ಟಿದೆ. ಅವರಿಗೇ 18 ಕೋಟಿ ಕೊಟ್ಟರೆ, ಚಿತ್ರ ಮಾಡುವುದಾದರೂ ಹೇಗೆ? ಅದೇ ಕಾರಣಕ್ಕೆ ಅವರು ಚಿತ್ರಕ್ಕೆ ಯಾವುದೇ ಸಂಭಾವನೆ ಸ್ವೀಕರಿಸಲಿಲ್ಲವಂತೆ. ಅದರ ಬದಲು, ಚಿತ್ರ ಗೆದ್ದರೆ ಬರುವ ಲಾಭದಲ್ಲಿ ಪರ್ಸಂಟೇಜ್ ಕೇಳಿದ್ದರಂತೆ.
ಹಾಗೆ ನೋಡಿದರೆ, ಇದರಿಂದ ಅವರಿಗೆ ಒಳ್ಳೆಯದೇ ಆಗಿದೆ. ಏಕೆಂದರೆ, ಬರೀ ಸಂಭಾವನೆ ಪಡೆದಿದ್ದರೆ, ಸಣ್ಣ ಮೊತ್ತ ಸಿಗುತ್ತಿತ್ತೇನೋ, ಈಗ ಚಿತ್ರ 100 ಕೋಟಿ ರೂ. ಗಳಿಕೆ ಮಾಡಿರುವುದರಿಂದ, ವಿಜಯ್ ಸೇತುಪತಿ ತಮ್ಮ ಸಂಭಾವನೆಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಇದು ವಿಜಯ್ ಸೇತುಪತಿ ಅಭಿನಯದ ಈ ವರ್ಷದ ಎರಡನೇ ಯಶಸ್ವಿ ಚಿತ್ರ. ಇದಕ್ಕೂ ಮೊದಲು ವರ್ಷದ ಆರಂಭದಲ್ಲಿ ಬಿಡುಗಡೆಯಾದ ವಿಜಯ್ ಸೇತುಪತಿ ಅಭಿನಯದ ‘ಮೆರ್ರಿ ಕ್ರಿಸ್ಮಸ್’ ಸಹ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಈಗ ‘ಮಹಾರಾಜ’ ಚಿತ್ರ ಸಹ ಯಶಸ್ವಿಯಾಗಿದೆ. ಈ ಚಿತ್ರದ ಇದೀಗ ನೆಟ್‍ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ.
ಈ ಚಿತ್ರವನ್ನು ವೀಕ್ಷಿಸಿರುವ ಬಾಲಿವುಡ್ ನಟ ಆಮೀರ್ ಖಾನ್, ಚಿತ್ರದ ರೀಮೇಕ್ ಹಕ್ಕುಗಳನ್ನು ಖರೀದಿಸಿದ್ದು, ಅದನ್ನು ಹಿಂದಿಯಲ್ಲಿ ಮಾಡುವ ನಿರೀಕ್ಷೆ ಇದೆ.
ನವದೆಹಲಿ: ಲೋಕಸಭೆಯಲ್ಲಿ ವಿ-ಬಿಜಿ ರಾಮ್ ಜಿ ಮಸೂದೆ ಅಂಗೀಕಾರಗೊಂಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇಂದು ಲೋಕಸಭೆಯು ರೋಜ್‌ಗಾರ್ ಮತ್ತು ಅಜೀವಿಕಾ…
ಬೆಳಗಾವಿ: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಳೇ ದರೋಡೆ, ಕಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಬೇಲಿಯೇ ಎದ್ದು…
ಬೆಂಗಳೂರು: ಪಾರಿವಾಳದ ಮಲ-ಮೂತ್ರದಿಂದ ಸೋಂಕು, ಉಸಿರಾಟದ ತೊಂದರೆಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು…
ಕಾರವಾರ: ಪತ್ನಿ ಕಿಡ್ನ್ಯಾಪ್ ಮಾಡಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ನಿರ್ಮಾಪಕ ಹರ್ಷವರ್ಧನ್ ಇದೀಗ ಮನೆಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ…
ಶಿವಮೊಗ್ಗ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವುದಾಗಿ ದೂರು ನೀಡಿ ಬಂಧಿತನಾಗಿದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯ ಈಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಚಿನ್ನಯ್ಯನಿಗೆ…
ರಾಮನಗರ: ರಾಮನಗರದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಎಸಗಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಕಾಸ್, ಪ್ರಶಾಂತ್, ಚೇತನ್…